More

    ಕರ್ಮ ಎಂಬ ಬಿಡಲಾರದ ನಂಟು| ಧ್ರುವನು ನಕ್ಷತ್ರಗಳಿಗೆ ಒಡೆಯನಾದುದು ಹೇಗೆ?!

    ಭಗವಂತನನ್ನು ಪ್ರತ್ಯಕ್ಷಿಸಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕೆ ಸ್ವಪ್ರಜ್ಞೆಯ ಸಂಪೂರ್ಣ ತಪಸ್ಸು ಅಗತ್ಯ. ನಿರಾಕಾರದಲ್ಲಿ ಕರ್ಮ ಎಂಬ ಬಿಡಲಾರದ ನಂಟು| ಧ್ರುವನು ನಕ್ಷತ್ರಗಳಿಗೆ ಒಡೆಯನಾದುದು ಹೇಗೆ?!ಬ್ರಹ್ಮನನ್ನು ಕಾಣಲು ಉಚ್ಚಮಟ್ಟದ ಸಾಧನೆ ಬೇಕಾಗುವುದು. ಅದಕ್ಕೆ ಸಮಾಜದಲ್ಲಿ ಸಿದ್ಧಿ ಪಡೆದವರ ಮಾರ್ಗದರ್ಶನವೂ ಬೇಕಾಗುವುದು. ಶಾಸ್ತ್ರಮಾರ್ಗಗಳ ಒಪ್ಪಿಗೆ ಮತ್ತು ಪಥದರ್ಶನ ಅವಶ್ಯ. ನಿರಾಕಾರಕ್ಕಿಂತ ಸುಲಭವಾದುದು ಸಾಕಾರದ ಆರಾಧನೆ. ಮೂರ್ತಿಯ ಆರಾಧನೆಯಲ್ಲಿ ಎಷ್ಟು ಏಕಾಗ್ರವಾಗುತ್ತೇವೋ ಅಷ್ಟು ಫಲವು ಸಿಗುತ್ತದೆ.

    ಆಕಾರವನ್ನು ಸ್ಥಾಪಿಸಲು ಶಿಲ್ಪಕಲೆಯಿಂದ ಶಾಸ್ತ್ರದವರೆಗಿನ ಚೌಕಟ್ಟು ಬೇಕು. ಎಲ್ಲೆಂದರಲ್ಲಿ ದೇವರನ್ನು ಪ್ರತಿಷ್ಠಾಪಿಸುವಂತಿಲ್ಲ. ಹಾಗೆ ಪ್ರತಿಷ್ಠಾಪಿಸಿದರೆ ಅದೊಂದು ಭವ್ಯವಾದ ಶಿಲ್ಪಾಕೃತಿ ಆಗಬಹುದು. ಪ್ರಕೃತಿಯಲ್ಲಿ ನಿಬ್ಬೆರಗಾಗುವ ಪ್ರೇಕ್ಷಣೀಯ ಸ್ಥಳವಾಗಬಹುದು. ಆದುದರಿಂದ ಕಾಯಾ ವಾಚಾ ಮನಸಾ ತ್ರಿಕರಣ ಶುದ್ಧಿಯಿಂದ ನಮ್ಮನ್ನು ಉದ್ಧರಿಸುವ ಮೂರ್ತಿಸ್ಥಾಪನೆಯಾಗಬೇಕು. ಅದಕ್ಕೆ ಬೇಕಾದ ಪರಿಕರಗಳನ್ನು ಪವಿತ್ರಗೊಳಿಸಿಕೊಳ್ಳಬೇಕು. ಹಾಕುವ ವಸ್ತ್ರವನ್ನು ನೀರಿನಿಂದ ತೊಳೆದರೆ ಅದು ಕೊಳೆಯನ್ನಷ್ಟು ಬಿಟ್ಟೀತು. ಸ್ವಚ್ಛವಾಗಿ ಕಂಡೀತು. ಶುಭ್ರತೆಯೇ ಶುದ್ಧಿಯಲ್ಲ! ದೇಹದ ಕೊಳೆಯನ್ನು ನಿವಾರಿಸಿಕೊಳ್ಳಲು ಸ್ನಾನ ಮಾಡಿದರೆ ಸಾಲದು. ದೇಹವನ್ನು ಪುನಃ ಮಂತ್ರಗಳಿಂದ ಶುದ್ಧಿಯನ್ನು ಮಾಡಬೇಕು.

    ಹೇಗೆ ದೇವರ ಪೂಜೆಯನ್ನು ಮಾಡಬೇಕಾದರೆ ಘಂಟಾರ್ಚನೆ, ಗುರುವಂದನೆ, ಕುಲದೇವರು-ಸ್ಥಳದೇವರು-ಹೆಬ್ಬಾಗಿಲ ಪೂಜೆ, ತಂದೆ-ತಾಯಿ ಸ್ಮರಣೆ, ಗೋತ್ರಸ್ಮರಣೆ, ಗೃಹದ್ವಾರ ಪೂಜೆ, ಸಂಕಲ್ಪ, ಯಾವ ಧಾರ್ವಿುಕ ಕಾರ್ಯವನ್ನು ಮಾಡಬೇಕಾದರೂ, ಗಣಹವನ, ಗಣಪತಿ ಕಥೆ, ವಿನಾಯಕ ಶಾಂತಿ ಮುಂತಾದ ಗಣಪತಿ ಸಂಬಂಧದ ಕಾರ್ಯವಿರಲಿ ಮೊದಲು ಗಣಪತಿ ಪೂಜೆಯನ್ನು ಮಾಡಬೇಕು. ನಂತರ ಭೂಶುದ್ಧಿ, ಭೂತೋತ್ಸಾರಣ, ಆಸನಶುದ್ಧಿ, ಶಿಖಾಬಂಧ, ದಿಗ್ಬಂಧ, ಭೂತಶುದ್ಧಿ, ಮಂತ್ರನ್ಯಾಸ, ಕಲಶಾರ್ಚನ, ಶಂಖಾರ್ಚನ, ಆತ್ಮಾರ್ಚನ, ಮಂಟಪಾರ್ಚನೆ, ದ್ವಾರಪಾಲ ಪೂಜೆ, ಪೀಠಪೂಜೆ, ಭೂಪೂಜೆ ಮಾಡಿದ ನಂತರವೇ ದೇವರ ಪೂಜೆಯನ್ನು ಮಾಡಬೇಕು. ಇವುಗಳ ಹಿನ್ನೆಲೆಯೆಂದರೆ ಉಪಯೋಗಿಸುವ ಪ್ರತಿಯೊಂದೂ ಶುದ್ಧವಾಗಿರಬೇಕು. ಶುದ್ಧತೆಯನ್ನು ತಂದು ಕೊಡಬೇಕು.

    ಈಡೇರದ ಬೇಡಿಕೆಯನ್ನು ಬೇಡಿಕೊಳ್ಳಲು, ಕೊರತೆಯೆನಿಸದ ಕಾಮನೆಗಳನ್ನು ಸಂಗ್ರಹಿಸಲು, ಮನದಲ್ಲಿ ಬಂದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಇವರೆಲ್ಲರೂ ಭಗವಂತನನ್ನು ಆರಾಧಿಸುವರು. ಉದ್ದೇಶ ಒಂದೇ – ದೇವರನ್ನೇ ಮೊರೆಹೋಗುವುದು. ದೇವರನ್ನೇ ಸ್ಮರಿಸುವುದು. ದೇವರ ಕಡೆಯೇ ಲಕ್ಷ್ಯವನ್ನು ನೀಡುವುದು. ದೇವರಲ್ಲಿಯೇ ಲೀನವಾಗುವುದು. ನಂದಿಯ ಮಹತ್ವ ಅವರ್ಣನೀಯ. ಶಿವನ ದರ್ಶನ ಮಾಡಲು ಶಿವಾಲಯಕ್ಕೆ ಹೋಗುವ ಮೊದಲು ನಂದಿಯ ದರ್ಶನವನ್ನು ಮಾಡುವರು. ಇವನು ಶಿವನ ಪ್ರಮಥಗಣಗಳ ಮುಖಂಡ. ಗಮನಿಸಿದ್ದೀರಾ? ನಂದಿಯು ಶಿವನನ್ನೇ ನೋಡುತ್ತಿರುತ್ತಾನೆ. ಅವನ ಪೃಷ್ಠಭಾಗ ಪ್ರಪಂಚವನ್ನು ನೋಡುತ್ತಿರುತ್ತದೆ. ಭಕ್ತನು ಪ್ರಪಂಚದ ಕಡೆಗೆ ಬೆನ್ನು ಮಾಡಿ, ಪರಮಾತ್ಮನ ಕಡೆಗೆ ಮುಖಮಾಡಬೇಕು. ಮನೆಯ ದೇವರ ಪೂಜೆಯನ್ನು ಎಷ್ಟು ಶುದ್ಧತೆಯಿಂದ ನೆರವೇರಿಸುವರೋ ಹಾಗೆಯೇ ದೇವಸ್ಥಾನವನ್ನೂ ಶುದ್ಧ ಹೃದಯದಿಂದ ಕಟ್ಟಬೇಕು. ಅದಕ್ಕೆ ಅದರದೇ ಆದ ನೀತಿ-ನಿಯಮ, ಆಚರಣೆ ಇರುವುದು.

    ‘ಎಲೈ ಅರ್ಜುನ! ಆರ್ತ, ಜಿಜ್ಞಾಸು, ಅರ್ಥಾರ್ಥಿ, ಜ್ಞಾನಿ ಎಂಬ ನಾಲ್ಕು ಬಗೆಯ ಪುಣ್ಯಶೀಲರಾದ ಜನರು ನನ್ನನ್ನು ಭಜಿಸುತ್ತಾರೆ’ (ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋರ್ಜುನ| ಆತೋ ಜಿಜ್ಞಾಸುರರ್ಥಾರ್ಥೀ ಜ್ಞಾನಿ ಚ ಭರತರ್ಷಭ || 7-16) ಎನ್ನುತ್ತಾನೆ ಶ್ರೀಕೃಷ್ಣ. ಸಂಕಟಕ್ಕೆ ಸಿಕ್ಕು ದೀನನಾದವನು ಆರ್ತ. ಭಗವತ್ತತ್ತ್ವವನ್ನು ತಿಳಿದುಕೊಳ್ಳಲು ಇಚ್ಛಿಸುತ್ತಿರುವವನು ಜಿಜ್ಞಾಸು. ಧನವನ್ನು ಬಯಸುವವನು ಅರ್ಥಾರ್ಥಿ. ದೇವತ್ವವನ್ನು ಬಲ್ಲವನು ಜ್ಞಾನಿ. ಇವರೆಲ್ಲರೂ ಉತ್ಕೃಷ್ಟರೇ. ಆದರೆ ಜ್ಞಾನಿಯು ನನ್ನ ಆತ್ಮನೇ ಎಂದು ನನ್ನ ಮತ. ಈ ನಾಲ್ಕು ಭಕ್ತರಲ್ಲಿ ಜ್ಞಾನಿಗೆ ನಾನೇ ಪ್ರಿಯನು. ನನಗೂ ಜ್ಞಾನಿಯೇ ಪ್ರಿಯನು. ಬಹುಜನ್ಮಗಳ ಕೊನೆಯಲ್ಲಿ ಜ್ಞಾನವಂತನಾಗಿ ವಾಸುದೇವಃ ಸರ್ವಂ ಇತಿ ಎಂದು ನನ್ನನ್ನು ಸೇರುವನು. ಅಂತಹ ಮಹಾತ್ಮನು ಅತ್ಯಂತ ದುರ್ಲಭನು. ಆಯಾಯ ಕಾಮಗಳಿಂದ ಅಪಹರಿಲ್ಪಟ್ಟ ಜ್ಞಾನವುಳ್ಳವರು ಆಯಾಯ ನಿಯಮವನ್ನು ಅನುಸರಿಸಿ ತಮ್ಮ ಸ್ವಭಾವದಿಂದ ನಿಯಂತ್ರಿತರಾಗಿ ಬೇರೆ ದೇವತೆಗಳನ್ನು ನೆನೆಯುತ್ತಾರೆ. ಯಾವ ಭಕ್ತನು ಯಾವ-ಯಾವ ದೇವತಾಮೂರ್ತಿಯನ್ನು ಶ್ರದ್ಧೆಯಿಂದ ಪೂಜಿಸಲು ಇಚ್ಛಿಸುವನೋ, ಅವನವನಿಗೆ ಅದೇ ಅಚಲವಾದ ಶ್ರದ್ಧೆಯನ್ನು ನಾನು ಕೊಡುವೆನು. ಅವನು ಆ ಶ್ರದ್ಧೆಯಿಂದ ಕೂಡಿದವನಾಗಿ ಆ ದೇವತೆಯ ಆರಾಧನೆಯನ್ನು ಮಾಡುತ್ತಾನೆ ಮತ್ತು ಅದರಿಂದ ನನ್ನಿಂದಲೇ ವಿಹಿತವಾದ ಅವನ ಕಾಮನೆಗಳನ್ನು ಪಡೆಯುತ್ತಾನೆ. ಆದರೆ ಅಲ್ಪಬುದ್ಧಿಯುಳ್ಳ ಅವರಿಗೆ ಆ ಫಲವು ನಾಶವುಳ್ಳದ್ದಾಗಿರುವುದು ಎಂದು ತಿಳಿಯುವುದೇ ಇಲ್ಲ. ಬೇರೆ ದೇವತೆಗಳನ್ನು ಆರಾಧಿಸುವವರು ಬೇರೆ ದೇವತೆಗಳನ್ನು ಹೊಂದುತ್ತಾರೆ. ನನ್ನ ಭಕ್ತರು ನನ್ನನ್ನೇ ಹೊಂದುವರು ಎನ್ನುತ್ತಾನೆ ಶ್ರೀಕೃಷ್ಣ. ಧ್ರುವನು ಉತ್ಥಾನಪಾದ ಹಾಗೂ ಸುನೀತಿಯ ಮಗ. ಒಮ್ಮೆ ಉತ್ಥಾನಪಾದನು ರಾಜಸಭೆಯಲ್ಲಿ ಎರಡನೆಯ ಪತ್ನಿ ಸುರುಚಿಯ ಮಗನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿದ್ದನು. ಅದೇ ವೇಳೆ ಧ್ರುವನು ತನ್ನನ್ನೂ ತೊಡೆಯ ಮೇಲೆ ಏರಿಸಿಕೊಳ್ಳಲು ಹಟ ಹಿಡಿದ. ಆಗ ಆತನನ್ನು ತಿರಸ್ಕರಿಸುತ್ತಾ ಸುನೀತಿ ಹೇಳಿದಳು, ‘ತಪಸ್ಸು ಮಾಡಿ, ದೇವರ ಅನುಗ್ರಹವನ್ನು ಪಡೆದು ನನ್ನ ಹೊಟ್ಟೆಯಲ್ಲಿ ಹುಟ್ಟಿ ಬಾ. ನಿನಗೂ ನನ್ನ ಮಗನ ಜತೆ ಕೂರಲು ಸಾಧ್ಯ.’ ಈ ಮಾತಿನಿಂದ ತುಂಬ ನೊಂದ ಧ್ರುವನು ತಪಸ್ಸು ಮಾಡಿ ಪರಮಾತ್ಮನ ಅನುಗ್ರಹವನ್ನು ಪಡೆದನು. ನಕ್ಷತ್ರಗಳಿಗೇ ಒಡೆಯನಾದನು. ಧ್ರುವನ ಮದರ್ಥ ಕರ್ಮವು ತದರ್ಥ ಕರ್ಮವಾಯಿತು. ಸಕಾಮ ಬುದ್ಧಿಯ ಜೀವಿತವು ವಿಷ್ಣುವಿನ ದರ್ಶನವಾಗುತ್ತಲೇ ನಿಷ್ಕಾಮವಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts