25.9 C
Bengaluru
Wednesday, January 22, 2020

ಸವಾಲಿನ ಸುನಾಮಿ ಎದುರು ಗೆದ್ದ ಸರದಾರ

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...

ಬೆಂಗಳೂರು/ಶಿವಮೊಗ್ಗ: ಒಂದೆಡೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸುಳಿ, ಮತ್ತೊಂದೆಡೆ ಪಕ್ಷದೊಳಗಿನ ವಿರೋಧಿಗಳ ಕಾಲೆಳೆದಾಟ, ಕಷ್ಟ ಕೇಳಬೇಕಾದ ಹೈಕಮಾಂಡ್​ನ ದಿವ್ಯಮೌನ, ನಿರ್ಲಕ್ಷ್ಯ. ಇಂಥ ಪರಿಸ್ಥಿತಿಯಲ್ಲಿ ಅನರ್ಹ ಶಾಸಕರನ್ನು ಗೆಲ್ಲಿಸುವ ಅನಿವಾರ್ಯತೆ ಹೊಂದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಸವಾಲುಗಳನ್ನು ಏಕಾಂಗಿಯಾಗಿಯೇ ಎದುರಿಸಿ ಉಪಸಮರವನ್ನು ಗೆದ್ದು ಮತ್ತೊಮ್ಮೆ ಗೆಲುವಿನ ಸರದಾರನಾಗಿ ಹೊರಹೊಮ್ಮಿದ್ದಾರೆ.

15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ತಮ್ಮ ಶಕ್ತಿ, ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಗೆಲುವು ಪಕ್ಷದೊಳಗಿನ, ಹೊರಗಿನ ವಿರೋಧಿಗಳು, ಹಿತಶತ್ರುಗಳ ಬಾಯಿ ಮುಚ್ಚಿಸಿರುವುದು ಒಂದೆಡೆಯಾದರೆ, ಹೈಕಮಾಂಡ್ ಎದುರು ಮತ್ತಷ್ಟು ಬಲಾಢ್ಯರಾಗಿರುವುದು ಅಷ್ಟೇ ಸತ್ಯ. ಹಾಗೆಯೇ ರಾಜ್ಯದಲ್ಲಿ ಮೂರೂವರೆ ವರ್ಷ ಸ್ಥಿರ ಆಡಳಿತ ನೀಡುವ ಆಸೆಗೂ ಈ ಫಲಿತಾಂಶ ನೀರೆರೆದಿದೆ. ಬಿಎಸ್​ವೈ ಸಿಎಂ ಆಗಿ ಅಧಿಕಾರಕ್ಕೇರಿದಾಗ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆಗಳ ಸವಾಲು ಸರಣಿಯಾಗಿ ಕಾಡಿತು.

ಆದರೂ ಎದೆಗುಂದದ ಅವರು ಹೈಕಮಾಂಡ್​ನ ಅಸಹಕಾರದ ನಡುವೆಯೂ ಅನರ್ಹರನ್ನು ಸಂಭಾಳಿಸುತ್ತ, ಪಕ್ಷದೊಳಗಿನ ಸವಾಲುಗಳನ್ನು ಮೆಟ್ಟಿನಿಂತೇ ತಂತಿ ಮೇಲೆ ನಡಿಗೆ ಮುಂದುವರಿಸಿದರು. ಸಹನೆ ಮೀರಿ ಮಾತನಾಡಿದರೆ ಸರ್ಕಾರಕ್ಕೆ ಆಪತ್ತು ಎನ್ನುವ ಸ್ಥಿತಿಯನ್ನೂ ನಾಜೂಕಾಗಿ ದಾಟಿ ಬಂದಿದ್ದು ಅವರ ಕಡುವಿರೋಧಿಗಳಿಗೂ ಅಚ್ಚರಿ.

ತಮ್ಮನ್ನು ನಂಬಿ ಬಂದ ಅನರ್ಹರನ್ನು ಗೆಲ್ಲಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಚುನಾವಣೆ ಅಧಿಸೂಚನೆ ಹೊರಡಿಸಿದರೂ ಸುಪ್ರೀಂ ತೀರ್ಪು ಬಾರದೆ ಇದ್ದದ್ದು ಸಂಕಷ್ಟ ತಂದಿತ್ತು. ನಾಮಪತ್ರ ಸಲ್ಲಿಕೆಯ ಅಂತಿಮ ದಿನಗಳಲ್ಲಿ ಅನರ್ಹರ ಸ್ಪರ್ಧೆಗೆ ಸುಪ್ರೀಂ ಅವಕಾಶ ಮಾಡಿಕೊಟ್ಟ ಬಳಿಕವೇ ಯಡಿಯೂರಪ್ಪ ನಿರಾಳರಾದರು. ಆದರೆ ಪಕ್ಷದಲ್ಲಿ ಅನರ್ಹರಿಗೆ ಟಿಕೆಟ್ ಸಿಗುವುದೋ ಇಲ್ಲವೋ ಎಂಬ ಸ್ಥಿತಿ ಇತ್ತು. ಹೈಕಮಾಂಡ್ ಬಳಿಯಲ್ಲಿ ಮಾತು ಉಳಿಸುವಂತೆ ಅಕ್ಷರಶಃ ಬೇಡಿಕೊಂಡಿದ್ದರು. ಹೈಕಮಾಂಡ್ ಸಮ್ಮತಿಸಿದ ನಂತರ ಬಿಎಸ್​ವೈ ಸ್ವಲ್ಪ ನಿರಾಳರಾದರು.

ಪಕ್ಷದೊಳಗೂ ಸವಾಲು

ಅನರ್ಹರೆಲ್ಲರ ಪಕ್ಷ ಸೇರ್ಪಡೆ ಬಳಿಕ ಆಯಾ ಕ್ಷೇತ್ರಗಳಲ್ಲಿನ ಅಸಮಾಧಾನವನ್ನು ತಣಿಸಿ ಚುನಾವಣೆಗೆ ಟೀಂ ಸಿದ್ಧಪಡಿಸುವ ಪ್ರಮುಖ ಜವಾಬ್ದಾರಿಯೂ ಬಿಎಸ್​ವೈ ಹೆಗಲಿಗೇರಿತು. 14 ಅನರ್ಹರ ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿದ ವರಿಷ್ಠರು, ರೋಷನ್ ಬೇಗ್ ಸೇರ್ಪಡೆಗೆ ರೆಡ್ ಸಿಗ್ನಲ್ ನೀಡಿದ್ದು ಇರಿಸುಮುರುಸು ತಂದಿತು. ರಾಣೆಬೆನ್ನೂರಿನಲ್ಲಿ ಪಕ್ಷೇತರವಾಗಿ ಗೆದ್ದಿದ್ದ ಶಂಕರ್ ಮನವೊಲಿಸಿ ಕ್ಷೇತ್ರವನ್ನು ಬಿಡಿಸಿಕೊಂಡರೆ, ತಮಗೆ ಟಿಕೆಟ್ ಬೇಕು ಎಂದು ಹಠಕ್ಕೆ ಬಿದ್ದಿದ್ದ ಲಕ್ಷ್ಮಣ ಸವದಿಯನ್ನು ಸಮಾಧಾನಿಸಿದರು. ಆದರೆ, ಹೊಸಕೋಟೆಯಲ್ಲಿ ಬಿಜೆಪಿಗೆ ಸಡ್ಡು ಹೊಡೆದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಸಮಸ್ಯೆಯನ್ನು ಬಗೆಹರಿಸಲು ಸಿಎಂಗೆ ಸಾಧ್ಯವಾಗಲಿಲ್ಲ.

ಇನ್ನು ಬಿಎಸ್​ವೈ ಅಖಾಡದಲ್ಲಿ ಒಂದುಕ್ಷಣವೂ ವಿರಮಿಸಲಿಲ್ಲ. ಪಕ್ಷದ ರಾಜ್ಯಾಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷದ ತಂಡವನ್ನು ಕಟ್ಟಿ, ಪ್ರತಿ ಕ್ಷೇತ್ರಗಳಿಗೂ ಕಳಿಸಿದರು. ಪ್ರತಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಎರಡು ಮೂರು ಬಾರಿ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿದ್ದು, ಬಿಎಸ್​ವೈಗೆ ಭರ್ಜರಿ ಫಲವನ್ನೆ ತಂದಿದೆ.

ಕಾರ್ಯತಂತ್ರ ಬದಲು

ಅಂತಿಮ ಹಂತದಲ್ಲಿ ಚುನಾವಣಾ ಕಾರ್ಯತಂತ್ರಗಳಲ್ಲಿ ಬದಲಾವಣೆ ಮಾಡಿಕೊಂಡ ಬಿಎಸ್​ವೈ, ತಮ್ಮ ಸಮುದಾಯದ ಮತಗಳನ್ನು ಒಟ್ಟುಗೂಡಿಸಲು ಮುಂದಾದರು. ಲಿಂಗಾಯತ ವೀರಶೈವರ ಒಂದು ಮತವೂ ಅತ್ತಿತ್ತ ಹೋಗಬಾರದೆಂದು ತಮ್ಮ ಆಪ್ತ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಂದ ಇದಕ್ಕೆ ಪೂರಕ ಬ್ಯಾಟಿಂಗ್ ಮಾಡಿಸುವ ಮೂಲಕ ಸಮುದಾಯದ ವಿಶ್ವಾಸ ಗೆದ್ದರು.

ತಣ್ಣಗಾದ ಹೈಕಮಾಂಡ್

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಕಳೆದುಕೊಂಡ ಬಳಿಕ ರಾಜ್ಯದ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿದ್ದ ಧೋರಣೆಯೂ ಬದಲಾಗಿದ್ದು ಬಿಎಸ್​ವೈಗೆ ಅನುಕೂಲಕರ ವಾತಾವರಣ ಸೃಷ್ಟಿಸಿತು. ಸುಖಾಸುಮ್ಮನೆ ಸರ್ಕಾರವನ್ನು ಯಾಕೆ ಕಳೆದುಕೊಳ್ಳಬೇಕು ಎಂದು ನಿರ್ಧರಿಸಿದ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದೂ ಕೂಡ ಚುನಾವಣಾ ಫಲಿತಾಂಶ ಎರಡಂಕಿ ದಾಟಲು ಮೂಲ ಕಾರಣ.

ಹೀಗಾಗಿ ಅನರ್ಹರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದರು. ರಾಜೀನಾಮೆ ನೀಡಿದ ಶಾಸಕರಲ್ಲಿ ಅಭದ್ರತೆ ಮತ್ತು ಭಯ ಸೃಷ್ಟಿಯಾಗುವಂತೆ ಮಾಡಿದರು. ಎಲ್ಲ ಅನರ್ಹರಿಗೂ ಟಿಕೆಟ್ ಕೊಡಲಾಗುವುದು ಎಂದು ಯಡಿಯೂರಪ್ಪ ಹೇಳಿದರೆ, ಪಕ್ಷದಲ್ಲಿ ಅಂತಹ ಯಾವುದೇ ನಿರ್ಧಾರ ಆಗಿಲ್ಲ ಎಂಬ ಪ್ರತಿ ಹೇಳಿಕೆಗಳು ಬಂದವು.

ಪಕ್ಷದೊಳಗೆ ಸಾಕಷ್ಟು ವಿರೋಧದ ನಡುವೆಯೂ ಎಲ್ಲ ಅನರ್ಹ ಶಾಸಕರಿಗೆ ಟಿಕೆಟ್ ಕೊಡಿಸಲು ಸಫಲರಾದ ಯಡಿಯೂರಪ್ಪ, ಎಲ್ಲರನ್ನೂ ಗೆಲ್ಲಿಸಿಕೊಂಡು ಬರುವ ಹೊಣೆಯನ್ನೂ ತಾವೇ ಹೊತ್ತುಕೊಂಡರು. ಇದರ ಫಲವಾಗಿ ಬಿಜೆಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಖಾತೆ ತೆರೆಯಲು ಸಾಧ್ಯವಾಯಿತು.

ಬಂಗಾರಪ್ಪ ಮತ್ತು ಸಿಎಂ ಬಿಎಸ್​ವೈ

ಶಿವಮೊಗ್ಗ ಜಿಲ್ಲೆಯ ಇಬ್ಬರು ನಾಯಕರು ಹಠವಾದಿಗಳು. ವೈಯಕ್ತಿಕವಾಗಿ ಎಷ್ಟೇ ಕಷ್ಟವಾದರೂ ಹಿಡಿದ ಹಠ ಸಾಧಿಸುವ ಛಲ ಅವರದು. ಒಬ್ಬರು ಬಂಗಾರಪ್ಪ ಮತ್ತೊಬ್ಬರು ಬಿ.ಎಸ್.ಯಡಿಯೂರಪ್ಪ. ಇಬ್ಬರೂ ತಮ್ಮ ರಾಜಕೀಯ ಶಕ್ತಿ , ಸಾಮರ್ಥ್ಯ ಏನು ಎಂಬುದನ್ನು ಸಂದರ್ಭ ಬಂದಾಗಲೆಲ್ಲ ತೋರಿಸಿದ್ದಾರೆ. ಕಾರಣಾಂತರಗಳಿಂದ ಪಕ್ಷದಿಂದ ಹೊರಬಂದು ಬೇರೆ ಪಕ್ಷ ಕಟ್ಟಿದ ಸಂದರ್ಭಗಳಲ್ಲಿ ಹಾಗೂ ಪಕ್ಷದೊಳಗೇ ಪ್ರತಿಕೂಲ ಸನ್ನಿವೇಶಗಳಿದ್ದಾಗಲೂ ತಮ್ಮ ಶಕ್ತಿ, ಛಾತಿಯನ್ನು ಪ್ರದರ್ಶಿಸಿದ್ದು, ಈ ಇಬ್ಬರು ನಾಯಕರ ವಿಶೇಷ.

ಎಲ್ಲರಿಗೂ ಗೆಲುವು ಬೇಕಿರಲಿಲ್ಲ

ಹಾಗೆ ನೋಡಿದರೆ ಈ ಉಪಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಉಳಿಸಿಕೊಳ್ಳಲು ಅಗತ್ಯ ಸಂಖ್ಯೆಯ ಶಾಸಕರ ಗೆಲುವು ಪಕ್ಷದೊಳಗಿನ ಹಲವರಿಗೆ ಬೇಕಿರಲಿಲ್ಲ. ಯಡಿಯೂರಪ್ಪ ಉಳಿದ ಮೂರೂವರೆ ವರ್ಷ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಅವರಿಗೆ ಇಷ್ಟವಿರಲಿಲ್ಲ. ಮಧ್ಯಂತರ ಚುನಾವಣೆಗೆ ಹೋಗಬೇಕು. ಚುನಾವಣೆಯಲ್ಲಿ ಬಹುಮತ ಬಂದರೆ ಮತ್ತೊಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಬೇಕು ಎಂಬುದೇ ಈ ರಾಜಕೀಯ ತಂತ್ರಗಾರಿಕೆಯಾಗಿತ್ತು.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...