ದೇಶದಲ್ಲಿ ಮುಂದಿನ ತಿಂಗಳು ಕರೊನಾದ ಪರಿಸ್ಥಿತಿ ಬಗ್ಗೆ ಬೆಚ್ಚಿಬೀಳಿಸುವ ವರದಿ ನೀಡಿದ ಐಐಟಿ ತಜ್ಞರು!

blank

ಹೈದರಾಬಾದ್: ದೇಶದಲ್ಲಿ ಮುಂದಿನ ತಿಂಗಳು ಕೋವಿಡ್ ಎರಡನೇ ಅಲೆಯ ಪ್ರಭಾವದ ಬಗ್ಗೆ ಹೈದರಾಬಾದ್ ಐಐಟಿ ಮತ್ತು ಕಾನ್ಪುರ್ ಐಐಟಿ ತಜ್ಞರ ತಂಡ ಆತಂಕಕಾರಿ ಸಂಗತಿಯನ್ನು ಬಿಚ್ಚಿಟ್ಟಿದೆ. ಮೇ 14 ರಿಂದ 18ರ ಅವಧಿಯಲ್ಲಿ ಭಾರತದಲ್ಲಿ ಕೋವಿಡ್19 ಸೋಂಕಿತರ ದಿನದ ಪ್ರಮಾಣ 4.4 ಲಕ್ಷದಿಂದ 8 ಲಕ್ಷದವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ಇದೇ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 38 ರಿಂದ 48 ಲಕ್ಷ ಇರಲಿದೆ. ಸಾವಿನ ಪ್ರಮಾಣ 3000 ರ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ.

ಸೋಮವಾರದ ವರದಿಗಳ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,52,991 ದಾಖಲೆ ಪ್ರಮಾಣದ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಮಾರಕ ಸೋಂಕಿಗೆ 2,812 ಜನ ಬಲಿಯಾಗಿದ್ದಾರೆ.

ಐಐಟಿ ಕಾನ್ಪುರ್ ಮತ್ತು ಐಐಟಿ ಹೈದರಾಬಾದ್ ಜಂಟಿಯಾಗಿ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದೆ. ಮೇ ಕೊನೆಯ ವಾರದಲ್ಲಿ ಸೋಂಕಿನ ಪ್ರಮಾಣ ಸ್ವಲ್ಪಮಟ್ಟಿಗೆ ತಗ್ಗಲಿದೆ. ಅಂದರೆ ದಿನಕ್ಕೆ 1.50 ರಿಂದ 2 ಲಕ್ಷದವರೆಗೆ ಪಾಸಿಟವ್ ಪ್ರಕರಣಗಳು ಕಂಡು ಬರಬಹುದು ಎಂದು ಹೈದರಾಬಾದ್​ ಐಐಟಿಯ ಕಂಪ್ಯೂಟರ್ ಸೈನ್ಸ್​ ಪ್ರೊಪೇಸರ್ ಮನಿಂದರ್ ಅಗರವಾಲ್ ಹೇಳಿದ್ದಾರೆ. ಇದು ಕಂಪ್ಯೂಟರ್ ಆಧಾರಿತ ವಿಶ್ಲೇಷಣೆಯ ವರದಿ ಎಂದು ಅವರು ಹೇಳಿದ್ದಾರೆ.

ಇದೇ ತಜ್ಞರ ತಂಡ ಏಪ್ರಿಲ್ ಮೂರನೇ ವಾರದಲ್ಲಿ ದೇಶದಲ್ಲಿ ಕರೊನಾ ಪಾಸಿಟವ್ ದಿನದ ಪ್ರಮಾಣ 3 ರಿಂದ 4 ಲಕ್ಷದ ಒಳಗೆ ಇರಲಿದೆ ಎಂದು ಅಂದಾಜಿಸಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸಂಘ ಸಂಸ್ಥೆಗಳು ಕರೊನಾ ತಡೆಗೆ ಸಾಕಷ್ಟು ಶ್ರಮ ವಹಿಸುತ್ತಿದ್ದರು ಸೋಂಕು ತಹಬದಿಗೆ ಬರುತ್ತಿಲ್ಲ. ಇದೀಗ ಐಐಟಿ ತಜ್ಞರು ನೀಡಿರುವ ಅಂದಾಜು ವರದಿ ಮತ್ತಷ್ಟು ಆತಂಕ ಮೂಡಿಸುವಂತಿದೆ.

https://www.vijayavani.net/corona-haarega-india-jeetega-reliance-foundation-founder-nita-ambani/

ಕರೊನಾ ಭಯದಿಂದ ಅಮ್ಮನನ್ನು ಅಕ್ಕನ ಮನೆ ಎದುರು ಮಲಗಿಸಿ ಬಂದ; ಹೆತ್ತವಳನ್ನು ರಸ್ತೆಯಲ್ಲೇ ಮಲಗಿಸಿದ ಮಗಳು!

TAGGED:
Share This Article

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Acohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…

ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…

ಕಾಂತಿಯುತ ತ್ವಚೆ ನಿಮ್ಮದಾಗಬೇಕೇ?; ಮಲಗುವ ಮುನ್ನ ಈ ಟಿಪ್ಸ್​ ಫಾಲೋ ಮಾಡಿ | Health Tips

ಸುಂದರ, ಆಕರ್ಷಣಿಯ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಹಗಲಿನಲ್ಲಿ ಮಾತ್ರವಲ್ಲ ರಾತ್ರಿ ವೇಳೆಯು ಚರ್ಮದ ಕಾಳಜಿ…