More

    ಚಿತಾಭಸ್ಮವನ್ನು ಶಿಂಗೋ ನದಿಯಲ್ಲಿ ವಿಸರ್ಜಿಸಿ ಕಾರ್ಗಿಲ್ ಯುದ್ಧವೀರನ ಕೊನೆಯ ಆಸೆಯನ್ನು ಪೂರೈಸಿದ ಮಗಳು

    ನವದೆಹಲಿ:  ನಿವೃತ್ತ ಯೋಧ ಬ್ರಿಗೇಡಿಯರ್ ಶಸಿಕಾಂತ್ ವಾಸವಾಡ ಅವರ ಕೊನೆಯ ಆಸೆಯನ್ನು ಪೂರೈಸಲು, ಅವರ ಮಗಳು 12 ಸಾವಿರ ಕಿ.ಮೀ. ಪ್ರಯಾಣಿಸಿ ತಂದೆಯ ಚಿತಾಭಸ್ಮವನ್ನು ಶಿಂಗೋ ನದಿಯಲ್ಲಿ ವಿಸರ್ಜಿಸಿದ್ದಾರೆ.

    ತಂದೆಯ ಕೊನೆಯ ಆಸೆಯನ್ನು ಈಡೇರಿಸಲು ಶಸಿಕಾಂತ್ ವಾಸವಾಡ ಅವರ ಮಗಳು ಅಮೆರಿಕಾದಿಂದ ಜಮ್ಮು ಕಾಶ್ಮೀರದ ಕಾರ್ಗಿಲ್‌ಗೆ ಬಂದರು. ತನ್ನ ತಂದೆ ಹೋರಾಡಿದ ಕಾರ್ಗಿಲ್ ಮಣ್ಣಿಗೆ ಗೌರವ ಸಲ್ಲಿಸಿದಳು. ಬಳಿಕ ತಂದೆಯ ಚಿತಾಭಸ್ಮವನ್ನು ಕಾರ್ಗಿಲ್‌ನ ಶಿಂಗೋ ನದಿಯಲ್ಲಿ ವಿಸರ್ಜಿಸಲಾಯಿತು. ಅವರ ಅಂತಿಮ ಸಂಸ್ಕಾರ ವಿದೇಶದಲ್ಲಿ ನಡೆದರೂ, ಅವರ ಚಿತಾಭಸ್ಮವನ್ನು ಶೌರ್ಯಗಾಥಾ ಬರೆದ ಮಣ್ಣಿನಲ್ಲಿ ಹೂಳಬೇಕು ಎಂದು ತಂದೆ ಶಶಿಕಾಂತ್ ಬಯಸಿದ್ದರು ಎಂದು ಹೇಳುತ್ತಾ ಕಣ್ಣೀರು ಸುರಿಸಿದ್ದಾರೆ.

    ಮೃತ ತಂದೆಯನ್ನು ನೆನಪಿಸಿಕೊಳ್ಳುತ್ತಾ, ಸೈನಿಕರು ಎಂದಿಗೂ ಸಾಯುವುದಿಲ್ಲ, ಅವರ ಖ್ಯಾತಿ ಮಾತ್ರ ಕಾಲಾನಂತರದಲ್ಲಿ ಮಸುಕಾಗುತ್ತದೆ ಎಂದು ಹೇಳಿದ್ದಾರೆ.

    ವೀರಯೋಧ ಶಶಿಕಾಂತ್ ವಾಸ್ದಾ 2023 ಜುಲೈ 11ರಂದು ಟೆಕ್ಸಾಸ್‌ನ ಸಿಬೊಲೊದಲ್ಲಿ ನಿಧನರಾದರು. ಅವರು 1933 ಜನವರಿ 1ರಂದು ಭಾರತದಲ್ಲಿ ಜನಿಸಿದರು. ನಿವೃತ್ತಿಯ ನಂತರ, ಕುಟುಂಬವು ಟೆಕ್ಸಾಸ್‌ನಲ್ಲಿ ನೆಲೆಸಿತು. 9 1971 ರ ಯುದ್ಧದಲ್ಲಿ ಕಾರ್ಯಾಚರಣೆಯ ಸಮಯದಲ್ಲಿ JAK LI ಎರಡನೇ ಕಮಾಂಡ್ ಆಗಿದ್ದರು. 1971 ರ ಯುದ್ಧದ ಸಮಯದಲ್ಲಿ ಕಾರ್ಗಿಲ್ ಪಟ್ಟಣದ ಎದುರಿನ ಆಯಕಟ್ಟಿನ ಪ್ರಮುಖ PT 13620 ಅನ್ನು ವಶಪಡಿಸಿಕೊಳ್ಳುವಲ್ಲಿ ಶ್ರೀಕಾಂತ್ ಪ್ರಮುಖ ಪಾತ್ರ ವಹಿಸಿದ್ದರು. 1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯಿತು. ಪೂರ್ವ ಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) ಸುಮಾರು 30 ಲಕ್ಷ ಜನರನ್ನು ಪಾಕಿಸ್ತಾನ ಕಗ್ಗೊಲೆ ಮಾಡಿದೆ ಎಂದು ಹೇಳಲಾಗಿದೆ. 14 ದಿನಗಳ ಈ ಯುದ್ಧದಲ್ಲಿ 93 ಸಾವಿರ ಪಾಕಿಸ್ತಾನಿ ಸೈನಿಕರು ಭಾರತೀಯ ಸೇನೆಗೆ ಶರಣಾದರು. ಈ ಯುದ್ಧದಲ್ಲಿ ಭಾರತೀಯ ನೌಕಾಪಡೆಯು ತನ್ನ ಅದಮ್ಯ ಧೈರ್ಯವನ್ನು ಪ್ರದರ್ಶಿಸಿತು.

    ಚಂದ್ರಯಾನ-3 ಉಡಾವಣೆ ವೇಳೆ ಕೌಂಟ್​ಡೌನ್​ ಧ್ವನಿ ನೀಡಿದ್ದ ISRO ವಿಜ್ಞಾನಿ ಹೃದಯಾಘಾತದಿಂದ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts