21.7 C
Bengaluru
Tuesday, January 21, 2020

ಅಕ್ಷರಜಾತ್ರೆಯ ಗೋಷ್ಠಿಯಲ್ಲೇ ಅಸಹಿಷ್ಣುತೆ ಕಿಡಿ ಸ್ಫೋಟ

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಧಾರವಾಡ: ಆಂಗ್ಲ ಮಾಧ್ಯಮ ವಿಚಾರದಲ್ಲಿ ಉದ್ಘಾಟನೆ ದಿನದಂದೇ ಸಾಹಿತಿಗಳು ಹಾಗೂ ಸರ್ಕಾರದ ನಡುವಿನ ಸವಾಲ್ ಜವಾಬ್​ಗೆ ವೇದಿಕೆ ಆಗಿದ್ದ್ದ 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ‘ಅಸಹಿಷ್ಣುತೆ’ ಕಿಡಿ ಸ್ಪೋಟಗೊಂಡಿತು. ‘ವೈಚಾರಿಕತೆ ಮತ್ತು ಅಸಹಿಷ್ಣುತೆ’ ಗೋಷ್ಠಿ ನಡೆಯುತ್ತಿರುವಾಗಲೇ ಅಸಹಿಷ್ಣುತೆ ಪ್ರದರ್ಶನವಾಗಿದ್ದರಿಂದ ವೈಚಾರಿಕತೆ ಪಕ್ಕಕ್ಕೆ ಸರಿದು ಬಾಯಿಮಾತಿನ ಅಬ್ಬರದಲ್ಲಿ ಸಭಾಂಗಣ ಗೊಂದಲದ ಗೂಡಾಯಿತು.

ವಿವಾದಾಸ್ಪದ ವಿಷಯವೊಂದರ ಮೇಲೆ ಏರ್ಪಾಡಾಗಿದ್ದ ಗೋಷ್ಠಿಯಲ್ಲಿ ನಟಿ ಮಾಳವಿಕಾ ಅವಿನಾಶ್ ವಿಚಾರ ಮಂಡನೆ ವೇಳೆ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅಥವಾ ಪ್ರಮುಖ ಹೊಣೆಗಾರಿಕೆ ಇರುವ ಸಂಘಟಕರಾರೂ ಸಭಾಂಗಣದಲ್ಲಿ ಕಾಣಲಿಲ್ಲ. ಹೀಗಾಗಿ, ಸಭಾಂಗಣದ ಹೊರಗೆ ನಿಂತಿದ್ದ ಪೊಲೀಸರೇ ಬಂದು ಗೊಂದಲ ಪರಿಹರಿಸಬೇಕಾಯಿತು. ಆ ಮೂಲಕ ಇದೇ ಮೊದಲ ಬಾರಿ ಗೋಷ್ಠಿಯೊಂದರಲ್ಲಿ ಖಾಕಿ ಮಧ್ಯಪ್ರವೇಶಿಸಿದ ಕಹಿ ಘಟನೆಗೂ ಸಮ್ಮೇಳನ ಸಾಕ್ಷಿಯಾಯಿತು.

ಅಸಹಿಷ್ಣುತೆ ವಿಚಾರ ಮಂಡಿಸುವಾಗ ಗದ್ದಲ ಎದ್ದಿದ್ದರಿಂದ ಮಾಳವಿಕಾ ಅರ್ಧಕ್ಕೆ ವಿಚಾರ ಮಂಡನೆ ಸ್ಥಗಿತಗೊಳಿಸಿ, ಪುನಃ ಆರಂಭಿಸಿದಾಗಲೂ ಗಲಾಟೆ ಕೇಳಿಬಂದಿದ್ದರಿಂದ ಪ್ರತಿಭಟನಾರ್ಥ ಸ್ಥಗಿತಗೊಳಿಸುತ್ತೇನೆ ಎಂದು ಘೊಷಿಸಿ, ಹಲವರ ಒತ್ತಾಯದ ಮೇರೆಗೆ ಪುನಃ ವಿಚಾರ ಮಂಡಿಸಿದರು.

ಇಂಥ ವಿವಾದಿತ ವಿಷಯದ ಮೇಲಿನ ಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಪ್ರಮುಖರು ಉಪಸ್ಥಿತರಿಲ್ಲದಿರುವ ಬಗ್ಗೆ ಕೆಲ ಸಭಿಕರು ಆಕ್ಷೇಪ ವ್ಯಕ್ತಪಡಿಸಿದರು. ಸಾಹಿತ್ಯಾಸಕ್ತರಾಗಿದ್ದರೆ ಚರ್ಚೆಯನ್ನು ಅಪೇಕ್ಷೆ ಪಡುತ್ತಿದ್ದರು. ತಮ್ಮ ಅಭಿಪ್ರಾಯವನ್ನು ಚೀಟಿ ಬರೆದು ವೇದಿಕೆಗೆ ಕಳುಹಿಸುತ್ತಿದ್ದರು. ಆದರೆ ಗದ್ದಲ ಎಬ್ಬಿಸಿ ಧಾರವಾಡ ಸಮ್ಮೇಳನಕ್ಕೆ ಕಪ್ಪು ಚುಕ್ಕೆ ಇಡಲೆಂದೇ ಕೆಲವರು ಬಂದಿದ್ದಾರೆ ಎಂದು ಕೆಲ ಸಭಿಕರು ಅಸಮಾಧಾನ ವ್ಯಕ್ತಪಡಿಸಿದರು.

ವೇದಿಕೆ ಎದುರು ರಂಪಾಟ: ವೇದಿಕೆಯಲ್ಲಿದ್ದವರು ಮತ್ತು ಇತರರು ಅವಾಕ್ಕಾಗಿ ನೋಡುತ್ತಿದ್ದಾಗಲೇ ಪರ-ವಿರೋಧದ ಧ್ವನಿ ತಾರಕಕ್ಕೇರಿ ಸಭೆಯಲ್ಲಿ ಗದ್ದಲವೇ ನಡೆಯಿತು. ಗೋಷ್ಠಿ ನಿರೂಪಕರು ಮೈಕ್​ನಲ್ಲಿ ಹೇಳಿದ ಮಾತು ಸಹ ಯಾರಿಗೂ ಸ್ಪಷ್ಟವಾಗಿ ಕೇಳದಂತಾಯಿತು ಮತ್ತು ಅವರ ಮಾತನ್ನು ಪರ-ವಿರೋಧ ವಾದ ಮಂಡಿಸುತ್ತಿದ್ದ ಸಭಿಕರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಾಳವಿಕಾ ಮೈಕ್ ಬಿಟ್ಟು ಕುರ್ಚಿಗೆ ಹೋಗಿ ಕುಳಿತುಕೊಂಡರು.

ಕೆಲವರು ಕುಳಿತಲ್ಲಿಂದ ಎದ್ದು ವೇದಿಕೆ ಎದುರು ಹೋಗಿ ಮಾಳವಿಕಾ ಮಾತು ಸಾಕು ಎಂದು ಕೂಗಾಡಿದರೆ ಮತ್ತೆ ಕೆಲವರು ಅವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಮಾತಾಡಬೇಕು ಎಂದು ಒತ್ತಾಯಿಸಿದರು. ಆಗ ಪೊಲೀಸರು ಮಧ್ಯಪ್ರವೇಶಿಸಿ, ಗೋಷ್ಠಿ ನಡೆಸಲು ತೊಂದರೆ ಮಾಡಬೇಡಿ, ಪ್ರಶ್ನೆಗಳಿದ್ದರೆ ಆಮೇಲೆ ಕೇಳುವಂತೆ ನಿರೂಪಕರು ಹೇಳುತ್ತಿದ್ದಾರೆ ಎಂದು ಜನರನ್ನು ಸಮಾಧಾನಪಡಿಸಿದರು.

ಮಾಳವಿಕಾ ತಿರುಗೇಟು: ಗದ್ದಲದ ಬಳಿಕವೂ ಮತ್ತೆ ವಿಚಾರ ಮಂಡನೆಗೆ ಮುಂದಾದ ಮಾಳವಿಕಾ, ‘ನೀವು ಇಷ್ಟು ಅಸಹಿಷ್ಣುಗಳಾದರೆ ಹೇಗೆ? ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ’ ಎಂದು ತಿರುಗೇಟು ನೀಡಿದರು. ಮತ್ತೆ ಕೆಲವರು ಎದ್ದುನಿಂತು ಗದ್ದಲ ಎಬ್ಬಿಸಿದಾಗ ಕುಪಿತರಾದ ಮಾಳವಿಕಾ, ‘ನಿಮ್ಮ ಅಸಹಿಷ್ಣುತೆಯನ್ನು ಖಂಡಿಸುತ್ತೇನೆ. ನಾನು ಪ್ರತಿಭಟನಾರ್ಥ ನನ್ನ ವಿಚಾರ ಮಂಡನೆ ಸ್ಥಗಿತಗೊಳಿಸುತ್ತೇನೆ’ ಎಂದು ಮೈಕ್​ನಲ್ಲೇ ಘೊಷಿಸಿದರು. ‘ನಿಮಗೆ ಸಮಾಧಾನ ಆಯಿತಾ?’ ಎಂದು ಅಸಮಾಧಾನದಿಂದ ಕೇಳಿ, ತಮ್ಮ ಆಸನಕ್ಕೆ ಮರಳಿದರು. ಹಲವು ಸಭಿಕರ ಒತ್ತಾಯದ ಮೇಲೆ

ಪುನಃ ಪೋಡಿಯಂಗೆ ಬಂದ ಮಾಳವಿಕಾ ವಿಚಾರ ಮಂಡನೆ ಪೂರ್ಣಗೊಳಿಸಿದರು. ಮುಂದೆ ಸಂವಾದಕ್ಕೆ ಅವಕಾಶ ಸಿಗಬಹುದು ಎಂದುಕೊಂಡು ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಗೋಷ್ಠಿಯ ನಂತರ ಸಂವಾದ ನಡೆಯಲಿಲ್ಲ. ಕೆಲವರು ಪ್ರಶ್ನೆಗಳಿವೆ ಎಂದು ಕೂಗಿದರೂ ನಿರೂಪಕರು ವಂದನಾರ್ಪಣೆಯೊಂದಿಗೆ ಪೂರ್ಣಗೊಳಿಸಿದರು. ಪ್ರಶ್ನೆಗಳಿದ್ದರೆ ಆಮೇಲೆ (ಹೊರಗಡೆ) ಕೇಳಿ ಎಂದು ಹೇಳಿ ಮಾಳವಿಕಾ ವೇದಿಕೆ ಇಳಿದು ಹೊರಟರು. ಕೆಲವರು ಅವರ ಭೇಟಿಗೆ ಯತ್ನಿಸಿದರೂ ಪೊಲೀಸರು ತಡೆದರು. ಮಾಳವಿಕಾ ಕಾರು ಏರಿ ತೆರಳಿದರು.

ಯಾವ ಮಾತಿಗೆ ಆಕ್ಷೇಪ

ಭಾರತ ಮತ್ತು ಹಿಂದುತ್ವದ ರಕ್ತದಲ್ಲೇ ಸಹಿಷ್ಣುತೆ ಇದೆ. ಆದರೆ ತಮಗೆ ಒಪ್ಪಿಗೆಯಾಗದ ಘಟನೆಗಳಿಗೆ ಪ್ರಧಾನಿಯೇ ಹೊಣೆ ಎಂಬ ಅಭಿಪ್ರಾಯ ಕೆಲವರದ್ದಾಗಿದೆ ಎಂದು ನಯವಾಗಿಯೇ ಟೀಕಿಸಿದ ಮಾಳವಿಕಾ, ಸಿಖ್ಖರ ಹತ್ಯಾಕಾಂಡ, ಇತ್ತೀಚಿನ ಪರೇಶ ಮೇಸ್ತಾ, ಶರತ್ ಮಡಿವಾಳ, ರುದ್ರೇಶ ಹತ್ಯೆ ಪ್ರಕರಣ ಪ್ರಸ್ತಾಪಿಸಿದರು. ಕೇರಳದ ಪಾಲಕ್ಕಾಡ್​ನಲ್ಲಿ ಸಿಪಿಐ ಕಾರ್ಯಕರ್ತರು ಅಯ್ಯಪ್ಪಸ್ವಾಮಿ ಭಕ್ತನ ಹತ್ಯೆ ಮಾಡಿದ್ದಾರೆ. ಅಲ್ಲೆಲ್ಲ ಅಸಹಿಷ್ಣುತೆ ಪ್ರಸ್ತಾಪ ಬರಲಿಲ್ಲ ಎಂದಾಗ ಸಭಿಕರಿಂದ ಆಕ್ಷೇಪ ವ್ಯಕ್ತವಾಯಿತು. ‘ನೀವು ವಿಷಯಾಂತರ ಮಾಡುತ್ತಿದ್ದೀರಿ, ನಮಗೆ ರಾಜಕೀಯ ಬೇಕಿಲ್ಲ. ವಿಷಯಕ್ಕೆ ಪೂರಕವಾಗಿರುವುದಿದ್ದರೆ ಹೇಳಿ ಅಥವಾ ನಿಲ್ಲಿಸಿ’ ಎಂದು ಘೋಷಣೆ ಕೂಗಿದರು.

ವೈಚಾರಿಕತೆ ಮತ್ತು ಅಸಹಿಷ್ಣುತೆ ಗೋಷ್ಠಿಯಲ್ಲಿ ಗದ್ದಲ ಉಂಟಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆಯಾ ಗೋಷ್ಠಿಯಲ್ಲಿದ್ದ ಪ್ರಮುಖರಿಂದ ಕೇಳಿ ತಿಳಿದುಕೊಳ್ಳುತ್ತೇನೆ. ಅದುವರೆಗೆ ಏನನ್ನೂ ಹೇಳಲಾಗದು.

| ಡಾ. ಮನು ಬಳಿಗಾರ, ಕಸಾಪ ರಾಜ್ಯಾಧ್ಯಕ್ಷ

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...