ಕಾರಟಗಿ: ತಾಲೂಕಿನ ಬೇವಿನಾಳ ಗ್ರಾಮಸ್ಥರು ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಇತ್ತೀಚೆಗೆ ಮಠಕ್ಕೆ ರೊಟ್ಟಿ ಮತ್ತು ಧಾನ್ಯಗಳನ್ನು ದೇಣಿಗೆಯಾಗಿ ನೀಡಿದರು.
ಗ್ರಾಮಸ್ಥ ಮಾನಪ್ಪ ಬಡಿಗೇರ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಮಠಕ್ಕೆ ದೇಣಿಗೆ ನೀಡಲಾಗುತ್ತಿದೆ. ಗ್ರಾಮಸ್ಥರು ಮಠಕ್ಕೆ ಕೈಲಾದ ಸೇವೆ ಮಾಡಿದ್ದಾರೆ. ಅನ್ನ, ಅಕ್ಷರ, ಆಶ್ರಯಕ್ಕೆ ಗವಿಮಠ ಹೆಸರುವಾಸಿಯಾಗಿದೆ. ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪಠ್ಯದ ಜತೆ ಮಾನವೀಯ ಮೌಲ್ಯಗಳನ್ನು ತಿಳಿಸುವ ಕೆಲಸವಾಗುತ್ತಿದೆ ಎಂದರು.
ಪ್ರಮುಖರಾದ ವಿರೇಶ್ ನಾಯಕ್, ಯಂಕೊಬ ಕುಂಬಾರ, ವೀರೇಶ್ ಹಿರೇಮಠ, ಯಂಕಣ್ಣ ಹೂಗಾರ, ಮುತ್ತು ತಳವಾರ, ಬಸವರಾಜ ಗೂನವಾರ ಇದ್ದರು.