Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಅವಾಂತರ ಸೃಷ್ಟಿಸಿದ ಕಪಿಲಾ ಪ್ರವಾಹ

Friday, 10.08.2018, 10:14 PM       No Comments

ನಂಜನಗೂಡು: ಕಪಿಲಾ ನದಿಯಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿರುವುದರಿಂದ ನದಿಯ ಪ್ರವಾಹ ಹೆಚ್ಚಾಗಿ ತಾಲೂಕಿನ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ 766 ರಾಷ್ಟ್ರೀಯ ಹೆದ್ದಾರಿಯ ಮೈಸೂರು-ನಂಜನಗೂಡು ರಸ್ತೆ ನಗರದ ಹೊರವಲಯದ ಮಲ್ಲನಮೂಲೆ ಮಠದ ಬಳಿ ಜಲಾವೃತಗೊಂಡ ಪರಿಣಾಮ ಶುಕ್ರವಾರ ದಿನವಿಡಿ ಸಂಚಾರ ಸ್ತಬ್ಧಗೊಂಡಿತು.

ಇದರಿಂದ ಬಂಡೀಪುರ, ಊಟಿ, ಕೋಝಿಕೋಡ್, ಸೇಲಂ, ಸತ್ತಿ, ಕೊಯಮತ್ತೂರ್ ಅಂತಾರಾಜ್ಯ ಪ್ರಯಾಣಿಕರು ಸೇರಿ ಮೈಸೂರು ಹಾಗೂ ನಂಜನಗೂಡು ತೆರಳುವ ಸಾರ್ವಜನಿಕರು ಪರಡಾಡುವಂತಾಯಿತು.

ಪರ್ಯಾಯ ಮಾರ್ಗ: ಶುಕ್ರವಾರ ಬೆಳಗ್ಗೆಯಿಂದಲೇ ನದಿಯ ಪ್ರವಾಹ ಹೆದ್ದಾರಿಗೆ ಚಾಚಿಕೊಳ್ಳುತ್ತಿದ್ದಂತೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ ಜಿಲ್ಲಾಡಳಿತ ಮೂರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ನೀಡಿತು.

ನಂಜನಗೂಡಿನಿಂದ ಬಸವನಪುರ, ಕೆಂಪಿಸಿದ್ದನಹುಂಡಿ, ಅಡಕನಹಳ್ಳಿ, ಹೆಬ್ಯಾ, ಕೋಚನಹಳ್ಳಿ, ಕಡಕೊಳ ಮಾರ್ಗದಿಂದ ಮೈಸೂರು ಕಡೆಗೆ ತೆರಳಲು ಅನುವು ಮಾಡಿಕೊಡಲಾಯಿತು. ನಂಜನಗೂಡಿನಿಂದ ಹುಲ್ಲಹಳ್ಳಿ ಮಾರ್ಗವಾಗಿ ಮೈಸೂರಿಗೆ ಹಾಗೂ ಹೆಜ್ಜಿಗೆ ಗ್ರಾಮದ ನೂತನ ಕಪಿಲಾ ಸೇತುವೆ ಮಾರ್ಗವಾಗಿ ಮೈಸೂರಿನತ್ತ ತೆರಳಲು ಅವಕಾಶ ನೀಡಲಾಯಿತು.

ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ವಾಹನಗಳಿಗೆ ಪ್ರವೇಶ ನಿಬರ್ಂಧಿಸಿ ಹುಲ್ಲಹಳ್ಳಿ ವೃತ್ತ, ದೇವರಾಜ ಅರಸು ಸೇತುವೆ ಹಾಗೂ ಚಿಕ್ಕಯ್ಯನಛತ್ರ ಬಳಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. 1992ರ ಸಂದರ್ಭದಲ್ಲಿ ಬಿಟ್ಟರೆ ಈ ಪ್ರಮಾಣದಲ್ಲಿ ನದಿಗೆ ನೀರು ಬಿಟ್ಟ ನಿದರ್ಶನವಿರಲಿಲ್ಲ. ಹೀಗಾಗಿಯೇ ಜನ ಪ್ರವಾಹ ನೋಡಲು ಹೆದ್ದಾರಿಯತ್ತ ದೌಡಾಯಿಸಿದರು.

ಮನೆಗಳು ಭಾಗಶಃ ಮುಳುಗಡೆ:

ನಗರದ ಹಳ್ಳದಕೇರಿ ಬಡಾವಣೆಯ ಮಂಜುನಾಥ್, ಶಿವಣ್ಣ, ನಾಗೇಶ್, ರಮೇಶ್ ಎಂಬುವರ ಮನೆಗಳು ಭಾಗಶಃ ಮುಳುಗಡೆಯಾಗಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಕಪಿಲಾ ನದಿಯ ಹೊರಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ನಗರದ ಹಳ್ಳದಕೇರಿ ಸೇರಿ ತಾಲೂಕಿನ ಹೆಜ್ಜಿಗೆ, ತೊರೆಮಾವು, ಕುಳ್ಳಂಕಯ್ಯನಹುಂಡಿ, ಬೊಕ್ಕಹಳ್ಳಿಯ ಕೆಲ ಮನೆಗಳು ಜಲಾವೃತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅವರ ನೆರವಿಗಾಗಿ ತಾಲೂಕು ಆಡಳಿತ ಅಧಿಕಾರಿಗಳ ತಂಡ ರಚಿಸಿ ರಕ್ಷಣೆ ಹೊಣೆಗಾರಿಕೆ ನೀಡಿದ್ದಾರೆ.

ಪ್ರವಾಹ ನೋಡಲು ಮುಗಿಬಿದ್ದ ಜನ:

26 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿರುವ ಕಪಿಲೆಯ ರೌದ್ರರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನ ಮುಗಿಬಿದ್ದರು. ಪ್ರವಾಹದ ನೀರು ಹೆದ್ದಾರಿ ಆವರಿಸಿಕೊಂಡಿರುವುದನ್ನು ನೋಡಲು ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಜನರು ದೇವರಾಜ ಅರಸು ಸೇತುವೆ, ಬ್ರಿಟಿಷ್ ಕಾಲದ ರೈಲ್ವೆ ಬ್ರಿಡ್ಜ್ ಬಳಿ ಕಪಿಲೆಯ ಕಲರವವನ್ನು ವೀಕ್ಷಿಸಿ ಸೆಲ್ಫಿ  ಕ್ಲಿಕ್ಕಿಸಿಕೊಳ್ಳುತ್ತಿದ್ದರು.

 

Leave a Reply

Your email address will not be published. Required fields are marked *

Back To Top