More

    ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಂಜೀವಿನಿ ಆಸರೆ: ಜಿಪಂ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಅಭಿಮತ

    ಕಾರಟಗಿ: ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಸಂಜೀವಿನಿ ಯೋಜನೆ ಸಹಕಾರಿಯಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಹೇಳಿದರು. ಬೇವಿನಾಳ ಗ್ರಾಪಂ ವ್ಯಾಪ್ತಿಯಲ್ಲಿ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ನಿರ್ಮಿಸಿದ ನರ್ಸರಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

    ಗ್ರಾಮೀಣ ಪ್ರದೇಶದ ಮಹಿಳೆಯರ ಬದುಕನ್ನು ಸುಸ್ತಿರಗೊಳಿಸಲು ಮತ್ತು ಸ್ವಾವಲಂಬಿಯಾಗಲು ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ಸಾಲಸೌಲಭ್ಯ ನೀಡಲಾಗಿದೆ. ಇದರಿಂದ ಸ್ವಸಹಾಯ ಗುಂಪುಗಳು ಅನೇಕ ಸಣ್ಣ ಉದ್ಯಮಗಳನ್ನು ಕಂಡುಕೊಂಡಿದ್ದು ಗ್ರಾಮೀಣ ಪ್ರದೇಶ ಹಾಗೂ ಪಟ್ಟಣಗಳಲ್ಲಿ ವ್ಯಾಪಾರ-ವಹಿವಾಟು ನಡೆಸುತ್ತಿವೆ. ನಿತ್ಯ ಉದ್ಯೋಗದ ಜತೆಗೆ ಆದಾಯ ವೃದ್ಧಿಯಾಗುತ್ತಿದೆ. ಇಲ್ಲಿನ ನರ್ಸರಿ ಇತರರಿಗೂ ಮಾದರಿಯಾಗಿದೆ. ಸ್ವಸಹಾಯ ಗುಂಪಿನ ಮಹಿಳೆಯರು ಉತ್ತಮವಾಗಿ ನರ್ಸರಿ ನಿರ್ವಹಿಸುವಂತೆ ಸೂಚಿಸಿದರು.

    ತಾಪಂ ಇಒ ಡಾ.ಡಿ.ಮೋಹನ್ ಮಾತನಾಡಿ, ಸ್ವಸಹಾಯ ಗುಂಪಿನಿಂದ ನಿರ್ಮಿಸಿದ ನರ್ಸರಿಯಲ್ಲಿ ಹೂ, ಹಣ್ಣು ಸೇರಿದಂತೆ ಕೃಷಿಕರಿಗೂ ಅನುಕೂಲವಾಗುವ ತರಹೇವಾರಿ ಸಸಿಗಳನ್ನು ಇಟ್ಟಿರುವುದು ಒಳ್ಳೆಯ ಬೆಳವಣಿಗೆ. ನರ್ಸರಿ ಕುರಿತು ವ್ಯಾಪಕ ಪ್ರಚಾರ ನಡೆಸಬೇಕು ಎಂದು ತಿಳಿಸಿದರು.

    ಜೆಜೆಎಂ ಕಾಮಗಾರಿ ಪರಿಶೀಲನೆ: ಸಿದ್ದಾಪುರ, ಗುಂಡೂರುಕ್ಯಾಂಪ್, ಕಾಮಗುಂಡಮ್ಮನಕ್ಯಾಂಪ್, ಹುಳ್ಕಿಹಾಳ, ನಾಗನಕಲ್ ಹಾಗೂ ಬೇವಿನಾಳ ಗ್ರಾಮಗಳಲ್ಲಿ ಜೆಜೆಎಂ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ತಾಂತ್ರಿಕ ಸಂಯೋಜಕ ಅಕ್ಷಯ ಅರ್ಲೂರು, ಎನ್‌ಆರ್‌ಎಲ್‌ಎಂ ನೌಕರ ಪರಶುರಾಮ, ಸ್ವಸಹಾಯ ಸಂಘದ ಗಿರಿಜಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts