ಮುಂಬೈ: ( sanjay kapoor) ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರ ಮಾಜಿ ಪತಿ ಹಾಗೂ ಖ್ಯಾತ ಉದ್ಯಮಿ ಸಂಜಯ್ ಕಪೂರ್ ಅವರು 53ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನವಾಗಿದ್ದಾರೆ.
ಸಂಜಯ್ ಕಪೂರ್ (53) ಅವರು ಪೊಲೋ ಗೇಮ್ನ ಆಡುತ್ತಿದ್ದರು. ಈ ವೇಳೆ ಅವರಿಗೆ ಅನಾರೋಗ್ಯ ಉಂಟಾಗಿದೆ. ಆ ಬಳಿಕ ಹೃದಯಾಘಾತದಿಂದ ಅವರು ಇಂಗ್ಲೆಂಡ್ನಲ್ಲಿ ಮೃತಪಟ್ಟಿದ್ದಾರೆ.
ಸಂಜಯ್ ಕಪೂರ್ ಅವರು ಹಲವು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಸೋನಾ ಕಾಮ್ಸ್ಟಾರ್ ಕಂಪನಿಗೆ ಅವರು ಅಧ್ಯಕ್ಷರಾಗಿದ್ದಾರೆ. ಸಂಜಯ್ಗೆ ಕರೀಷ್ಮಾ ಜೊತೆ ಇಬ್ಬರು ಮಕ್ಕಳು ಹಾಗೂ ಎರಡನೇ ಪತ್ನಿ ಪ್ರಿಯಾ ಜೊತೆ ಒಂದು ಮಗು ಹೊಂದಿದ್ದಾರೆ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.
ಸಂಜಯ್ ಹಾಗೂ ಹಿಂದಿ ನಟಿ ಕರೀಷ್ಮಾ 2003ರಲ್ಲಿ ವಿವಾಹ ಆದರು. ಇವರು 2016ರ ಜೂನ್ ತಿಂಗಳಲ್ಲಿ ಬೇರೆ ಆದರು. ದೆಹಲಿ ಹೈಕೋರ್ಟ್ನಲ್ಲಿ ಇವರು 2005ರಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಕೋರಲಾಗಿತ್ತು. 2010ರಲ್ಲಿ ಕರೀಷ್ಮಾ ಅವರು ಸಂಜಯ್ ಮನೆಯಿಂದ ನಡೆದರು.