ಅಕ್ಷರ ಜಾತ್ರೆಯಲ್ಲಿ 100 ಆಹಾರ ಕೌಂಟರ್

blank

ಕಲಬುರಗಿ: ತೊಗರಿ ಕಣಜದಲ್ಲಿ ನಡೆಯಲಿರುವ ಅಕ್ಷರ ಜಾತ್ರೆ ಯಶಸ್ವಿಗೆ ಊಟದ ವ್ಯವಸ್ಥೆ ಬಹುಮುಖ್ಯ ಎಂಬುದನ್ನು ಮನಗಂಡಿರುವ ಸಂಘಟಕರು, ಹಿಂದಿನ ಸಮ್ಮೇಳನಗಳಲ್ಲಿ ಆಗಿರುವ ಲೋಪ ಅರಿತು ಪಾಕ ಪಾಠದತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಬಂದವರ್ಯಾರಿಗೂ ತೊಂದರೆ ಆಗದಂತೆ ಇನ್ನಿಲ್ಲದ ತಯಾರಿ ನಡೆದಿದೆ. ಕಾಮನ್ ಮೆನು ಇನ್ ದೇಸಿ ಸ್ಟೈಲ್ ಈ ಸಲ ಸಮ್ಮೇಳನದ ನಿಲುವು.
ಗುಲ್ಬರ್ಗ ವಿಶ್ವವಿದ್ಯಾಲಯ ಜ್ಞಾನಗಂಗೆ ಆವರಣದಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭೋಜನ ಶಾಲೆಗಾಗಿ ವಿಶಾಲವಾದ ಟೆಂಟ್ ಹಾಕಲಾಗುತ್ತಿದೆ. ಜತೆಗೆ ಊಟ ಮಾಡುವ ಕಾಲಕ್ಕೆ ನೂಕುನುಗ್ಗಲು ಆಗದಂತೆ ನೂರು ಕೌಂಟರ್ ನಿರ್ಮಿಸಲಾಗುತ್ತಿದೆ. ಮೊದಲ ದಿನ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.
ಧಾರವಾಡ ಮತ್ತು ರಾಯಚೂರು ಸಮ್ಮೇಳನಗಳಲ್ಲಿ ಮಾಡಿದ್ದ ಊಟದ ವ್ಯವಸ್ಥೆ ನೋಡಿ ಅದಕ್ಕಿಂತ ಸುಧಾರಿತ ಮಟ್ಟದಲ್ಲಿ ಹೆಚ್ಚಿನ ಶ್ರಮ ಮತ್ತು ಕಾಳಜಿ ಜತೆಗೆ ಎಚ್ಚರಿಕೆ ವಹಿಸಲಾಗುತ್ತಿದೆ. ಊಟಕ್ಕೆ ಜನರು ಪರದಾಡಬಾರದು ಮತ್ತು ಹೆಚ್ಚಿನ ಸಮಯ ಕಾಯಬಾರದು ಎಂಬ ಕಾರಣಕ್ಕೆ 100 ಕೌಂಟರ್ ಮಾಡಲಾಗುವುದು. ಈಗಾಗಲೇ ಆಹಾರ ಸಮಿತಿ ಅಧ್ಯಕ್ಷರಾದ ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆಯಲ್ಲಿ ಹಲವು ಸುತ್ತಿನ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ.
ಮೂರು ದಿನದ ಸಮ್ಮೇಳನಕ್ಕೆ 3.50 ಲಕ್ಷದಿಂದ 4 ಲಕ್ಷ ಸಾಹಿತ್ಯಾಸಕ್ತರು ಬರಲಿದ್ದಾರೆ. ಅವರಲ್ಲಿ 3 ಲಕ್ಷ ಜನರು ಮಾತ್ರ ಊಟಕ್ಕೆ ಬರುವ ನಿರೀಕ್ಷೆಯಿದೆ. ಸ್ಥಳೀಯ ಸೊಗಡಿನ ಜವಾರಿ ಶೈಲಿಯ ಕಲಬುರಗಿ ಊಟಕ್ಕೆ ಒತ್ತು ನೀಡಲಾಗಿದೆ. ಶೀಘ್ರವೇ ಮೆನು ಅಂತಿಮಗೊಳ್ಳಲಿದೆ. ಊಟಕ್ಕಾಗಿಯೇ 4.95 ಕೋಟಿ ರೂ. ವೆಚ್ಚ ತಗಲುವ ಅಂದಾಜಿದ್ದು, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಹಾರ ಸಮಿತಿ ಕಾಯರ್ಾಧ್ಯಕ್ಷರಾದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಸತೀಶ್ ಮಾಹಿತಿ ನೀಡಿದ್ದಾರೆ.

blank

ಪ್ರತಿನಿಧಿಗಳಿಗೆ ಪ್ರತ್ಯೇಕ ಕೌಂಟರ್
ಕನ್ನಡ ಜಾತ್ರೆ ಪ್ರತಿನಿಧಿಗಳಿಗಾಗಿ ಪ್ರತ್ಯೇಕ ಊಟದ ಕೌಂಟರ್ ಮಾಡಲಾಗುತ್ತದೆ. ಇದರಿಂದಾಗಿ ದೂರದೂರುಗಳಿಂದ ಬರುವ ಪ್ರತಿನಿಧಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸಾಧ್ಯವಾಗಲಿದೆ. 35 ಸಾವಿರ ಪ್ರತಿನಿಧಿಗಳು ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸುವ ನಿರೀಕ್ಷೆಯಿದೆ. ಹಿಂದಿನ ಸಮ್ಮೇಳನಗಳಲ್ಲಿ ಪ್ರತಿನಿಧಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡುತ್ತಿರಲಿಲ್ಲ. ಸಾರ್ವಜನಿಕರು ಹಾಗೂ ಪ್ರತಿನಿಧಿಗಳು ಒಟ್ಟಿಗೆ ಸೇರುತ್ತಿದ್ದರಿಂದ ನೂಕುನುಗ್ಗಲು, ಗಲಾಟೆ ಆಗುತ್ತಿತ್ತು. ಈ ಸಲ ಹಾಗೆ ಆಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಹಾಗೂ ಸಮ್ಮೇಳನ ಆಹಾರ ಸಮಿತಿ ಹೆಜ್ಜೆ ಇರಿಸಿದೆ.

ಅಕ್ಷರ ದಾಸೋಹ ಸಿಬ್ಬಂದಿ ಜತೆಗೆ ಎನ್ಸಿಸಿ, ಎನ್ನೆಸ್ಸೆಸ್ ಬಳಕೆ
ಸಮ್ಮೇಳನಕ್ಕೆ ಬಂದವರಿಗೆ ಊಟ ಬಡಿಸಲು ಮತ್ತು ಇತರ ಕೆಲಸಗಳಿಗಾಗಿ ಅಕ್ಷರ ದಾಸೋಹ ಸಿಬ್ಬಂದಿ ಜತೆಗೆ ಎನ್ನೆಸ್ಸೆಸ್ ಮತ್ತು ಎನ್ಸಿಸಿ ಕೆಡೆಟ್ಗಳನ್ನು ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳಲಾಗುವುದು. ಪ್ರತಿ ಕೌಂಟರ್ಗೂ ಒಬ್ಬರನ್ನು ಮೇಲುಸ್ತುವಾರಿಯಾಗಿ ನೇಮಿಸಲಾಗುವುದು. ಪ್ರತಿ 10 ಕೌಂಟರ್ ಉಸ್ತುವಾರಿಗಾಗಿ ಒಬ್ಬ ಜವಾಬ್ದಾರಿಯುತ ಅಧಿಕಾರಿಯನ್ನು ನಿಯೋಜಿಸಲಾಗುವುದು. ಇದರಿಂದ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಆಹಾರ ಸಮಿತಿ ಕಾರ್ಯಧ್ಯಕ್ಷ ಕೆ.ಎಚ್. ಸತೀಶ್.

ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಗಣ್ಯರು, ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಹೀಗೆ ಯಾರಿಗೂ ಊಟದಲ್ಲಿ ತಾರತಮ್ಯ ಆಗಬಾರದು ಎಂಬ ಕಾರಣಕ್ಕೆ ಒಂದೇ ರೀತಿಯ ಆಹಾರ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಹೊರಗಡೆಯಿಂದ ಬಂದ ಅತಿಥಿಗಳು ನಮ್ಮೂರಿನ ಊಟ ಆಸ್ವಾದಿಸಲು ಸಾಧ್ಯವಾಗಲಿದೆ. ಊಟದಲ್ಲಿ ಏನೇನು ಇರಬೇಕು ಎಂಬ ಮೆನು ಜ.20ರೊಳಗೆ ಅಂತಿಮಗೊಳಿಸಲಾಗುವುದು.
| ಬಸವರಾಜ ಮತ್ತಿಮೂಡ ಆಹಾರ ಸಮಿತಿ ಅಧ್ಯಕ್ಷ

 

ಬಾಬುರಾವ ಯಡ್ರಾಮಿ

Share This Article

ಈ ಸಮಯದಲ್ಲಿ ನೀವು ನಿಂಬು ಜ್ಯೂಸ್​​ ಕುಡಿದರೆ ಅಪಾಯವಾಗಬಹುದು..ಎಚ್ಚರ! Lemon Water

Lemon Water: ಬೇಸಿಗೆಯ ಬಿಸಿಲಿಗೆ ಬೆವೆತು ದೇಹವನ್ನು ತಂಪಾಗಿಸಲು ಮತ್ತು ದಾಹವನ್ನು ನೀಗಿಸಲು ನಾವು ಸಾಮಾನ್ಯವಾಗಿ…

ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕೆಂದರೆ ಈ ಒಂದು ಕೆಲಸ ಮಾಡಿ: ಬೆಳಗ್ಗೆ ಉತ್ಸಾಹದಿಂದ ಎದ್ದೇಳಬಹುದು.. sleeping tips

sleeping tips : ಸಾಕಷ್ಟು ನಿದ್ರೆ ಬರದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನಾವು ಎಷ್ಟು…

ಮಧ್ಯರಾತ್ರಿ ಕಳೆದರೂ ನಿದ್ದೆ ಬರ್ತಿಲ್ವಾ? ಹಾಗಾದರೆ ಈ ಸಮಸ್ಯೆಗಳನ್ನು ಎದುರಿಸಲು ನೀವು ರೆಡಿಯಾಗಿ! Sleep

Sleep : ಇಂದಿನ ಕಾರ್ಯನಿರತ ಜೀವನದಲ್ಲಿ ಕಾಲದ ಜೊತೆಗೆ, ಜನರ ಜೀವನಶೈಲಿಯಲ್ಲಿಯೂ ಅನೇಕ ದೊಡ್ಡ ಬದಲಾವಣೆಗಳಾಗಿವೆ.…