More

    ಕಣ್ಣಿನ ಆರೋಗ್ಯದತ್ತ ಕಾಳಜಿವಹಿಸಿ, ಬಮುಲ್ ನಿರ್ದೇಶಕ ಭಾಸ್ಕರ್ ಸಲಹೆ ಬೇಜಾವಾಬ್ದಾರಿ ತೋರಿದರೆ ಜೀವನವೇ ಕತ್ತಲು ಎಚ್ಚರ

    ನೆಲಮಂಗಲ: ಮನುಷ್ಯನ ಭವಿಷ್ಯದ ಉನ್ನತಿಗೆ ಕಾರಣವಾದ ನೇತ್ರಗಳ ಮಹತ್ವ ಅರಿತು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಆರ್.ಭಾಸ್ಕರ್ ಸಲಹೆ ನೀಡಿದರು.

    ತಾಲೂಕಿನ ಯಲಚಗೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ಉಚಿತ ನೇತ್ರಾ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮನುಷ್ಯನ ದೇಹದಲ್ಲಿ ಸೂಕ್ಷ ಅಂಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಣ್ಣು ಜಗತ್ತಿನ ಸೃಷ್ಟಿಯನ್ನು ಕಾಣಲು ದೇವರು ನೀಡಿರುವ ಅಂಗ. ಅದನ್ನು ಜವಾಬ್ದಾರಿಯಿಂದ ನೋಡಿಕೊಳ್ಳದಿದ್ದರೆ ಜೀವನವೇ ಕತ್ತಲಾಗುತ್ತದೆ ಎಂದರು.

    ಮಲ್ಲೇಶ್ವರಂ ಕಣ್ಣಿನ ಆಸ್ಪತ್ರೆ ವ್ಯವಸ್ಥಾಪಕ ಡಾ. ದಯಾನಂದ ಮೂರ್ತಿ ಮಾತನಾಡಿ, ಗ್ರಾಮೀಣ ಜನರು ಹೆಚ್ಚು ಹಣದ ಸಮಸ್ಯೆಗೆ ಆರೋಗ್ಯದ ಬಗ್ಗೆ ಗಮನವಹಿಸುವುದಿಲ್ಲ. ಆದ್ದರಿಂದ ನಾವೇ ಜನರ ಮನೆ ಬಾಗಿಲಿಗೆ ಬಂದು ನೇತ್ರದ ತಪಾಸಣೆ ಮಾಡುವ ಮೂಲಕ ಚಿಕಿತ್ಸೆ ನೀಡಲು ಮುಂದಾಗಿದ್ದೇವೆ. ಬಿಪಿ ಹಾಗೂ ಸಕ್ಕರೆ ಕಾಯಿಲೆ ಇರುವ ನೂರಾರು ಜನರಿಗೆ ಉಚಿತ ತಪಾಸಣೆ ಮಾಡಲಾಗಿದೆ ಎಂದರು.

    ಬಮುಲ್ ಕಲ್ಯಾಣ ಟ್ರಸ್ಟ್ ಮೇಲ್ವಿಚಾರಕ ಟಿ.ಎಸ್ ರಮೇಶ್ ಬಾಬು, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ರಾಜಮ್ಮ, ಕಾರ್ಯದರ್ಶಿ ನಳಿನಾ ಶಿವಕುಮಾರ್, ನೇತ್ರ ತಜ್ಞರಾದ ಡಾ. ಕೃಷ್ಣಮೂರ್ತಿ, ಡಾ. ಕಿರಣ್, ಡಾ. ಕೃಷ್ಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts