ಕಾರಟಗಿ: ಪಟ್ಟಣದ ಪುರಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಚುನಾವಣಾಕಾರಿ ಮಲ್ಲಿಕಾರ್ಜುನಗೆ ಮೂವರು ಆಕಾಂಕ್ಷಿಗಳು ಉಮೇದುವಾರಿಕೆ ಸಲ್ಲಿಸಿದರು.
21ನೇ ವಾರ್ಡ್ ಸದಸ್ಯ ರಾಮಣ್ಣ ನಿಧನರಾಗಿದ್ದು, ಈ ಸ್ಥಾನ ಭರ್ತಿ ಮಾಡಲು ಉಪ ಚುನಾವಣೆ ನಡೆಸಲು ಜಿಲ್ಲಾಕಾರಿ ನಲಿನ್ ಅತುಲ್ ಅಸೂಚನೆ ಹೊರಡಿಸಿದ್ದರು. ಬಿಜೆಪಿಯಿಂದ ಯಲ್ಲಪ್ಪ, ಪಕ್ಷೇತರರಾಗಿ ಗಾಳೆಮ್ಮ ರಾಮಣ್ಣ ಮತ್ತು ಕಾಂಗ್ರೆಸ್ ಆಕಾಂಕ್ಷಿ ಸುರೇಶ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಬ್ಬರದ ರೋಡ್ ಶೋ ಮೂಲಕ ಬಲ ಪ್ರದರ್ಶನ ಮಾಡಿ ನಾಮಪತ್ರ ಸಲ್ಲಿಸಿದರು. ಬಸವರಾಜ ರ‌್ಯಾವಳದ ಸಹ ಚುನಾವಣಾಕಾರಿಯಾಗಿ ಕಾರ್ಯ ನಿರ್ವಹಿಸಿದರು.
ನ.12ರಂದು ನಾಮಪತ್ರಗಳ ಪರಿಶೀಲನೆ, 14ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆ ದಿನವಾಗಿದೆ. ನ.23ರ ಬೆಳಗ್ಗೆ 7ರಿಂದ ಸಂಜೆ 5ಗಂಟೆವರೆಗೆ ಚುನಾವಣೆ ನಡೆಯಲಿದೆ. ಮರುಮತದಾನ ಅವಶ್ಯವಿದ್ದರೆ, ನ.25ರಂದು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಚುನಾವಣೆಗೆ ಸಂಬಂಸಿದಂತೆ ಅಸೂಚನೆ ಹೊರಡಿಸಲಾಗಿರುವುದರಿಂದ 21ನೇ ವಾರ್ಡ್‌ನಲ್ಲಿ ಲಿತಾಂಶ ಪ್ರಕಟವಾಗುವ ದಿನದವರೆಗೂ ನೀತಿ ಸಂಹಿತೆ ಜಾರಿಯಲ್ಲಿದೆ.
ನ.26ರಂದು ತಾಲೂಕು ಕೇಂದ್ರದಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಕೇವಲ ಒಂದೇ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಚುನಾವಣೆ ಕಾವು ಕಡಿಮೆಯಾಗಿದೆ. ಆದರೂ, ಶತಾಯ-ಗತಾಯ ಗೆಲುವು ದಾಖಲಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಆಕಾಂಕ್ಷಿಗಳು ತೆರೆಮರೆಯಲ್ಲಿ ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಬ್ಬ ಅಭ್ಯರ್ಥಿ ಕಣದಲ್ಲಿದ್ದು, ನ.14ರ ಬಳಿಕ ಅಂತಿಮವಾಗಿ ಯಾರು ಚುನಾವಣಾ ಕಣದಲ್ಲಿ ಉಳಿಯಲಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ.