ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದಲ್ಲಿ ಜರುಗುವ ಕನ್ನಡ ಅಕ್ಷರದ ಜಾತ್ರೆಯಲ್ಲಿ ಒಂದಾಗಿ ಕನ್ನಡಾಂಬೆಯ ತೇರನ್ನು ಎಳೆಯೋಣ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಒಳ ಆವರಣದಲ್ಲಿರುವ ಕ.ಸಾ.ಪ ತಾಲೂಕು ಕಚೇರಿಗೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.
ತಾಲೂಕಿನ ಇವಣಗಿ ಗ್ರಾಮದಲ್ಲಿ ಡಿ.2 ರಂದು ಜರುಗುವ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಸಾಹಿತ್ಯ ಬೆಳೆಸುವ ಕಾರ್ಯ ನಾವೆಲ್ಲರೂ ಮಾಡೋಣ. ತಾಲೂಕು ಆಡಳಿತ ಹಾಗೂ ಕನ್ನಡ ಅಭಿಮಾನಿಗಳು, ಸಾಹಿತಿಗಳು, ಕನ್ನಡ ಸಂಘಟನೆಗಳು, ಸಂಘ-ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಿ ಐತಿಹಾಸಿಕ ಬಸವನಬಾಗೇವಾಡಿ ತಾಲೂಕು ಸಮ್ಮೇಳನ ಯಶಸ್ವಿಗೊಳಿಸೋಣ ಎಂದು ಹೇಳಿದರು.
ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ತನು ಮನ ದನದಿಂದ ಎಲ್ಲರೂ ಸಾಹಿತ್ಯ ಸಮ್ಮೇಳನಕ್ಕೆ ಪ್ರೋತ್ಸಾಹ ನೀಡಬೇಕು. ತಾಲೂಕು ಸಮ್ಮೇಳನವನ್ನು ಎಲ್ಲರೂ ಜೊತೆಗೂಡಿ ಅಕ್ಷರದ ಹಬ್ಬವಾಗಿ ಆಚರಿಸೋಣ ಎಂದು ಹೇಳಿದರು.
ಕ.ಸಾ.ಪ ತಾಲೂಕು ಅಧ್ಯಕ್ಷ ಶಿವಾನಂದ ಡೋಣೂರ, ವೈ.ಎನ್.ಮಿಣಜಗಿ, ವೈ.ಆರ್.ಇಂಗಳೇಶ್ವರ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ, ಸುರೇಶಗೌಡ ಪಾಟೀಲ, ರವಿ ರಾಠೋಡ, ಸಂಗಮೇಶ ಓಲೇಕಾರ, ಶಂಕರಗೌಡ ಬಿರಾದಾರ, ಭರತ ಅಗರವಾಲ, ಎಂ.ಜಿ. ಆದಿಗೊಂಡ, ಸಂಕನಗೌಡ ಪಾಟೀಲ, ಬಸವರಾಜ ಗೊಳಸಂಗಿ, ಅನೀಲ ಪವಾರ, ಶಿವಪುತ್ರ ಅಂಕದ, ಬಿ.ಎನ್.ನಾಯ್ಕರ, ಪಿ.ಎಸ್. ಬಾಗೆವಾಡಿ, ಬಿ.ವಿ. ಚಕ್ರಮನಿ, ಕೊಟ್ರೇಶ ಹೆಗಡಿಹಾಳ, ಬಸವರಾಜ ಮೇಟಿ, ಎಸ್.ಎಲ್. ಓಂಕಾರ, ಎಚ್.ಬಿ. ಬಾರಿಕಾಯಿ, ಎಂ.ಎಸ್. ಅಂಗಡಗೇರಿ, ಚಂದ್ರು ಹದಿಮೂರ ಇತರರಿದ್ದರು.