Friday, 16th November 2018  

Vijayavani

Breaking News

ಅಟಲ್​ಗೆ ರಕ್ತದ ಪತ್ರ ಬರೆದಿದ್ದ ರಂಭಾಪುರಿ ಶ್ರೀ

Friday, 17.08.2018, 7:19 PM       No Comments

ಬಾಳೆಹೊನ್ನೂರು: ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ 1999ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಮ್ಮ ರಕ್ತದಲ್ಲಿ ‘ನಾವು ನಿಮ್ಮೊಂದಿಗಿದ್ದೇವೆ’ ಎಂದು ಪತ್ರ ಬರೆದು ಸ್ಥೈರ್ಯ ತುಂಬಿದ್ದನ್ನು ರಂಭಾಪುರಿ ಜಗದ್ಗುರುಗಳು ನೆನಪಿಸಿಕೊಂಡಿದ್ದಾರೆ.

ಕಾರ್ಗಿಲ್ ಯುದ್ಧ ನಡೆಯುತ್ತಿದ್ದಾಗ ಪ್ರಧಾನಿ ಮೂಲಕ ಭಾರತೀಯ ಸೈನಿಕರಿಗೆ ಸ್ಥೈರ್ಯ ತುಂಬಲು ರಂಭಾಪುರಿ ಶ್ರೀಗಳು ಪತ್ರ ಬರೆದಿದ್ದರು. 10 ರೂ. ಛಾಪಾ ಕಾಗದದಲ್ಲಿ ತಮ್ಮ ರಕ್ತದಲ್ಲಿ ಪತ್ರ ಬರೆದು ಶ್ರೀಗಳು 21-6-1999ರಲ್ಲಿ ಅಂದಿನ ಪ್ರಧಾನಿ ಅಟಲ್​ಜೀಗೆ ಕಳಿಸಿದ್ದರು. ಈ ಪತ್ರಕ್ಕೆ ಸ್ವತಃ ಅಟಲ್ ಜೀ ಅವರೇ ಪ್ರತಿಕ್ರಿಯಿಸಿದ್ದರು ಎಂದು ಹೇಳುತ್ತಾರೆ ಜಗದ್ಗುರುಗಳು.

ಪತ್ರದ ಸಾರಾಂಶ

ಭಾರತದ ಔದಾರ್ಯ ಹಾಗೂ ಧರ್ಮ ನಿರಪೇಕ್ಷಣಾ ಭಾವನೆಯನ್ನು ಪಾಕಿಸ್ತಾನ ಅರಿತುಕೊಳ್ಳಲಿ. ಸದಾ ಶಾಂತಿ ಬಯಸುವ ಭಾರತ ಸಮಯ ಬಂದಾಗ ಹೋರಾಟಕ್ಕೂ ಹಿಂಜಯರಿಯದು ಎಂಬುದಕ್ಕೆ ಈ ಮೊದಲು ನಡೆದ ಹೋರಾಟಗಳೇ ಸಾಕ್ಷಿ. ಭಾರತದ ಮುತ್ಸದ್ದಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜತೆಗೆ ಇಡೀ ರಾಷ್ಟ್ರದ ಜನರಿದ್ದಾರೆ. ಪಾಕಿಸ್ತಾನ ತಪ್ಪೊಪ್ಪಿಕೊಂಡು ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವಂತಾಗಲಿ.

ಭಾರತೀಯ ವೀರಯೋಧರ ದಿಟ್ಟತನ ಮೆಚ್ಚುವಂಥದ್ದು. ತಾಯ್ನಾಡಿನ ಸಂರಕ್ಷಣೆಗಾಗಿ ಅನೇಕ ಯೋಧರು ವೀರ ಮರಣ ಅಪ್ಪಿದ್ದಾರೆ. ಅವರ ದೇಶಾಭಿಮಾನವನ್ನು ಯಾರೂ ಮರೆಯುವಂತಿಲ್ಲ. ಈಗ ಹೋರಾಟ ನಡೆಸುತ್ತಿರುವ ಎಲ್ಲ ಭಾರತೀಯ ಸೈನಿಕರಿಗೆ ಧೈರ್ಯ, ಸ್ಥೈರ್ಯ ತುಂಬಿ ಪ್ರೇರೇಪಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ರಂಭಾಪುರಿ ಜಗದ್ಗುರುಗಳು ಉಲ್ಲೇಖಿಸಿದ್ದರು.

Leave a Reply

Your email address will not be published. Required fields are marked *

Back To Top