Friday, 16th November 2018  

Vijayavani

Breaking News

ಮಾಡು ಇಲ್ಲವೇ ಮಡಿ ಸ್ಥಿತಿಯ ಚುನಾವಣಾ ಅಖಾಡ

Wednesday, 28.03.2018, 3:04 AM       No Comments

ಬೆಂಗಳೂರು: ರಾಜಕೀಯ ಪಕ್ಷಗಳಿಗೆ ಶಾಕ್ ನೀಡುವ ರೀತಿಯಲ್ಲಿ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ರಾಜ್ಯದಲ್ಲಿ ಸಿದ್ಧವಾಗಿರುವ ಅಖಾಡದಲ್ಲಿ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಯಲ್ಲಿಯೇ ಮೂರು ಪ್ರಮುಖ ಪಕ್ಷಗಳು ಯುದ್ಧಕಾಂಡಕ್ಕೆ ಅಣಿಯಾಗುತ್ತಿವೆ.

ನಿರೀಕ್ಷೆಗಿಂತ ಹತ್ತು ದಿನಗಳ ಮೊದಲೇ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎಲ್ಲ ಪಕ್ಷ ಏಪ್ರಿಲ್ ಮೊದಲ ವಾರದಲ್ಲಿ ಅಧಿಸೂಚನೆಯ ನಿರೀಕ್ಷೆ ಇಟ್ಟುಕೊಂಡೇ ಸಿದ್ಧತೆಯನ್ನು ನಡೆಸಿದ್ದವು. ರಾಜ್ಯದಲ್ಲಿ ಅಧಿಕಾರ ಗಳಿಸುವುದು 3 ಪ್ರಮುಖ ರಾಜಕೀಯ ಪಕ್ಷಗಳ ಪಾಲಿಗೂ ಅನಿವಾರ್ಯವಾಗಿದೆ. ಪಕ್ಷ ಅಧಿಕಾರದ ಗದ್ದುಗೆ ಏರಿದರೆ ಮಾತ್ರ ಪಕ್ಷ ಹಾಗೂ ತಮಗೆ ಉಳಿಗಾಲವೆಂಬುದನ್ನು ಅರಿತೇ ಕಳೆದ ಕೆಲ ತಿಂಗಳಿ ನಿಂದ ಮತದಾರರನ್ನು ಸೆಳೆಯುವ ಕಸರತ್ತು ನಡೆಸಿವೆ.

ಅರ್ಧದಷ್ಟು ಮುಗಿದಿದೆ ಸಿದ್ಧತೆ: ಆಡಳಿತಾರೂಢ ಕಾಂಗ್ರೆಸ್, ಅಧಿಕೃತ ಪ್ರತಿಪಕ್ಷ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಚುನಾವಣೆಯ ಸಿದ್ಧತೆಯನ್ನು ಶೇ.60 ಮುಗಿಸಿಕೊಂಡಿವೆ. ಒಂದು ಬಾರಿ ಮತದಾರರನ್ನು ತಲುಪುವ ಕಾರ್ಯವೂ ಮುಗಿದಿದೆ. ಆದರೆ ಉಳಿದ ಶೇ.40 ಕೆಲಸವೇ ಬಹಳ ಪ್ರಮುಖ ಘಟ್ಟ.

 

Leave a Reply

Your email address will not be published. Required fields are marked *

Back To Top