ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಕನ್ನಡಿಗ, ಭಾರತಕ್ಕೆ ಆರಂಭಿಕ ಗೆಲುವು

ವೋರ್ಸೆಸ್ಟರ್: 19 ವರ್ಷದೊಳಗಿನ ಏಕದಿನ ತ್ರಿಕೋನ ಸರಣಿ ಮೊದಲ ಪಂದ್ಯದಲ್ಲಿ ಕನ್ನಡಿಗ ವಿದ್ಯಾಧರ ಪಾಟೀಲ್​​​ ಅದ್ಭುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ನ್ಯೂ ರೋಡ್​​ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಪಂದ್ಯದಲ್ಲಿ ಭಾರತ ಪಡೆ ಉತ್ತಮ ಪ್ರದರ್ಶನ ತೋರುವ ಮೂಲಕ 5 ವಿಕೆಟ್​ಗಳ ಜಯ ದಾಖಲಿಸಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ​ ಮೊದಲ ಬಾರಿಗೆ ಸ್ಥಾನ ಪಡೆದ ರಾಯಚೂರು ಮೂಲದ ವಿದ್ಯಾಧರ ಪಾಟೀಲ್ ಆಂಗ್ಲರ ಎದುರು ಅಮೋಘ ಆಟವಾಡುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಅವರು ಎಸೆದ 8 ಓವರ್​​ಗಳಲ್ಲಿ ಒಂದು ಮೇಡಿನ್​​ ಹಾಗೂ 2 ವಿಕೆಟ್​​ ಕಬಳಿಸಿ 46 ರನ್​ ನೀಡಿದರು. ಇಂಗ್ಲೆಂಡ್​ ತಂಡದ ಆರಂಭಿಕ ಟಾಮ್​​​ ಕ್ಲಾಕ್​​ ಹಾಗೂ ಸ್ಫೋಟಕ ಬ್ಯಾಟ್ಸ್​​ಮನ್​​​​​​​ ಜಾರ್ಜ್​ ಹಿಲ್​​​​​​​ ಅವರ ವಿಕೆಟ್​​​​ ಕಬಳಿಸುವಲ್ಲಿ ಸಫಲರಾದರು.

ತಂಡದಲ್ಲಿ ಮತ್ತೊಬ್ಬ ಕನ್ನಡಿಗ ಶುಭಾಂಗ್​​ ಹೆಗ್ಡೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಆಂಗ್ಲ ಪಡೆ 46.3 ಓವರ್​ಗಳಲ್ಲಿ ಆಲೌಟ್​​ ಆಗಿ 204 ರನ್​​ ಗಳಿಸಿದರೆ, ಭಾರತ 39.2 ಓವರ್​​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 205 ರನ್​​ ಗಳಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *