ಹೊರ ರಾಜ್ಯದಲ್ಲಿವೆ ಕನ್ನಡ ಹಳ್ಳಿಗಳು

ಶಿರಸಿ: ಕರ್ನಾಟಕ ಏಕೀಕರಣವಾದರೂ ಕನ್ನಡ ಜನರಿರುವ 262 ಹಳ್ಳಿಗಳು ರಾಜ್ಯದ ಹೊರಗಿವೆ. ಅವೆಲ್ಲ ಕರ್ನಾಟಕಕ್ಕೆ ಸೇರಿಸಿದಾಗ ಮಾತ್ರ ಅಖಂಡ ಕರ್ನಾಟಕವಾಗುತ್ತದೆ ಎಂದು ಸಾಹಿತಿ ವಿಷ್ಣು ನಾಯ್ಕ ಹೇಳಿದರು.

ತಾಲೂಕಿನ ಬನವಾಸಿಯಲ್ಲಿ ಕದಂಬ ಸೈನ್ಯ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ‘ಕದಂಬ ಚಕ್ರೇಶ್ವರ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಕದಂಬರ ಹೆಸರು, ಮಯೂರವರ್ಮನ ಹೆಸರು ದೊಡ್ಡದು. ಬನವಾಸಿಯ ಮಣ್ಣಿನ ಮಹತ್ವ ಅತ್ಯಂತ ಪ್ರಮುಖವಾಗಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಉಪವಿಭಾಗಾಧಿಕಾರಿ ರಾಜು ಮೊಗವೀರ ಮಾತನಾಡಿ,‘ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿರುವುದು ನೆರವಾಗಲಿದೆ’ ಎಂದರು.

ನಾಡಿನ 14 ಜನರಿಗೆ ಅವರ ವಿವಿಧ ರಂಗದ ಸೇವೆ ಗಮನಸಿ ಕದಂಬ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಎಸ್. ಹೆಬ್ಬಾರ, ಶಿಕ್ಷಣ ತಜ್ಞ ಎಂ. ಎಂ. ಭಟ್ಟ , ಯಕ್ಷಗಾನ ಬಾಲ ಕಲಾವಿದೆ ತುಳಸಿ ಹೆಗಡೆ ಬೆಟ್ಟಕೊಪ್ಪ, ಸಾಮಾಜಿಕ ಮುಖಂಡ ಗಣಪತಿ ನಾಯ್ಕ ಭಾಶಿ, ಧಾರ್ವಿುಕ ಕ್ಷೇತ್ರದ ಸಾಧಕರಾದ ರಾಮದಾಸ ದತ್ತಪ್ಪ ಚೌಧರಿ ಬನವಾಸಿ, ಕೃಷಿ ತಜ್ಞ ಸೋಮಶೇಖರ ಗೌಡ್ರು ದಳವಾಯಿ ಹೊಸಕೊಪ್ಪ, ಸಾಮಾಜಿಕ ಮುಂದಾಳು ಸಿ.ಬಿ. ಗೌಡರ್ ಅಂಡಗಿ, ಸೊರಬದ ತಾ.ಪಂ. ಉಪಾಧ್ಯಕ್ಷ ಸುರೇಶ ಹಾವಣ್ಣನವರ, ಧಾರ್ವಿುಕ ಕ್ಷೇತ್ರದ ಸಾಧಕಿ ಸಾವಿತ್ರಮ್ಮ ಕಾನಸೂರು, ಮುದೋಳದ ಸದು ಗೌಡ ಪಾಟೀಲ, ವಿಜಯಪುರ ಸಾಯಬಣ್ಣ ಬೆನಕನಳ್ಳಿ, ವಿಜಯಪುರದ ಮೋಹನ ರುದ್ರಪ್ಪ ಭೂತನಾಳ, ಕನ್ನಡ ಹೋರಾಟಗಾರ ಅಂದಾನಿ ಸೋಮನಹಳ್ಳಿ ಮಂಡ್ಯ, ಗದಗದ ಮೋತಿಲಾಲ ನಾಗೋಸಾ ಕಬಾಡಿಯವರನ್ನು ಗೌರವಿಸಲಾಯಿತು.

ಸನ್ಮತಿ ಸಾಹಿತ್ಯ ಪೀಠದ ಅಧ್ಯಕ್ಷ ಧರಣೇಂದ್ರ ಕುರಕುರಿ, ಕಿರುತೆರೆ ನಟ ಪವನ ವಸಂತ ಭಟ್, ಬನವಾಸಿ ದೇವಸ್ಥಾನದ ಉಪಾಧ್ಯಕ್ಷ ಶಿವಾನಂದ ದೀಕ್ಷಿತ ಮಾತನಾಡಿದರು. ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಚಾಲಕ ಉದಯಕುಮಾರ ಕಾನಳ್ಳಿ ಪ್ರಾಸ್ತಾವಿಕ ಮಾತನಾಡಿದರು.