ಕಾನ್ಶಿರಾಮ್ ಜನ್ಮ ದಿನಾಚರಣೆ

ಬೀದರ್: ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಸಂಸ್ಥಾಪಕರಾದ ಕಾನ್ಶಿರಾಮ್ ಅವರ 85ನೇ ಜನ್ಮ ದಿನಾಚರಣೆ ನಗರದಲ್ಲಿ ಶುಕ್ರವಾರ ನಡೆಯಿತು.
ರಾಜ್ಯ ಉಸ್ತುವಾರಿ ಎಂ.ಎಲ್. ತೋಮರ್ ಮಾತನಾಡಿ, ಪಕ್ಷ ಸಂಘಟನೆಗೆ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಒತ್ತು ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕೋರಿದರು.
ದೇಶದ ಬಹುದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಮಾಯಾವತಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಲ್ಲಿರುವಂಥ ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಸಾಮಾಜಿಕ ಸಮಾನತೆ, ಭೂಹೀನರಿಗೆ ಭೂಮಿ ಹಂಚುವ ಮೂಲಕ ಕಾನ್ಶಿರಾಮ್ ಹಾಕಿಕೊಟ್ಟ ಸೂತ್ರದನ್ವಯ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾಧ್ಯಕ್ಷ ಅಂಕುಶ ಗೋಖಲೆ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ಲಭಿಸಿ 70 ವರ್ಷವಾದರೂ ದೌಜ್ರ್ಯನ್ಯ, ದಬ್ಬಾಳಿಕೆ, ಅನ್ಯಾಯ, ಅತ್ಯಾಚಾರಗಳು ನಡೆಯುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಕಾಂಗ್ರೆಸ್, ಬಿಜೆಪಿ ಕಾರಣ. ಸುಭದ್ರ, ಸುರಕ್ಷತೆ ಹಾಗೂ ನೆಮ್ಮದಿಯಿಂದ ದೇಶದ ಜನರು ಬದುಕಬೇಕಾದರೆ ಉಕ್ಕಿನ ಮಹಿಳೆ ಅಕ್ಕ ಮಾಯಾವತಿ ಅವರನ್ನು ಪ್ರಧಾನಿ ಮಾಡುವ ಅಗತ್ಯವಿದೆ ಎಂದರು.
ಪ್ರಮುಖರಾದ ವೈಜಿನಾಥ ಸೂರ್ಯವಂಶಿ, ವಿಠ್ಠಲ್ ಡಾಕುಳಗಿ, ಪ್ರಕಾಶ ಕೋಟೆ, ರಾಜಕುಮಾರ ಮೂಲಭಾರತಿ, ಲಕ್ಷ್ಮಣ ಬೋದಿ, ರಿಯಾಜುದ್ದೀನ್ ಖಾದ್ರಿ, ತಿಪ್ಪಣ್ಣ ವಾಲಿ, ಯಹೋನ್ ಡಿಸೋಜಾ, ಪಪ್ಪು, ಅಶೋಕ ಮಂಠಾಳಕರ್, ಪ್ರವೀಣ ಕಾರಂಜಿ, ಕೀರ್ತಿ ರತನ, ಜಮೀಲ್ ಖಾನ್ ಇತರರಿದ್ದರು. ಸೈಯದ್ ವಹೀದ್ ಲಖನ್, ಸೈಯದ್ ಅನ್ಸಾರಿ ಹಾಗೂ ಬೆಂಬಲಿಗರು ಬಿಎಸ್ಪಿಗೆ ಸೇರ್ಪಡೆಗೊಂಡರು.