25.8 C
Bangalore
Friday, December 13, 2019

ಕರ್ನಾಟಕದಲ್ಲಿ ಕನ್ನಡ ಬಿತ್ತುವ ಪರಿಸ್ಥಿತಿಗೆ ಯಾರು ಹೊಣೆ?

Latest News

ಪೌರತ್ವ ಕಾನೂನು ಧಿಕ್ಕರಿಸುವ ಅಧಿಕಾರ ರಾಜ್ಯಗಳಿಗಿಲ್ಲ: ಗೃಹ ಸಚಿವಾಲಯ ಸ್ಪಷ್ಟ ಸಂದೇಶ

ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿದ ಕಾನೂನುಗಳನ್ನು ಪಾಲಿಸದೆ ರಾಜ್ಯ ಸರ್ಕಾರಗಳಿಗೆ ಬೇರೆ ವಿಧಿಯಿಲ್ಲ. ನೆಲದ ಕಾನೂನನನ್ನು ಎಲ್ಲರೂ ಗೌರವಿಸಬೇಕು ಎಂದು ಎನ್​ಆರ್​ಸಿ ಮತ್ತು...

ನಾಡಿನ ಹಿತ ಕಾಪಾಡುವಲ್ಲಿ ಮಠಗಳು ಶ್ರಮಿಸುತ್ತಿವೆ

ಶಹಾಪುರ: ಅನಾದಿ ಕಾಲದಿಂದಲೂ ನಾಡಿನ ಹಿತ ಕಾಪಾಡುವಲ್ಲಿ ಮಠಮಾನ್ಯಗಳು ಸಾಕಷ್ಟು ಶ್ರಮಿಸುತ್ತಿವೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ಶುಕ್ರವಾರ ನಗರದ ಕುಂಬಾರಗೇರಿ...

ಕಾಲುವೆ ಒಡೆದು ರೈತರ ಜಮೀನಿನಲ್ಲಿ ನೀರು !

ಯಾದಗಿರಿ: ಸನ್ನತಿ ಏತ ನೀರಾವರಿ ಯೋಜನೆಯಡಿ ಕೆಬಿಜೆಎನ್ಎಲ್ನಿಂದ ನಿಮರ್ಿಸಲಾಗಿದ್ದ ಕಾಲುವೆ ಒಡೆದು ರೈತರ ಜಮೀನಿನಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಘಟನೆ ತಾಲೂಕಿನ...

ಜಟಿಲತೆ ಪ್ರಶ್ನೆಗಳಲ್ಲಿಲ್ಲ, ವಿದ್ಯಾರ್ಥಿಗಳ ಮನದಲ್ಲಿದೆ

ತಾಳಿಕೋಟೆ: ಪರೀಕ್ಷೆ ಎಂಬುದು ಕಬ್ಬಿಣದ ಕಡಲೆಯಲ್ಲ. ಅದು ವಿದ್ಯಾರ್ಥಿಗಳಲ್ಲಿರುವ ಕೌಶಲ ಹಾಗೂ ಪ್ರತಿಭೆ ಹೊರಹಾಕಲಿರುವ ಸಾಧನ ಎಂದು ಬೆಂಗಳೂರಿನ ಶೈಕ್ಷಣಿಕ ತಜ್ಞ ಹಾಗೂ...

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ

ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಅಗಸ್ತ್ಯ ಅಂತಾರಾಷ್ಟೀಯ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ...

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕರ್ನಾಟಕದ ನೆಲದಲ್ಲಿ ಕನ್ನಡ ಭಾಷಾ ಬೀಜ ಬಿತ್ತುವಂಥ ಪರಿಸ್ಥಿತಿ ಬಂದೊದಗಲು ಯಾರು ಹೊಣೆ ಎಂದು ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಪ್ರಥಮ ಕನ್ನಡದ ಮಹಿಳೆ, ನಾಡೋಜ ಡಾ.ಗೀತಾ ನಾಗಭೂಷಣ ಹೇಳಿದರು.
ನಗರದ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಆಯೋಜಿಸಿದ್ದ ಎರಡು ದಿನದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನೆಲದಲ್ಲಿ ಕನ್ನಡ ಭಾಷೆ ಕಣ್ಮರೆ ಆಗುತ್ತಿದೆ. ಕನ್ನಡಿಗರ ಹೊಲಗದ್ದೆಗಳು ಅನ್ಯ ರಾಜ್ಯಗಳ ಬಂಡವಾಳಗಾರರ ಪಾಲಾಗಿ, ಅವರು ಸ್ಥಾಪಿಸಿದ ಕಾರ್ಖಾನೆಯಲ್ಲೇ ದುಡಿಯಬೇಕಾದ ದುಃಸ್ಥಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಜಯವಾಣಿಯಲ್ಲಿ ಪ್ರಕಟವಾದ ಸರ್ವಾಧ್ಯಕ್ಷೆ ಡಾ.ನಾಗಾಬಾಯಿ ಬುಳ್ಳಾ ಸಂದರ್ಶನವನ್ನು ಉಲ್ಲೇಖಿಸಿದ ಡಾ.ಗೀತಾ ಅವರು ಡಾ.ಬುಳ್ಳಾ ಹೇಳಿದಂತೆ ಈಗ ಮಹಿಳೆಯರ ಸಾಹಿತ್ಯ ಸೊರಗುತ್ತಿದೆ. ಅದರೊಂದಿಗೆ ಪುರುಷರ ಸಾಹಿತ್ಯವೂ ಕ್ಷೀಣಿಸುತ್ತಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಸರ್ವಾಧ್ಯಕ್ಷೆಯಾಗಿದ್ದ ನನಗೆ 17ನೇ ಸಮ್ಮೇಳನದ ಉದ್ಘಾಟನೆ ಅವಕಾಶ ಒದಗಿಬರುತ್ತದೆ ಎಂದು ಊಹಿಸಿರಲಿಲ್ಲ. ಸಮ್ಮೇಳನಾಧ್ಯಕ್ಷತೆಯನ್ನು ಮಹಿಳೆಯೊಬ್ಬರಿಗೆ ನೀಡಿದ್ದರಿಂದ ಈ ಸಮ್ಮೇಳನವನ್ನು ಅತ್ಯಂತ ಹರ್ಷದಿಂದ ಉದ್ಘಾಟಿಸಿದ್ದೇನೆ ಎಂದು ಹೇಳಿದರು.
ಹಿಂದೆ ಕೈಬರಹಕ್ಕೆ ಹೆಚ್ಚಿನ ಆದ್ಯತೆ ಇತ್ತು. ತರುಣ ತರುಣಿಯರು ತಮ್ಮ ಪ್ರೇಮ ನಿವೇದನೆಗಾಗಿ ಉತ್ತಮವಾದ ಪ್ರೇಮಪತ್ರ ಬರೆಯುತ್ತಿದ್ದರು. ಹಾಗೆ ಬರೆಯಬೇಕಾದರೆ ಶಬ್ದ ಸಂಗ್ರಹ ಬೇಕಾಗುತ್ತಿತ್ತು. ಅದಕ್ಕಾಗಿಯೇ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುತ್ತಿದ್ದರು. ಈಗ ಕೈಬರಹ ಬೆರಳಿಗೆ ಬಂದಿದ್ದು, ಕಂಪ್ಯೂಟರ್ ಕೀಲಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ತಮಾಷೆ ಮಾಡಿದರು.
ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ, ಸಂಸ್ಕೃತಿ. ಕನ್ನಡದ ಮೇಲೆ ಅನ್ಯ ಭಾಷೆಗಳ ದಾಳಿ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸಾಹಿತಿಗಳ ಮೇಲಿದೆ. ತಾಂತ್ರಿಕ ಮತ್ತು ವೈದ್ಯಕೀಯ ಹಾಗೂ ಕಾನೂನು ಶಿಕ್ಷಣವನ್ನು ಕನ್ನಡ ಭಾಷೆಯಲ್ಲೇ ನೀಡುವಂತಾಗಬೇಕು. ಕನ್ನಡದಲ್ಲೇ ಪಠ್ಯ ಪುಸ್ತಕಗಳ ರಚನೆಯಾಗಬೇಕು. ಆಗಲೇ ಕನ್ನಡ ಶಾಶ್ವತವಾಗಿ ಉಳಿಯುತ್ತದೆ ಎಂದು ಅಭಿಪ್ರಾಯ ಪಟ್ಟರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ವೀರಣ್ಣ ದಂಡೆ ಈಗಿನ ಸಮ್ಮೇಳನಾಧ್ಯಕ್ಷರಿಗೆ ಕನ್ನಡದ ಧ್ವಜ ಹಸ್ತಾಂತರಿಸಿ ಮಾತನಾಡಿದರು. ಸಮ್ಮೇಳನಾಧ್ಯಕ್ಷೆ ಡಾ.ನಾಗಾಬಾಯಿ ಬುಳ್ಳಾ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಿದ್ಧಾರ್ಥ ಡಿ.ಚಿಮ್ಮಾಇದ್ಲಾಯಿ ಗೀತಗಾಯನ ಮಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಇದೊಂದು ಜಾನಪದ ಕಲಾಮಿಶ್ರಿತ ಸಾಹಿತ್ಯ ಸಮ್ಮೇಳನ. ಸಾಹಿತಿಗಳು ಜನಪದ ಕಲಾವಿದರ ಬಗ್ಗೆ ಬರೆಯುತ್ತಾರೆ. ನಾನು ಆ ಕಲಾವಿದರ ಕಲೆಗೆ ವೇದಿಕೆ ನೀಡಿದ್ದೇನೆ. ಇನ್ಮುಂದೆ ಇದೇ ರೀತಿಯ ಸಮ್ಮೇಳನ ಮಾಡುವುದಿದೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಪ್ರೊ.ಸವಿತಾ ನಾಶಿ ನಿರೂಪಣೆ ಮಾಡಿದರು. ದೌಲತರಾಯ ಮಾಲಿಪಾಟೀಲ್ ವಂದಿಸಿದರು.
ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಈ ಹಿಂದಿನ ವರ್ಷಗಳ ಸರ್ವಾಧ್ಯಕ್ಷರಾದ ಪ್ರೊ.ವಸಂತ ಕುಷ್ಟಗಿ, ಡಾ.ಡಿ.ಬಿ.ನಾಯಕ, ಎಲ್.ಬಿ.ಕೆ. ಆಲ್ದಾಳ, ಸಿದ್ಧರಾಮ ಪೊಲೀಸ್ ಪಾಟೀಲ್, ಡಾ.ಸ್ವಾಮಿರಾವ ಕುಲಕರ್ಣಿ, ಆರ್.ಕೆ.ಹುಡಗಿ, ಡಾ.ಶ್ರೀನಿವಾಸ ಸಿರನೂರಕರ್, ಡಾ.ಕೆ.ಎಸ್. ಬಂಧು, ಡಾ.ವಿ.ಜಿ. ಪೂಜಾರ, ಡಾ.ಬಸವರಾಜ ಪೊಲೀಸ್ ಪಾಟೀಲ್, ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್, ಚಿತ್ರಶೇಖರ ಕಂಠಿ, ರವಿ ಹಿರೇಮಠ, ಪ್ರಮುಖರಾದ ನಾಗನಗೌಡ ಕೂಡಿ, ಸಂಭಣ್ಣ ಹೂಗಾರ, ಈರಣ್ಣ ಪಾಟೀಲ್ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಕಸಾಪ ಅಧ್ಯಕ್ಷರು ಉಪಸ್ಥಿತರಿದ್ದರು. ಡಾ.ಸೂರ್ಯಕಾಂತ ಪಾಟೀಲ್ ಸಂಪಾದಿಸಿದ ಸ್ಮರಣ ಸಂಚಿಕೆ ನಮ್ಮೂರ ಹಿರಿಮೆ ಹಾಗೂ ಚಿಗುರೆಲೆ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.

ಕೆಪಿಎಸ್ಸಿ ಸದಸ್ಯರು ಭಾಗಿ: ಸರ್ವಾಧ್ಯಕ್ಷೆ ಡಾ.ನಾಗಾಬಾಯಿ ಬುಳ್ಳಾ ಅವರು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿದ್ದರಿಂದ ಆಯೋಗದ ಸದಸ್ಯರಾದ ರವಿಕುಮಾರ, ಸೈಯದ್ ಅಹ್ಮದ್, ಶ್ರೀಕಾಂತ, ಪ್ರಹ್ಲಾದ, ಅನೀಲ ರೊನಾಲ್ಡ್ ಸಮ್ಮೇಳನದಲ್ಲಿ ಭಾಗವಹಿಸಿ ಡಾ.ಬುಳ್ಳಾ ಅವರಿಗೆ ಶುಭಾಶಯ ಹೇಳಿದರು. ಸಮ್ಮೇಳನ ಸಂಘಟಕರು ಕೆಪಿಎಸ್ಸಿ ಸದಸ್ಯರನ್ನು ವೇದಿಕೆಯಲ್ಲಿ ಆಸೀನರಾಗಲು ಕೋರಿದರೂ ವೇದಿಕೆಗೆ ಹೋಗದೆ, ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಸಮ್ಮೇಳನ ವೀಕ್ಷಿಸಿ ತಮ್ಮ ಘನತೆ ಮೆರೆದರು.

ಸಾಹಿತ್ಯ ಗುಂಪುಗಳ ಗೈರು: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸಾಹ ತೋರುವ ಸಾಹಿತ್ಯದ ಗುಂಪುಗಳು ಸಮ್ಮೇಳನದತ್ತ ಸುಳಿಯಲಿಲ್ಲ. ಸಂಘಟನಾತ್ಮಕ ಭಿನ್ನಾಭಿಪ್ರಾಯ ಬದಿಗೊತ್ತಿ ಸಮ್ಮೇಳನದಲ್ಲಿ ಭಾಗವಹಿಸಬೇಕಿತ್ತು. ವಿಶ್ವವಿದ್ಯಾಲಯದ ಸಾಹಿತಿಗಳಲ್ಲಿ ಒಂದಿಬ್ಬರು ಬಿಟ್ಟರೆ ಉಳಿದವರು ಸಮ್ಮೇಳನದತ್ತ ಬರಲೇ ಇಲ್ಲ. ಸಾಮಾನ್ಯ ಸಾಹಿತ್ಯಾಸಕ್ತರು ಸಾಹಿತಿಗಳನ್ನು ಖುದ್ದು ನೋಡಬೇಕು ಎಂದು ಅಪೇಕ್ಷೆ ಪಡುತ್ತಾರೆ. ಹಿರಿಯ ಸಾಹಿತಿಗಳು ಎನಿಸಿಕೊಂಡವರು ಸಮ್ಮೇಳನಕ್ಕೆ ಬರಬೇಕಿತ್ತು ಎಂದು ಡಾ.ಸೂರ್ಯಕಾಂತ ಪಾಟೀಲ್ ಪ್ರತಿಕ್ರಿಯಿಸಿದರು.

ಮಹಿಳೆಯರಿಗೂ ಮನುಷ್ಯರಂತೆ ನೋಡಿ
ಪ್ರಭಾಕರ ಜೋಶಿ ಕಲಬುರಗಿ
ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣನ್ನು ಹೀನಾಯವಾಗಿ ಕಾಣುತ್ತ ಬರಲಾಗಿದೆ. ಇನ್ಮುಂದಾದರೂ ಮಹಿಳೆಯರನ್ನು ಮನುಷ್ಯರನ್ನಾಗಿ ಕಾಣಬೇಕು ಎಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ನಾಗಾಬಾಯಿ ಬುಳ್ಳಾ ಕರೆ ನೀಡಿದರು.
ಕನ್ನಡ ಭವನದ ಬಾಪುಗೌಡ ದರ್ಶನಾಪೂರ ರಂಗಮಂದಿರದಲ್ಲಿ ಆಯೋಜಿಸಿದ್ದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸರ್ವಾಧ್ಯಕ್ಷೀಯ ಭಾಷಣ ಮಾಡಿದ ಅವರು, ಎಲ್ಲಿ ಮಹಿಳೆಯರಿಗೆ ಪೂಜ್ಯನೀಯ ಗೌರವ ಸಿಗುವುದೋ ಅಲ್ಲಿ ದೇವರು ಇರುತ್ತಾನೆ ಎಂಬ ಆರ್ಯೋಕ್ತಿ ಇಂದು ಸುಳ್ಳಾಗಿದೆ. ಹೆಣ್ಣನ್ನು ದೇವತೆಯಾಗಿ ಮಾಡಿದ್ದಾರೆ. ಆದರೆ ಮನುಷ್ಯಳನ್ನಾಗಿ ಕಾಣುತ್ತಿಲ್ಲ. ಅವಳೊಂದು ಮನುಸ್ಸುಳ್ಳವಳು ಎಂದು ಭಾವಿಸದೆ ಕೇವಲ ದೇಹ ಎಂದು ಭಾವಿಸಿ ಬಿಟ್ಟಿ ವಸ್ತುವಾಗಿ ಕಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್​ ತೀರ್ಪಿತ್ತರೂ ಸಂಪೂರ್ಣ ಸಾಕ್ಷರತೆ ಸಾಧಿಸಿದ ಕೇರಳದ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸುವ ಪಟ್ಟಭದ್ರ ಹಿತಾಸಕ್ತಿಗಳು ಇರುವಾಗ ಸಹಸ್ರಾರು ವರ್ಷಗಳ ಹಿಂದಿನ ಮಹಿಳೆಯರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದರು.
ಮಹಿಳೆಯರ ಬಗೆಗಿನ ಮಾನವೀಯತೆ ಆಧರಿಸಿದ ತಾತ್ವಿಕ ಪರಿಜ್ಞಾನದ ಕೊರತೆಯೇ ಈ ಅನ್ಯಾಯಕ್ಕೆ ಕಾರಣ. ಮನೆಯಲ್ಲಿ ಮಗನಿಗೊಂದು ನೀತಿ, ಮಗಳಿಗೊಂದು ನೀತಿ ಅನುಸರಿಸಿದೆ ಇಬ್ಬರಿಗೂ ಲಿಂಗ ತಾರತಮ್ಯವಿಲ್ಲದಂತೆ ಬೆಳೆಸುವ ಮೂಲಕ ಪರಸ್ತ್ರೀ ಸೋದರಿ ಸಮಾನ ಎಂಬ ಭಾವನೆ ಬಾಲ್ಯದಲ್ಲೇ ಮಗನಲ್ಲಿ ಬಿತ್ತಿದರೆ ಅನಾಹುತಗಳು ಕಡಿಮೆಯಾಗಬಲ್ಲವು ಎಂದು ಸಲಹೆ ನೀಡಿದರು.
ಇಂದು ಕರ್ನಾಟಕದಲ್ಲಿಯೇ ಕನ್ನಡದ ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ಉಂಟಾಗುತ್ತಿದೆ. ಆಂಗ್ಲ ಮಾಧ್ಯಮದಲ್ಲಿ ಓದಿದವರಿಗಿಂತ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ನೀಡಿದರೆ ಕನ್ನಡಿಗರು ಬದುಕು ಕಟ್ಟಿಕೊಳ್ಳಬಹುದು. ಬದುಕಿಗಾಗಿ ಆರ್ಥಿಕ ಸಬಲತೆ ಬೇಕು. ಕನ್ನಡ ನೆಲದಲ್ಲಿ ಬದುಕುವವರೆಲ್ಲರೂ ಕನ್ನಡ ಮಾತನಾಡಬೇಕು. ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಕನ್ನಡ ಬಳಕೆಯಾಗಬೇಕು. ಅನ್ಯಭಾಷೆಗಳ ಮುಖ್ಯವಾಗಿ ಇಂಗ್ಲಿಷ್ ಭಾಷೆ ಗದ್ದಲದಲ್ಲಿ ಕನ್ನಡದ ಅಸ್ಮಿತೆ ಅಳಿಯದಂತೆ ಜಾಗೃತರಾಗಬೇಕು ಎಂದರು.
ಅಭಿವ್ಯಕ್ತಿ ಸ್ವಾತಂತ್ರೃಕ್ಕೆ ಧಕ್ಕೆ ಬಂದಿರುವ ಈ ದಿನಗಳಲ್ಲಿ ವೈಚಾರಿಕ ಮಾತನಾಡಿದರೆ ಪ್ರತಿಭಟನೆಗಳಾಗುತ್ತವೆ. ಬೆದರಿಕೆ ಕರೆಗಳು ಬರುತ್ತವೆ. ಉಸಿರುಗಟ್ಟುವ ವಾತಾವರಣ ನಿಮರ್ಾಣವಾಗಿದೆ. ಇದನ್ನು ತಿಳಿಗೊಳಿಸಲು ಸಾಹಿತಿಗಳು ಸನ್ನದ್ಧರಾಗಬೇಕಿದೆ. ವಿಚಾರವಾದಿಗಳ ಹತ್ಯೆ ಉತ್ತಮ ಸಮಾಜದ ಲಕ್ಷಣವಲ್ಲ. ಕ್ರೂರ ಮನುಸ್ಸುಗಳನ್ನು ಪರಿವರ್ತಿಸಿ ಸಹೃದಯರನ್ನಾಗಿಸುವ ಸಾಹಿತ್ಯ ಶಕ್ತಿ ಕ್ಷೀಣಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಲೇಖಕರ ಮೇಲಿದೆ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷರ ಸಲಹೆಗಳು
* ಕನ್ನಡ ನೆಲದಲ್ಲಿ ಬದುಕುವವರೆಲ್ಲರೂ ಕನ್ನಡ ಮಾತಾಡಬೇಕು
* ಆಡಳಿತದಲ್ಲಿ ಕನ್ನಡ ಸಂಪೂರ್ಣ ಬಳಕೆಯಾಗಬೇಕು
* ಪ್ರತಿ ಕನ್ನಡಿಗನೂ ಆರ್ಥಿಕ ಸಬಲನಾಗಬೇಕು
* ಯುವಕರಿಗೆ ತಾತ್ವಿಕ ಲೋಕ ಪರಿಜ್ಞಾನ ಮೂಡಿಸಬೇಕು
* ಆಧುನಿಕತೆಗಿಂತ ಅಂತರಂಗ ಪರಿವರ್ತನೆ ಮುಖ್ಯ
* ಮಹಿಳೆಯರತ್ತ ಅಮಾನವೀಯ ನಡೆ ಸಲ್ಲದು
* ಬಾಲ್ಯದಲ್ಲೇ ಉದಾತ್ತ ಚಿಂತನೆ ಬಿತ್ತುವುದು ಅಗತ್ಯ
* ಹೆಣ್ಣನ್ನು ಹೀನಾಯ ಕಾಣುವ ದೇಶಕ್ಕೆ ಭವಿಷ್ಯವಿಲ್ಲ
* ಕ್ರೌರ್ಯವಿಲ್ಲದ ಸಮಾಜ ನಿರ್ಮಾಣ ಸಾಹಿತ್ಯದ ಗುರಿ
* ಶಾಲಾ ಪಠ್ಯಕ್ರಮ ಬದಲಾವಣೆ ಅಗತ್ಯ
* ಬಾಲಕಿಯರು ಸಬಲರು ಎಂಬ ಭಾವನೆ ಬಿತ್ತಬೇಕು

ಸಾಂಸ್ಕೃತಿಕ ವೈಭವದ ಸರ್ವಾಧ್ಯಕ್ಷರ ಮೆರವಣಿಗೆ
ಶಾಮಸುಂದರ ಕುಲಕರ್ಣಿ ಕಲಬುರಗಿ
ಎಲ್ಲೆಡೆ ಕನ್ನಡ ಬಾವುಟಗಳ ಮೆರಗು, ನಾಡದೇವಿ ಭುವನೇಶ್ವರಿಗೆ ಜೈಕಾರ, ವಿವಿಧ ಕಲಾ ತಂಡಗಳ ಪ್ರದರ್ಶನ, ಕನ್ನಡತ್ವ ಸಾರುವಂತೆ ಮೇಳೈಸಿದ ಸಾಂಸ್ಕೃತಿಕ ವೈಭವ. ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಮುನ್ನ ಶನಿವಾರ ಬೆಳಗ್ಗೆ ನಗರದಲ್ಲಿ ಸವರ್ಾಧ್ಯಕ್ಷೆ ಡಾ.ನಾಗಾಬಾಯಿ ಬುಳ್ಳಾ ಅವರನ್ನು ಭವ್ಯ ರಥದಲ್ಲಿ ಮೆರವಣಿಗೆ ನಡೆಸಿದ ವೇಳೆ ಕಂಡುಬಂದ ದೃಶ್ಯಗಳಿವು.
ಗಂಜ್ ಪ್ರದೇಶದ ನಗರೇಶ್ವರ ಶಾಲೆ ಆವರಣದಿಂದ ಕನ್ನಡ ಭವನವರೆಗೆ ಸಮ್ಮೇಳನಾಧ್ಯಕ್ಷರನ್ನು ವೈಭವದ ಮೆರವಣಿಗೆ ಮೂಲಕ ಬಾಪುಗೌಡ ದರ್ಶನಾಪುರ ರಂಗಮಂದಿರದ ವೇದಿಕೆಗೆ ಕರೆ ತರಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ  ಚಾಲನೆ ನೀಡಿದ ಮೆರವಣಿಗೆಯು ನಗರೇಶ್ವರ ಬಾಲ ಭವನ, ಕಿರಾಣಾ ಬಜಾರ್, ಸೂಪರ್ ಮಾರ್ಕೇಟ್, ಜಗತ್ ವೃತ್ತ, ಸದರ್ಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಕನ್ನಡ ಭವನವರೆಗೆ ಸಾಗಿತು.
ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಕನ್ನಡಾಭಿಮಾನಿಗಳು ಜೈಘೋಷ ಮೊಳಗಿಸಿದರೆ, ಪೋತರಾಜರ ಕುಣಿತ ಹಾಗೂ ಕುರಕುಂಟಾದ ಮಹೇಶ್ವರಿ ಹಲಿಗೆ ತಂಡದ ಪ್ರದರ್ಶನ ಮೆರವಣಿಗೆಗೆ ಮೆರಗು ತಂದುಕೊಟ್ಟವು. ಮಹಿಳೆಯರು ಹಲಿಗೆ ಬಾರಿಸುವುದು ವಿಶೇಷವೆನಿಸಿತು. ತುಮಕೂರಿನ ಗಾರುಡಿ ಗೊಂಬೆಗಳ ತಂಡ ಕಣ್ಮನ ಸೆಳೆಯಿತು. ಹಂಚಿನಾಳದ ಚಿಟ್ಟಲಗಿ ಮೇಳ, ಯಡ್ರಾಮಿಯ ಬೀರಲಿಂಗೇಶ್ವರ ಡೊಳ್ಳಿನ ಸಂಘ, ಮಾಡಿಯಾಳದ ವೀಣೇಶ್ವರ ಭಜನಾ ಮಂಡಳಿ, ಮಾರುತಿ ಬುಡಗಂಜ ಹಗಲುವೇಷ ಕಲಾ ತಂಡ, ಸಿರವಾಳದ ಮೌಲಾಲಿ ಹೆಜ್ಜೆ ತಂಡ, ಸಂಗಮೇಶ ಹೂವಿನಳ್ಳಿ ಮತ್ತು ಸಂಗಡಿಗರ ಪೋತರಾಜ ಕುಣಿತ, ಮಣ್ಣೂರಿನ ಭೀಮಾಶಂಕರ ಹಡಪದ ಸಂಗಡಿಗರ ಕರಡಿ ಕುಣಿತ, ಮಣ್ಣೂರಿನ ಸುನೀಲ ಮತ್ತು ಸಂಗಡಿಗರ ಹಲಗೆ ವಾದನ, ಮಾರುತಿ ಚವ್ಹಾಣ್ ಮತ್ತು ಸಂಗಡಿಗರ ಗೊಂದಳಿ ಮೇಳ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡದೊಂದಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಮೆರವಣಿಗೆಗೆ ಕಳೆ ತಂದುಕೊಟ್ಟರು.
ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಮಹಾನಗರ ಪಾಲಿಕೆ ಮೇಯರ್ ಮಲ್ಲಮ್ಮ ವಳಕೇರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮಲಾಜಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಮೆರವಣಿಗೆ ಸಮಿತಿ ಅಧ್ಯಕ್ಷ ಶರಣು ಕಡಗಂಚಿ, ಲಿಂಗರಾಜ ಸಿರಗಾಪುರ, ದೌಲತರಾಯ ಪಾಟೀಲ್, ರಾಜೇಂದ್ರ ಝಳಕಿ, ಪ್ರೊ.ಸವಿತಾ ನಾಶಿ, ಆನಂದ ನಂದೂರ, ವಿಜಯಕುಮಾರ ಪರೂತೆ, ಶಿವಶರಣಪ್ಪ ಬನ್ನಿಕಟ್ಟಿ, ಮಲ್ಲಯ್ಯ ಗುತ್ತೇದಾರ್, ವಿಶ್ವನಾಥ ಕಟ್ಟಿಮನಿ, ನಾಗೇಂದ್ರಪ್ಪ ಹೊನ್ನಳ್ಳಿ, ಮಡಿವಾಳಪ್ಪ ನಾಗರಳ್ಳಿ, ಡಾ.ಸುಜಾತಾ ಬಂಡೇಶರಡ್ಡಿ, ನಾಗನಗೌಡ ಕೂಡಿ, ಸಂಬಣ್ಣ ಹೂಗಾರ, ಈರಣ್ಣ ಪಾಟೀಲ್, ವಿಜಯಕುಮಾರ ತೇಗಲತಿಪ್ಪಿ, ಗೌಡಪ್ಪಗೌಡ, ನೀಲಕಂಠ ಮುತ್ತಗಿ, ಎಸ್.ವಿ.ಹತ್ತಿ, ಡಾ.ಸೂರ್ಯಕಾಂತ ಪಾಟೀಲ್ ಇತರರಿದ್ದರು.
ಶರಣರದ್ದು ಕನ್ನಡದ ಮೇರು ಸಾಹಿತ್ಯ: ಸಂಸ್ಕೃತ ಭಾಷೆ ಪ್ರಭಾವವಿರುವ ಸಂದರ್ಭದಲ್ಲಿ ಶಿವಶರಣರು ಕನ್ನಡದಲ್ಲಿ ವಚನ ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕಿ ಸುಜಾತಾ ಪಾಟೀಲ್ ಹೇಳಿದರು. `ಕನ್ನಡ ಸಾಹಿತ್ಯಕ್ಕೆ ಸತ್ವ ತುಂಬಿದ ನೆಲೆಗಳು’ ಗೋಷ್ಠಿಯಲ್ಲಿ ಶರಣ ಸಾಹಿತ್ಯ ಕುರಿತು ಉಪನ್ಯಾಸ ಮಂಡಿಸಿದ ಅವರು, ವಚನ ಸಾಹಿತ್ಯ ಜೀವನ ರೂಪಿಸುತ್ತದೆ. ಸರಳವಾಗಿ ಜನಸಾಮಾನ್ಯರಿಗೆ ತಿಳಿಯುವಂತೆ ಶರಣರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಶರಣರು ಆಡಿದ ಮಾತುಗಳೇ ಸಾಹಿತ್ಯವಾಗಿ ಹೊರಹೊಮ್ಮಿವೆ ಎಂದರು. ತತ್ವ ಪದ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಡಾ.ಈಶ್ವರ ಕೊಡಂಬಲ್, ಕಲಬುರಗಿ ಜಿಲ್ಲೆಯಲ್ಲಿ ಅನೇಕ ತತ್ವ ಪದಕಾರರು ಆಗಿ ಹೋಗಿದ್ದಾರೆ. ಅವರಲ್ಲಿ ಕಡಕೋಳ ಮಡಿವಾಳೇಶ್ವರರು ಕೂಡ ಒಬ್ಬರು. ಸಮಾಜದಲ್ಲಿನ ತಪ್ಪನ್ನು ಯಾವುದೇ ಮುಲಾಜಿಲ್ಲದೆ ಖಂಡಿಸಿದ್ದಾರೆ. ಆಡುವ ಭಾಷೆಯಲ್ಲಿ ಪದ ರಚಿಸುವ ಮೂಲಕ ಜನಪ್ರಿಯರಾಗಿದ್ದಾರೆ ಎಂದರು. ಹಿರಿಯ ಸಾಹಿತಿ ಡಾ.ವಿ.ಜಿ. ಪೂಜಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಅಪ್ಪಾಸಾಹೇಬಗೌಡ ಪಾಟೀಲ್, ಜಗನ್ನಾಥ ಆಲಮೇಲಕರ್, ಬಸವರಾಜ ಹಡಪದ, ಡಾ.ಶರಣಬಸಪ್ಪ ಒಡ್ಡನಕೇರಿ, ಅನೀಲ ಸಕ್ರಿ, ಕಾಶೀನಾಥ ಗುತ್ತೇದಾರ್, ಆನಂದ ನಂದೂರ ಉಪಸ್ಥಿತರಿದ್ದರು.
ಪುಸ್ತಕ ಮಳಿಗೆ ವ್ಯಾಪಾರ ಉತ್ತಮ: ಸಮ್ಮೇಳನದಲ್ಲಿ ಪುಸ್ತಕ ಮರಾಟ ಮಳಿಗೆ ಹಾಗೂ ಖಾದಿ ವಸ್ತ್ರಗಳ ಮಾರಾಟ ಮಳಿಗೆಗಳು ಗಮನ ಸೆಳೆದವು. ಖ್ಯಾತ ಸಾಹಿತಿಗಳ, ಬರಗಾರರು ಕಥೆ, ಕಾದಂಬರಿ, ಕವನ ಸಂಕಲನ, ಜೀವನ ಚರಿತ್ರೆ, ಪ್ರವಾಸ ಕಥನಗಳು ಮಾರಾಟ ಮಳಿಗೆಯಲ್ಲಿ ಲಭ್ಯವಿದ್ದವು. ನವ ಕನರ್ಾಟಕ ಪುಸ್ತಕ ಮಳಿಗೆ, ಸಪ್ನಾ ಬುಕ್ ಹೌಸ್ ಮಳಿಗೆಗಳಲ್ಲದೇ ಇತರೆ ಕೆಲವು ಪುಸ್ತಕ ವ್ಯಾಪಾರಿಗಳು ಸಹ ಪುಸ್ತಕಗಳ ಮಾರಾಟ ವ್ಯವಸ್ಥೆ ಮಾಡಿಕೊಂಡಿದ್ದರು. ಸಮ್ಮೇಳನಕ್ಕೆ ಬಂದವರು ಪುಸ್ತಕ ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು. ಖಾದಿ ವಸ್ತ್ರಗಳ ಮಾರಾಟ ಜೋರಾಗಿ ನಡೆಯಿತು. ಸಮ್ಮೇಳನದಲ್ಲಿ ಅಚ್ಚುಕಟ್ಟಾದ ಊಟ ವ್ಯವಸ್ಥೆ ಮಾಡಲಾಗಿತ್ತು.
ಶೂದ್ರ ತಪಸ್ಸಿಗೆ ಬಾಗಿದ ರಾಮ ಬೇಕು: ನಮಗೀಗ ಬಿಲ್ಲು ಬಾಣ ಹಿಡಿದ ವಾಲ್ಮೀಕಿಯ ರಾಮ ಬೇಕಾಗಿಲ್ಲ. ಶೂದ್ರ ತಪಸ್ಸಿಗೆ ತಲೆಬಾಗಿದ ಕುವೆಂಪು ಸೃಷ್ಟಿಸಿದ ರಾಮ ಬೇಕು ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಸಬರದ ಹೇಳಿದರು. ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಹೆಜ್ಜೆ ಗುರುತು ಎಂಬ ಎರಡನೇ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಸ್ಮಾರಕ ನಿರ್ಮಾಣದ ಪರಿಕಲ್ಪನೆ ಬದಲಾಗಬೇಕಿದೆ. ಆಳುಗರ ಸ್ಮಾರಕದ ಬದಲಿಗೆ ಆಳಿನ ಸ್ಮಾರಕ ನಿರ್ಮಾಣವಾಗಬೇಕಿದೆ ಎಂದು ಪ್ರತಿಪಾದಿಸಿದರು. ಅಲಕ್ಷಿತ ಸಾಂಸ್ಕೃತಿಕ ನೆಲೆಗಳು ಕುರಿತು ಮುಡುಬಿ ಗುಂಡೇರಾವ, ನಮ್ಮ ಪರಂಪರೆ ಸಾಹಿತಿಗಳು ಕುರಿತು ಡಾ.ಶೈಲಜಾ ಕೊಪ್ಪರ, ನಮ್ಮ ನೆಲದ ಸಾಧಕರು ಕುರಿತು ಡಾ.ಪಂಡಿತ ಬಿ.ಕೆ.ಚಿತ್ತಾಪುರ ಅರ್ಥಪೂರ್ಣವಾಗಿ ವಿಚಾರ ಮಂಡಿಸಿದರು. ಮಲ್ಲಿಕಾಜರ್ುನ ಪಾಲಮೂರ ಸ್ವಾಗತಿಸಿದರು. ವಿಶ್ವನಾಥ ಭಕರೆ ವಂದಿಸಿದರು. ಬಾನೂಕುಮಾರ ಗಿರೆಗೋಳ ನಿರೂಪಣೆ ಮಾಡಿದರು.

ಕವಿತೆ ಎಂಬ ಬೆದರು ಬೊಂಬೆ: ಹಿರಿಯ ಕವಿ ಪ್ರೊ.ರವೀಂದ್ರ ಕರ್ಜಗಿ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಬಹಳಷ್ಟು ಕವಿಗಳು ಹಾಡಿನ ಮೊರೆ ಹೋದರು. ವಿಠ್ಠಲ್ ವಗ್ಗನ್ ವಾಚಿಸಿದ ಅವರು ದೇವರೆಂಬ ಬೆದರು ಬೊಂಬೆ ಕವಿತೆು ದೇಶದ ಪ್ರಚಲಿತ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಿಂಬಿಸಿತು. ಬಸವರಾಜ ಯಲಗಾರ, ಪ್ರವೀಣ ಕುಲಕರ್ಣಿ, ಸುಮಂಗಲಾ ಹಿರೇಮಠ, ಮಲ್ಲಮ್ಮ ಎಸ್.ಕಾಳಗಿ, ರವಿ ರುದ್ರವಾಡಿ, ಶಿವಶರಣಪ್ಪ ಬಡದಾಳ, ಗಾಯತ್ರಿ ದೇಸಾಯಿ, ಅಮೃತ ತಳಕೇರಿ, ರಂಗನಾಥರಾವ ಕುಲಕರ್ಣಿ, ಡಾ.ರಾಜಶೇಖರ ಮಾಂಗ್, ಡಾ.ಕರುಣಾ ಜಮದ್ರಖಾನಿ, ವೀರಯ್ಯ ಸ್ವಾಮಿ ಮೂಲಿಮನಿ, ರಮಾ ನಂದೂರಕರ್, ಎಚ್.ಎಸ್.ಬೇನಾಳ, ಕಾಂಚನಾ, ನರಸಿಂಗರಾವ ಹೇಮನೂರ, ಶಾಂತಪ್ಪ ಕಲ್ಲೂರ, ಸಿದ್ದಣ್ಣ ಕನ್ನಡಗಿ, ರಜನಿಕಾಂತ ಬರೂಡೆ, ಶಂಕರಲಿಂಗ ಹೆಂಬಾಡಿ, ಭೀಮರಾಯ ಆಡಕಿ ಸೇರಿ 40ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಜಿ.ಜಿ.ವಣಕ್ಯಾಳ ನಿರೂಪಣೆ ಮಾಡಿದರು. ಡಿ.ಎಂ.ನದಾಫ್, ಮಲ್ಲಪ್ಪ ಜೆ.ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Stay connected

278,747FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....