Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಕುಚಿಭೋಟ್ಲಾ ಹಂತಕನಿಗೆ ನಲವತೆôದು ವರ್ಷ ಜೈಲು

Thursday, 09.08.2018, 3:03 AM       No Comments

ನ್ಯೂಯಾರ್ಕ್: ಕನ್ಸಾಸ್ ಬಾರ್ ಒಂದರಲ್ಲಿ ಭಾರತೀಯ ಇಂಜಿನಿಯರ್ ಶ್ರೀನಿವಾಸ ಕುಚಿಭೋಟ್ಲಾರನ್ನು ಕಳೆದ ವರ್ಷ ಹತ್ಯೆ ಮಾಡಿದ ಅಮೆರಿಕದ ನೌಕಾಪಡೆ ನಿವೃತ್ತ ಅಧಿಕಾರಿ ಆಡಂ ಪುರಿನ್ಟನ್(53)ಗೆ ಮೂರು ನಿರಂತರ ಅವಧಿಯ ಜೀವಾವಧಿ ಶಿಕ್ಷೆ ಘೋಷಣೆಯಾಗಿದೆ.

ಅಮೆರಿಕದ ಫೆಡರಲ್ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಿದ್ದು, ಮಂಗಳವಾರ ಈ ತೀರ್ಪು ಘೋಷಿಸಿದೆ. ಇದಕ್ಕೂ ಮುನ್ನ ಪುರಿನ್ಟನ್ ತಪ್ಪೊಪ್ಪಿಕೊಂಡು, ಶ್ರೀನಿವಾಸ ಕುಚಿಭೋಟ್ಲಾ ಮತ್ತು ಅವರ ಜತೆಗಿದ್ದ ಅಲೋಕ್ ಮದಸಾನಿ ಮೇಲೆ ಜನಾಂಗೀಯ ಕಾರಣಕ್ಕೆ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡಿದ್ದ. ಸ್ಥಳದಿಂದ ಪರಾರಿಯಾಗುವ ಸಲುವಾಗಿ ಸ್ಥಳೀಯ ನಿವಾಸಿ ಇಯಾನ್ ಗ್ರಿಲ್ಲೊಟ್ ಮೇಲೂ ದಾಳಿ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಜಾನ್ಸನ್ ಕೌಂಟಿಯ ಜಿಲ್ಲಾ ಕೋರ್ಟ್ ಈ ಹತ್ಯೆ ಮತ್ತು ಹಲ್ಲೆ ಪ್ರಕಣದಲ್ಲಿ ಪುರಿನ್ಟನ್ ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಫೆಡರಲ್ ಕೋರ್ಟ್ ಕೂಡ ಜೀವಾವಧಿ ಶಿಕ್ಷೆ ಘೋಷಿಸಿದ್ದು, ಪುರಿನ್ಟನ್ ಸತತ ಮೂರು ಜೀವಾವಧಿ ಶಿಕ್ಷೆ ಅನುಭವಿಸಬೇಕಾಗಿದೆ. ಫೆಡರಲ್ ಕೋರ್ಟ್ ವಿಚಾರಣೆ ವೇಳೆ ಸಂತ್ರಸ್ತರ ಪೈಕಿ ಯಾರೂ ಹಾಜರಿರಲಿಲ್ಲ. – ಏಜೆನ್ಸೀಸ್

ಕಮರಿದ ಕನಸು

ಫೆಡರಲ್ ಕೋರ್ಟ್ ಗೆ ಹೇಳಿಕೆ ನೀಡಿರುವ ಕುಚಿಭೋಟ್ಲಾ ಪತ್ನಿ ಸುನಯನಾ ದುಮಲ, ‘ಅಮೆರಿಕದ ಬೆಳವಣಿಗೆಗೋಸ್ಕರ ಕುಚಿಭೋಟ್ಲಾ ಕೆಲಸ ಮಾಡುತ್ತಿದ್ದರು. ಎಲ್ಲ ಕಂದುವರ್ಣೀಯರು ಶತ್ರುಗಳಲ್ಲ ಎಂಬುದನ್ನು ಪುರಿನ್ಟನ್​ಗೆ ಮನವರಿಕೆ ಮಾಡಿಕೊಡುತ್ತಿದ್ದರು. ಅವರು ಎಲ್ಲರನ್ನೂ ಗೌರವದಿಂದಲೇ ಕಾಣುತ್ತಿದ್ದರು. ಕನಸುಗಳೊಂದಿಗೆ ನಾವು ಅಮೆರಿಕಕ್ಕೆ ಬಂದಿದ್ದೆವು. ಆದರೆ, ಅಮೆರಿಕನ್ ಕನಸು ಈಗ ನನಸಾಗದೇ ಕಮರಿ ಹೋಯಿತು’ ಎಂದು ಹೇಳಿಕೊಂಡಿದ್ದರು.

ಏನಾಗಿತ್ತು?

2017ರ ಫೆಬ್ರವರಿ 22ರಂದು ಕನ್ಸಾಸ್​ನ ಆಸ್ಟಿನ್ಸ್ ಬಾರ್ ಆಂಡ್ ಗ್ರಿಲ್​ನಲ್ಲಿ ಪುರಿನ್ಟನ್ ಕುಳಿತಿದ್ದರು. ಅಲ್ಲಿಗೆ ಕುಚಿಭೋಟ್ಲಾ ಮತ್ತು ಮದಸಾನಿ ಆಗಮಿಸಿದ್ದರು. ಆಗ ಜತೆಗಿದ್ದ ಪುರಿನ್ಟನ್ ಪಕ್ಕದಲ್ಲಿದ್ದವರ ಬಳಿ,‘ನೀವು ಎಂದಾದರೂ ಉಗ್ರರನ್ನು ನೋಡಿದ್ದೀರಾ?’ ಎಂದು ಕೇಳಿದರು. ಅಷ್ಟೇ ಅಲ್ಲ, ಕುಚಿಭೋಟ್ಲಾ ಮತ್ತು ಮದಸಾನಿ ಸಮೀಪ ತೆರಳಿದ ಪುರಿನ್ಟನ್, ಕುಚಿಬೋಟ್ಲಾ ಎದೆಯನ್ನು ತಿವಿದು ಉಗ್ರ ಎಂದು ಕೂಗಿದ್ದಲ್ಲದೇ, ನನ್ನ ದೇಶ ತೊರೆದು ಹೋಗು ಎಂದು ಗಲಾಟೆ ಮಾಡಿದ್ದ. ಬಳಿಕ ಮನೆಗೆ ಹೋಗಿ ಉಡುಪು ಬದಲಾಯಿಸಿಕೊಂಡು ಬಂದು ಕುಚಿಭೋಟ್ಲಾ ಮೇಲೆ ಗುಂಡಿನ ದಾಳಿಗೈದು ಹತ್ಯೆ ಮಾಡಿದ್ದ.

Leave a Reply

Your email address will not be published. Required fields are marked *

Back To Top