ಈ ಫೋಟೋಗಳನ್ನ ನೋಡಿದರೆ, ಎರಡೂ ಒಂದೇ ತರಹ ಇರುವಂತೆ ಕಾಣುತ್ತದೆ. ಆದರೆ, ಒಂದರಲ್ಲಿ ರಿಷಿ ಕಪೂರ್ ಇದ್ದರೆ, ಇನ್ನೊಂದರಲ್ಲಿ ಕರಣ್ ಜೋಹಾರ್ ಇದ್ದಾರೆ. ಇವೆರೆಡರಲ್ಲಿ ಒರಿಜಿನಲ್ ಯಾವುದು, ನಕಲಿ ಯಾವುದು ಎಂಬ ಪ್ರಶ್ನೆ ಬರಬಹುದು. ಬಂದಿರಬಹುದು ಏನು? ಖಂಡಿತಾ ಬಂದಿರುತ್ತದೆ. ಟೆಕ್ನಾಲಜಿಯಿಂದ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಸಣ್ಣ ಉದಾಹರಣೆ ಇದು.
ರಿಷಿ ಕಪೂರ್ ನಾಯಕನಾಗಿ ನಟಿಸಿದ ಮೊದಲ ಚಿತ್ರ ‘ಬಾಬ್ಬಿ’ಯ ‘ಮೇ ಶಾಯರ್ ಥೋ ನಹೀ …’ ಎಂಬ ಹಾಡಿನ ದೃಶ್ಯ ಇದು. ಈ ಹಾಡಿನಲ್ಲಿ ರಿಷಿ ಕಪೂರ್ ಎಲ್ಲೆಲ್ಲಿ ಇದ್ದಾರೋ, ಫೇಸ್ ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ಕರಣ್ ಜೋಹಾರ್ ಮುಖವನ್ನು ಅಂಟಿಸಲಾಗಿದೆ. ಒರಿಜಿನಲ್ ಹಾಡಿನಲ್ಲಿ ರಿಷಿ ಕಪೂರ್ ಇದ್ದರೆ, ಫೇಸ್ ಮ್ಯಾಪಿಂಗ್ ಮಾಡಿರುವ ಹೊಸ ಹಾಡಿನಲ್ಲಿ ಕರಣ್ ಇದ್ದಾರೆ. ಮುಖ ಬದಲಾವಣೆಯಾಗಿರುವುದು ಬಿಟ್ಟರೆ ಮಿಕ್ಕಂತೆ ಎಲ್ಲವೂ ಸೇಮ್ ಟು ಸೇಮ್. ತಂತ್ರಜ್ಞಾನದಿಂದ ಹೀಗೆಲ್ಲಾ ಮಾಡಬಹುದು ಎಂದು ತೋರಿಸುವುದಕ್ಕೆ ಈ ಹಾಡನ್ನು ಬಳಸಿಕೊಳ್ಳಲಾಗಿದೆ. ಈ ಹಾಡನ್ನು ಕರಣ್ ಜೋಹಾರ್ಗೆ ಸಂದೀಪ್ ಎನ್ನುವವರು ಮಾಡಿ ಕಳಿಸಿದ್ದಂತೆ. ನೋಡಿ ಖುಷಿಯಾದ ಕರಣ್, ಇದನ್ನು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಮೂಲಕ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಂಥದ್ದೊಂದು ಗಿಫ್ಟ್ಗೆ ಥ್ಯಾಂಕ್ಸ್ ಹೇಳಿದ್ದಾರೆ.
ಈ ಹಾಡು ಬಿಡುಗಡೆಯಾಗಿದ್ದೇ ಆಗಿದ್ದು, ಎಲ್ಲೆಡೆ ಜನಪ್ರಿಯವಾಗಿದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳಂತೂ ಈ ಹಾಡನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಪ್ರೀತಿ ಜಿಂಟಾ, ಕಾಜೋಲ್, ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ … ಮುಂತಾದವರೆಲ್ಲಾ ಹೊಸ ಹಾಡನ್ನು ಕೊಂಡಾಡಿದ್ದಾರೆ. ಬರೀ ಸೆಲೆಬ್ರಿಟಿಗಳಷ್ಟೇ ಅಲ್ಲ, ರಿಷಿ ಕಪೂರ್ ಮಗಳು ರಿದ್ದೀಮಾ ಕಪೂರ್ ಸಹ ಈ ಪ್ರಯತ್ನಕ್ಕೆ ಹಾಡಿ ಹೊಗಳಿದ್ದಾರೆ. ಅದರ ಜತೆಗೆ, ತನ್ನಪ್ಪ ಇದಕ್ಕೆ ಹೇಗೆ ಪ್ರತಿಕ್ರಯಿಸುತ್ತಾರೆ ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ. ಮಹಾನ್ ಮುಂಗೋಪಿ ಎನಿಸಿಕೊಂಡಿರುವ ರಿಷಿ ಕಪೂರ್, ಇಂಥದ್ದನ್ನೆಲ್ಲಾ ಸಹಿಸುವುದು ಕಡಿಮೆಯೇ. ಹೀಗಿರುವಾಗ ಅವರು ಹೇಗೆ ಪ್ರತಿಕ್ರಯಿಸುತ್ತಾರೆ ಎಂಬ ಕುತೂಹಲ ರಿದ್ದೀಮಾಗೆ ಸೇರಿದಂತೆ ಹಲವರಿಗಿದೆ.
ಇಷ್ಟಕ್ಕೂ ಇಂಥದ್ದೊಂದು ಹೊಸ ಪ್ರಯತ್ನಕ್ಕೆ ರಿಷಿ ಕಪೂರ್ ಏನನ್ನುತ್ತಾರೆ? ಕಾದು ನೋಡೋಣ.
ಚಿತ್ರರಂಗಕ್ಕೆ ಕರೊನಾ ಎಫೆಕ್ಟ್; ಪ್ರಶಸ್ತಿ ಪ್ರದಾನ ಸಮಾರಂಭ, ಚಿತ್ರೋತ್ಸವಗಳು ಮುಂದಕ್ಕೆ
https://www.instagram.com/tv/B_euYUmpGlI/?utm_source=ig_embed