ಗುಣಮಟ್ಟದ ಶಿಕ್ಷಣಕ್ಕೆ ಗಮನಹರಿಸಿ- ಶಾಸಕ ಬಸವರಾಜ ದಢೇಸುಗೂರು ಸಲಹೆ

ಕಾರಟಗಿ: ಲಿತಾಂಶ ಪ್ರಮಾಣ ಹೆಚ್ಚಳ ನಿಟ್ಟಿನಲ್ಲಿ ಶಿಕ್ಷಕರು ಶ್ರಮವಹಿಸಬೇಕಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಗಮನಹರಿಸುವಂತೆ ಶಾಸಕ ಬಸವರಾಜ ದಢೇಸುಗೂರು ಸಲಹೆ ನೀಡಿದರು.

ಪಟ್ಟಣದ ಶ್ರೀ ಅಮ್ಮಮಹೇಶ್ವರಿ ಗಾರ್ಡನ್ ಹಾಲ್‌ನಲ್ಲಿ ತಾಲೂಕು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಗುರುಶ್ರೇಷ್ಠ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭವಿಷ್ಯತ್ವದ ಪ್ರಜೆಗಳನ್ನು ನಿರ್ಮಿಸುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಪ್ರಯೋಗಾತ್ಮಕ ಬೋಧನೆ ಮೂಲಕ ವಿದ್ಯಾರ್ಥಿಗಳನ್ನು ಸಾಧನೆ ಮುಖ್ಯವಾಹಿನಿಗೆ ತರಬೇಕಿದೆ. ಖಾಸಗಿ ಶಾಲೆಗಳ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯಸರ್ಕಾರ ಬದ್ಧವಾಗಿದ್ದು, ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗುವುದು ಎಂದರು.

ಒಕ್ಕೂಟದ ಅಧ್ಯಕ್ಷ ಬಸಪ್ಪ ಜಿ.ಅರಳಿ ಮಾತನಾಡಿ, ತಾಲೂಕಿನ 40ಕ್ಕೂ ಹೆಚ್ಚು ಶಾಲೆಗಳಿಗೆ ಸರ್ಕಾರದ ಅನುದಾನದಿಂದ ಗಣಕಯಂತ್ರ ವಿತರಿಸಬೇಕಿದೆ. ಶೈಕ್ಷಣಿಕ ಸಾಧನೆಯಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶ್ರಮ ಪ್ರಮುಖವಾಗಿದ್ದರೂ, ಅನುದಾನ ನೀಡುವ ವಿಚಾರದಲ್ಲಿ ಸರ್ಕಾರ ಇನ್ನೂ ಆಸಕ್ತಿವಹಿಸುತ್ತಿಲ್ಲ. ಖಾಸಗಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ನೆರವಾಗುವಂತೆ ಮನವಿ ಮಾಡಿದರು. ಒಕ್ಕೂಟ ವ್ಯಾಪ್ತಿಯ 40 ಶಾಲೆಗಳಲ್ಲಿನ ಶಿಕ್ಷಕರಿಗೆ ಗುರುಶ್ರೇಷ್ಠ ಪುರಸ್ಕಾರ ನೀಡಿ ಗೌರವಿಸಲಾಯಿತು. ಚಡಚಣ ಶ್ರೀ ಸಂಗಮೇಶ್ವರ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎಸ್.ದೇಸಾಯಿ ಉಪನ್ಯಾಸ ನಿಡಿದರು.

ಭಾವಚಿತ್ರ ಮೆರವಣಿಗೆ
ಇದಕ್ಕೂ ಮುನ್ನ ಡಾ.ಎಸ್.ರಾಧಕೃಷ್ಣನ್ ಮತ್ತು ಸಾವಿತ್ರಿಬಾಯಿ ುಲೆ, ಜ್ಯೋತಿರಾವ್ ುಲೆ ಭಾವಚಿತ್ರವನ್ನು ಶ್ರೀ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯಿಂದ ಗಾರ್ಡನ್ ಹಾಲ್ ವರಿಗೂ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.

ಅರಳಿಹಳ್ಳಿ ಬೃಹನ್ಮಠದ ಗವಿಸಿದ್ದಯ್ಯತಾತಾ ಸಾನ್ನಿಧ್ಯವಹಿಸಿದ್ದರು. ಒಕ್ಕೂಟದ ಬಳ್ಳಾರಿ ಜಿಲ್ಲಾಧ್ಯಕ್ಷ ಮರಿಸ್ವಾಮಿರೆಡ್ಡಿ, ಕಾರಟಗಿ ಘಟಕದ ಉಪಾಧ್ಯಕ್ಷ ರುದ್ರಪ್ಪ ಹಂಚಿನಾಳ್, ಕಾರ್ಯದರ್ಶಿ ಸೋಮನಾಥ ಎಸ್.ಹೆಬ್ಬಡದ, ಸಹಕಾರ್ಯದರ್ಶಿ ಶರಣಪ್ಪ ಎಸ್.ಹವಾಲ್ದಾರ್, ಕೋಶಾಧ್ಯಕ್ಷ ಶರಣಪ್ಪ ಅಂಗಡಿ, ಮುಖಂಡರಾದ ಜಗನ್ನಾಥ ಆಲ್ಲಂಪಲ್ಲಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸರ್ದಾರ್ ಅಲಿ ಇತರರಿದ್ದರು. ಪ್ರತಿನಿಧಿ ವಲ್ಕಂದಿನ್ನಿ ಸಿದ್ದು ನಿರ್ವಹಿಸಿದರು.

Leave a Reply

Your email address will not be published. Required fields are marked *