ಗೋಕಾಕ: ಪ್ರತಿಯೊಬ್ಬ ಕನ್ನಡಿಗ ಕನ್ನಡ ಕಟ್ಟಲು ಕಂಕಣಬದ್ಧರಾದರೆ ಮಾತ್ರ ಭಾಷೆ ಉಳಿಸಿ ಬೆಳೆಸಲು ಸಾಧ್ಯ ಎಂದು ಕರುನಾಡ ಯುವ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಈಳಿಗೇರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕರುನಾಡ ಯುವ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿ, ಶ್ರೀಮಂತ ಭಾಷೆ ಕನ್ನಡದ ಬಗ್ಗೆ ಅಪಾರ ಹೆಮ್ಮೆ ಇರಬೇಕೆಂದರು. ನೆಲ-ಜಲ ಅಭಿವೃದ್ಧಿಗಾಗಿ ಶ್ರಮಿಸಬೇಕು.
ಕನ್ನಡತಾಯಿ ರಕ್ಷಣೆ ನಮ್ಮ ಕರ್ತವ್ಯ ಎಂದರು. ಕರುನಾಡ ಯುವ ಸಮಿತಿ ರಾಜ್ಯ ಉಪಾಧ್ಯಕ್ಷರನ್ನಾಗಿ ಶಿವಾನಂದ ಮಾದರ, ಜಿಲ್ಲಾಧ್ಯಕ್ಷರನ್ನಾಗಿ ರಾಯಪ್ಪ ತಳವಾರ, ತಾಲೂಕಾಧ್ಯಕ್ಷರನ್ನಾಗಿ ಯಲ್ಲಪ್ಪ ದುರದುಂಡಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕರ್ತರು ರಾಜ್ಯಾಧ್ಯಕ್ಷ ಬಸವರಾಜ ಈಳಿಗೇರ ಅವರನ್ನು ಸತ್ಕರಿಸಿದರು. ಮುಖ್ಯತಿಥಿಗಳಾಗಿ ಮುಖಂಡರಾದ ಯೂನುಸ್ ನದ್ಾ, ಕಿರಣ ಸೇವಾಳೆ, ಇಮಾಮ್ ಮಕಾನದಾರ್, ಕುತ್ಬುದ್ದಿನ್ ಮುಲ್ಲಾ, ಕೆಂಪಯ್ಯ ಕುರಬನ್ನವರ, ಬಸು ಪವಾರ, ಲಕ್ಷ್ಮೀ ಪಾಟೀಲ ಇತರರಿದ್ದರು.