ಕಿಕ್ಕೇರಿ: ಪ್ರಾಚೀನ ಇತಿಹಾಸವಿರುವ ಕನ್ನಡ ಭಾಷೆ ಉಳಿಯಲು ಕರವೇ ಕಾರ್ಯಕರ್ತರ ಹೋರಾಟ ಸಹಕಾರಿಯಾಗಿದೆ ಎಂದು ಗ್ರಾಪಂ. ಸದಸ್ಯ ಎಸ್.ಕೆ. ಬಾಲಕೃಷ್ಣ ಹೇಳಿದರು.
ಇಲ್ಲಿನ ಹೊಸ ಬಸ್‌ನಿಲ್ದಾಣ ಬಳಿ ಕರವೇ ಕಾರ್ಯಕರ್ತರು ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಮನೆ, ಮನದ ಭಾಷೆಯಾದಾಗ ಮಾತ್ರ ನಾಡು, ನುಡಿ ಎಲ್ಲವೂ ಗಟ್ಟಿಯಾಗಲಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ವಲಸಿಗರೇ ಹೆಚ್ಚಾಗಿದ್ದಾರೆ. ಸಮಸ್ಯೆ ಉಲ್ಭಣಿಸುವ ಮುನ್ನ ಎಚ್ಚೆತ್ತು ಕನ್ನಡಿಗರು ಬಿಹಾರಿಗಳಂತೆ ಶ್ರಮಿಕ ಕೆಲಸಕ್ಕೆ ಮುಂದಾಗಬೇಕಿದೆ ಎಂದರು.
ಕರವೇ ಜಿಲ್ಲಾ ಉಪಾಧ್ಯಕ್ಷ ಸಾಸಲು ಗುರುಮೂರ್ತಿ ಮಾತನಾಡಿದರು. ಕರವೇ ವತಿಯಿಂದ ನೂತನವಾಗಿ ಧ್ವಜಸ್ತಂಭ ನಿರ್ಮಿಸಿ ಕನ್ನಡ ಧ್ವಜಾರೋಹಣ ಮಾಡಲಾಯಿತು. ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜೈಕಾರ ಹಾಕಿ ಸಿಹಿ ಹಂಚಲಾಯಿತು.
ಕರವೇ ಹೋಬಳಿ ಅಧ್ಯಕ್ಷ ಸೊಳ್ಳೇಪುರ ಸುರೇಶ್, ಮೊಟ್ಟೆಮಂಜು, ಕೆ.ಬಿ. ಶೇಖರ್, ಐಕನಹಳ್ಳಿ ಕೃಷ್ಣೇಗೌಡ, ರಾಮೇಗೌಡ, ಮುರಳೀಧರ್, ಸಿದ್ದಿಖ್ ಪಾಷ, ರೇವಣ್ಣ, ವಡಕಹಳ್ಳಿ ಶಿವು, ಮೊಬೈಲ್ ಆನಂದ್, ಮಾದಿಹಳ್ಳಿ ಚೇತನ್, ಕಾಂತರಾಜು, ಸತೀಶ್, ಪುಟ್ಟರಾಜು, ಜಗನ್ನಾಥ್, ಶ್ರೀಕಾಂತ್, ಪ್ರದೀಪ್, ನಾಗರಾಜು, ರಾಮಲಿಂಗು, ಜಿಮ್ಮಿ, ಯುಗಂಧರ್, ಪ್ರಕಾಶ್ ಇತರರು ಇದ್ದರು.