More

    ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರೂ ಕೈಜೋಡಿಸಿ

    ಶೃಂಗೇರಿ: ಸಾಹಿತ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಶೃಂಗೇರಿ ಕ್ಷೇತ್ರ ನೀಡಿದ ಕೊಡುಗೆ ಅನನ್ಯ. ಇಂತಹ ನೆಲೆಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವನ್ನು ನಾವು ಗೌರವಿಸಬೇಕು. ಅದನ್ನು ಹಾಳು ಮಾಡಬಾರದು ಎಂದು ಕೊಪ್ಪ ತಾಲೂಕು ರೈತ ಸಂಘದ ಅಧ್ಯಕ್ಷ ನವೀನ್ ಕರುವಾನೆ ತಿಳಿಸಿದರು.

    16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಮತ್ತು ಸದಸ್ಯರು ಸೋಮವಾರ ತಾಲೂಕು ಕಚೇರಿ ಸಮೀಪ ಆಯೋಜಿಸಿದ್ದ ‘ಪ್ರೀತಿಯಿಂದ ಸಮ್ಮೇಳನ ನಡೆಸೋಣ ಬನ್ನಿ’ ಕಾರ್ಯಕ್ರಮದಲ್ಲಿ ಮಾತನಾಡಿ, ಕಲ್ಕುಳಿ ವಿಠ್ಠಲ್ ಹೆಗ್ಡೆ ಅವರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಕುರಿತು ರಾಜ್ಯದ ಯಾವ ಸಾಹಿತಿಗಳೂ ಚಕಾರ ಎತ್ತಿಲ್ಲ. ಅನುದಾನ ನೀಡದಿದ್ದರೂ ಕನ್ನಡದ ತೇರನ್ನು ಎಳೆಯುವ ಕಾಯಕದಲ್ಲಿ ಒಗ್ಗಟ್ಟಾಗಿ ಸರ್ವರೂ ದುಡಿಯಬೇಕು ಎಂದರು.

    ಕಸಾಪದ ಆಜೀವ ಸದಸ್ಯ ಹಾಲಪ್ಪ ಗೌಡ ಮಾತನಾಡಿ, ಸಮ್ಮೇಳನದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದಿದೆ. ವಿಠ್ಠಲ್ ಹೆಗ್ಡೆ ಬೇಡ ಎನ್ನುವುದು ತಪ್ಪು ಅಭಿಪ್ರಾಯ. ಸಮ್ಮೇಳನದ ಯಶಸ್ವಿಗೆ ಸರ್ವರೂ ಕೈಜೋಡಿಸಬೇಕು ಎಂದು ಹೇಳಿದರು.

    ಕುರುಬಕೇರಿ ಸರ್ಕಲ್​ನಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.

    ತಾಲೂಕು ಕಸಾಪ ಪೂರ್ವಾಧ್ಯಕ್ಷ ವಿ.ಆರ್.ನಟಶೇಖರ್, ಬೇಗಾನೆ ಕಾಡಪ್ಪ ಗೌಡ, ಪೂರ್ಣಿಮಾ ಸಿದ್ಧಪ್ಪ, ಎಚ್.ಎ.ಶ್ರೀನಿವಾಸ್, ಸಲಹಾ ಸಮಿತಿ ಸದಸ್ಯರಾದ ಮಲ್ಲಪ್ಪ ಹೆಗ್ಡೆ, ಬಿ.ವಿ.ಶಂಕರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೂಡಿಗೆ ನಟರಾಜ್. ಪಪಂ ಸದಸ್ಯರಾದ ರೂಪಾ ಪೈ, ಆಶಾ ದಿನೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ದಿನೇಶ್ ಶೆಟ್ಟಿ, ಶಿವಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts