ಒಳಚರಂಡಿ ಸಂಸ್ಕರಣಾ ಘಟಕ ಅಳವಡಿಸದಿದ್ದರೆ ಕ್ರಮ

blank

ಪಡುಬಿದ್ರಿ: ಎಸ್‌ಟಿಪಿ (ಒಳಚರಂಡಿ ಸಂಸ್ಕರಣಾ ಘಟಕ) ಅಳವಡಿಸಿ ಅದು ಕಾರ್ಯಾಚರಣೆಗೆ ಬಾರದಿದ್ದಲ್ಲಿ ಅಂಥ ವಸತಿ ಸಮುಚ್ಚಯಗಳಿಗೆ ಪೂರ್ಣತಾ ಪ್ರಮಾಣಪತ್ರ ವಿತರಿಸದಿರಲು ಬುಧವಾರ ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಈಗಾಗಲೇ ಒಳಚರಂಡಿಯಿಲ್ಲದೆ ಕೊಳಚೆ ನೀರಿನಿಂದ ಬೀಡು ಬದಿ ವಾರ್ಡ್‌ನ ಜನ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸಮಸ್ಯೆ ಪರಿಹರಿಸುವಂತೆ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸದಸ್ಯೆ ಅಶ್ವಿನಿ ಗಮನ ಸೆಳೆದರು. ಪ್ರತಿಕ್ರಿಯಿಸಿದ ಅಧ್ಯಕ್ಷ ಅನಿಲ್‌ಕುಮಾರ್ ಪೇಟೆ ಭಾಗದ ವಸತಿ ಸಮುಚ್ಚಯದ ಎಸ್‌ಟಿಪಿಯಿಂದ ನೀರು ಹೊರಬಿಡಲಾಗುತ್ತಿದ್ದು, ಅವರಿಗೆ ಮಂಗಳವಾರವೇ ನೋಟಿಸ್ ನೀಡಲಾಗಿದೆ. ಸಮಸ್ಯೆ ಪರಿಹರಿಸದಿದ್ದಲ್ಲಿ ಮತ್ತೆ ನೋಟಿಸ್ ನೀಡಲಾಗುವುದು. ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಹೇಳಿದರು.

ಪುರಸಭೆ ವ್ಯಾಪ್ತಿಯಲ್ಲಿ ಒಂದು ವರ್ಷದಿಂದ ಯಾವುದೇ ವಸತಿ ಸಮುಚ್ಚಯಗಳಿಗೆ ಪರವಾನಗಿ ನೀಡಿಲ್ಲ. ಪಟ್ಟಣ ಅಭಿವೃದ್ಧಿ ದೃಷ್ಟಿಯಿಂದ ವಸತಿ ಸಮುಚ್ಚಯಗಳು ಅನಿವಾರ್ಯ. ಆದರೆ ಕಾನೂನು ಮೀರಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ವೆಂಕಟೇಶ ನಾವಡ ಧ್ವನಿಗೂಡಿಸಿದರು.
ಸದಸ್ಯರ ಮಧ್ಯೆ ವಾಗ್ವಾದ

ಪುರಸಭೆ ಸಮೀಪವೇ ಸರ್ಕಾರಿ ಜಮೀನಿನಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸುವಂತೆ ನಾಮನಿರ್ದೇಶಿತ ಸದಸ್ಯ ಪ್ರದೀಪ್ ನೀಡಿದ ಹೇಳಿಕೆ, ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಕಾಂಗ್ರೆಸ್ ಸದಸ್ಯ ಕೆ.ಎಚ್.ಉಸ್ಮಾನ್ ಎಲ್ಲೂರಿನ 10 ಎಕರೆ ಸ್ಥಳದಲ್ಲಿ ಪುರಸಭೆಯ ಶುದ್ಧೀಕರಣ ಘಟಕ ನಿರ್ಮಿಸಿ ಟ್ಯಾಂಕರ್ ಮೂಲಕ ಕೊಳಚೆ ನೀರು ಸಾಗಿಸುವಂತೆ ಸಲಹೆ ನೀಡಿದರು. ಹಿಂದೆಯೂ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ಹಲವು ಕಡೆ ಜಾಗ ಗುರುತಿಸಿದ್ದರೂ, ವಿರೋಧ ಎದುರಾಗಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು.

ಕಾಯ್ದೆ ಸರಳಗೊಳಿಸಲು ಮನವಿ
ನಗರ ಯೋಜನಾ ಪ್ರಾಧಿಕಾರದ ನಿಯಾಮಗಳಿಂದ ಜನರಿಗೆ ತೊಂದರೆಯಾಗುತ್ತಿದ್ದು, ಕಾಯ್ದೆ ಸರಳಗೊಳಿಸುವಂತೆ ಶಾಬು ಸಾಹೇಬ್, ಕಿರಣ್ ಆಳ್ವ, ಉಸ್ಮಾನ್ ಆಗ್ರಹಿಸಿದರು. ಉತ್ತರಿಸಿದ ಪ್ರಾಧಿಕಾರ ಇಂಜಿನಿಯರ್, ಈ ವಿಚಾರದಲ್ಲಿ ನಾವು ತೀರ್ಮಾನ ಕೈಗೊಳ್ಳುವಂತಿಲ್ಲ. ಕಾಯ್ದೆ ಅನ್ವಯವೇ ನಾವು ಕಾರ್ಯನಿರ್ವಹಿಸಬೇಕಿದೆ ಎಂದರು. ನಗರ ಯೋಜನಾ ಪ್ರಾಧಿಕಾರಕ್ಕೆ ಪುರಸಭೆ ಸದಸ್ಯರೊಬ್ಬರನ್ನು ನಾಮನಿರ್ದೇಶಿತ ಸದಸ್ಯರಾಗಿ ನೇಮಿಸುವಂತೆ 2016ರಲ್ಲೇ ಸುತ್ತೋಲೆ ಬಂದಿದ್ದರೂ ಅದನ್ನು ಗಮನಕ್ಕೆ ತಾರದಿರುವ ಬಗ್ಗೆ ಸದಸ್ಯ ಅರಣ್ ಶೆಟ್ಟಿ ಪಾದೂರು ಪ್ರಶ್ನಿಸಿದರು. ಈ ಬಗ್ಗೆ ಸದಸ್ಯ ಕಾರ್ಯದರ್ಶಿ ಗಮನಕ್ಕೆ ತರುವುದಾಗಿ ತಿಳಿಸಿದರು.

ಕೈಪುಂಜಾಲು ವಾರ್ಡ್‌ನಲ್ಲಿ ಕಂಬ ಅಳವಡಿಸಿ ತಂತಿ ಎಳೆದು ಮೂರು ವರ್ಷಗಳಾದರೂ ಬೀದಿದೀಪ ಅಳವಡಿಸಿಲ್ಲ. ಹಲವು ಬಾರಿ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ರಮಾ ವೈ.ಶೆಟ್ಟಿ ಅಳಲು ತೋಡಿಕೊಂಡರು. ಗುರುವಾರ ಸ್ಥಳ ಪರಿಶೀಲಿಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು.
ಗ್ರಂಥಾಲಯ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾಗಿ ಅರುಣ್ ಶೆಟ್ಟಿ ಪಾದೂರು ಹೆಸರು ಅಂತಿಮಗೊಳಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಮಾಲಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಾಂಭವಿ ಕುಲಾಲ್ ಉಪಸ್ಥಿತರಿದ್ದರು.

ಪುರಸಭೆಯ 23 ವಾರ್ಡ್‌ಗಳ ಪೈಕಿ ಕೆಲ ವಾರ್ಡ್‌ಗಳ ಸಮಸ್ಯೆಗಳು ಗಮನಕ್ಕೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಪ್ರತಿ ವಾರ್ಡ್‌ನಲ್ಲಿ ವಾರ್ಡ್ ಸಭೆ ನಡೆಸಿ ಜನರ ಸಮಸ್ಯೆ ಆಲಿಸಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಪರಿಶೀಲನೆಗೆ ಶೀಘ್ರ ಸಮಿತಿ ರಚಿಸಲಾಗುವುದು.
ಅನಿಲ್ ಕುಮಾರ್, ಕಾಪು ಪುರಸಭೆ ಅಧ್ಯಕ್ಷ

ಜನವರಿ ಎರಡನೇ ವಾರ ಮಿನಿ ವಿಧಾನಸೌಧಕ್ಕೆ ಶಿಲಾನ್ಯಾಸ ನಡೆಸಲಾಗುವುದು. ಸಚಿವರು ಆಗಮಿಸಲಿದ್ದು, ಕಾಪು ಪುರಸಭೆ ವ್ಯಾಪ್ತಿಯಲ್ಲಿ ಆಗಬೇಕಿರುವ 4.75 ಕೋಟಿ ರೂ. ವೆಚ್ಚದ ಹೈಟೆಕ್ ಮಾರುಕಟ್ಟೆ ಸಹಿತ ವಿವಿಧ ಯೋಜನೆಗಳ ಅನುಷ್ಠಾನ ಕುರಿತಂತೆ ಸಚಿವರೊಂದಿಗೆ ಮಾತುಕತೆ ನಡೆಸಿ ಅನುದಾನ ಕ್ರೋಡೀಕರಿಸಲು ಯೋಚಿಸಲಾಗಿದೆ.
ಲಾಲಾಜಿ ಆರ್. ಮೆಂಡನ್, ಕಾಪು ಶಾಸಕ

Share This Article

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…

honeymoon destinations : 2024 ರಲ್ಲಿ ನವವಿವಾಹಿತರನ್ನು ಆಕರ್ಷಿಸಿದ ನೆಚ್ಚಿನ ಹನಿಮೂನ್ ತಾಣಗಳು ಇವು..!

 honeymoon destinations  : ವ್ಯಕ್ತಿಯ ಆದ್ಯತೆಗಳು ಮತ್ತು ಆಯ್ಕೆಗಳು ವರ್ಷಗಳಲ್ಲಿ ಬದಲಾಗುತ್ತವೆ. ಈಗ ನಾವು 2024…