ಬೆಳ್ವೆ: ಗ್ರಾಮೀಣ ಭಾಗಗಳಲ್ಲಿ ನಡೆಯುವ ಆಚರಣೆ, ಆಡು-ನುಡಿಗಳನ್ನು ದಾಖಲಿಸಿದಾಗ ಮಾತ್ರ ಕನ್ನಡ ಸಂಸ್ಕೃತಿ ಉಳಿಯುತ್ತದೆ ಎಂದು ಸಾಹಿತಿ ಸೀತಾರಾಮ ಹೆಬ್ಬಾರ್ ಕಬ್ಬಿನಾಲೆ ಅಭಿಪ್ರಾಯಪಟ್ಟರು. ಬೆಳ್ವೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಠಾರದ ಆರ್ಡಿ ಕೃಷ್ಣಮೂರ್ತಿ ಭಟ್ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲೂಕು ಘಟಕದ ದ್ವಿತೀಯ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾತನಾಡಿದರು.
ಭಾಷಾಭಿಮಾನ ಹೆಮ್ಮೆಯ ಸಂಕೇತವಾಗಲಿ: ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಹಾಸ್ಯ ಸಾಹಿತಿ ಸಂಧ್ಯಾ ಶೆಣೈ ಸೋಮೇಶ್ವರ ಮಾತನಾಡಿ, ಕನ್ನಡ ಭಾಷೆಯಲ್ಲಿ ಒಂದೇ ವಿಚಾರವನ್ನು ಪ್ರಸ್ತುತಗೊಳಿಸಲು ಹಲವಾರು ಶಬ್ದಗಳ ಭಂಡಾರವಿದೆ. ಕನ್ನಡ ಭಾಷಾಭಿಮಾನ ಇಲ್ಲದ ಪರಿಣಾಮ ಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತಿದೆ. ಕನ್ನಡ ಮಾಧ್ಯಮ ಉಳಿಸಿ ಬೆಳೆಸುವಲ್ಲಿ ಹೆಚ್ಚಿನ ಕಾಳಜಿ ಅಗತ್ಯವಿದೆ. ಕನ್ನಡ ಭಾಷಾಭಿಮಾನ ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಲಿ. ಕನ್ನಡ ಭಾಷೆಯು ಸಂಸ್ಕೃತಿ, ಅಭಿಮಾನ, ಆಡು ನುಡಿಗಳಿಗೆ ಪೂರಕವಾಗಿವೆ. ಗ್ರಾಮೀಣ ಭಾಗಗಳಲ್ಲಿ ನಡೆಯುವ ಆಚರಣೆ, ಆಡು-ನುಡಿಗಳನ್ನು ದಾಖಲಿಸಿದಾಗ ಮಾತ್ರ ಕನ್ನಡ ಸಂಸ್ಕೃತಿ ಉಳಿಯುತ್ತದೆ ಎಂದರು.
ಹೆಬ್ರಿ ತಾ.ಘಟಕ ಕ.ಸಾ.ಪ ಅಧ್ಯಕ್ಷ ಪಿ.ವಿ.ಆನಂದ ಸಾಲಿಗ್ರಾಮ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಚ್ಚಪ್ಪು ಕರುಣಾಕರ ಹೆಗ್ಡೆ ಸಾಧಕರನ್ನು ಸನ್ಮಾನಿಸಿದರು. ಹೆಬ್ರಿ ತಾ.ಪಂ. ಮಾಜಿ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಸೂರ‌್ಗೋಳಿ, ಬಿ.ಗಣೇಶ್ ಕಿಣಿ ಬೆಳ್ವೆ, ಬಿ.ಸತೀಶ್ ಕಿಣಿ ಬೆಳ್ವೆ, ಎಸ್.ಜಯರಾಮ ಶೆಟ್ಟಿ ಸೂರ‌್ಗೋಳಿ, ದತ್ತ ಕುಮಾರ, ಶ್ರೀಧರ ನಾಯ್ಕ, ನೀಲಾವರ ಸುರೇಂದ್ರ ಅಡಿಗ, ವಿನ್ಸೆಂಟ್ ಲೋಬೋ, ಆರೂರು ತಿಮ್ಮಪ್ಪ ಶೆಟ್ಟಿ, ಪುಂಡಲೀಕ ಮರಾಠೆ ಕಾಪು, ಸೂರಾಲು ನಾರಾಯಣ ಮಡಿ ಬ್ರಹ್ಮಾವರ, ರವೀಂದ್ರ ದೇವಾಡಿಗ ಬೈಂದೂರು, ಚೆನ್ನಯ್ಯ ಯು., ರಮಾನಂದ ಶೆಟ್ಟಿ, ಹರೀಶ ಪೂಜಾರಿ, ಯೋಗೀಶ್ ಭಟ್ ಹೆಬ್ರಿ, ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಸುಬ್ರಹ್ಮಣ್ಯ ಶೆಟ್ಟಿ, ಕಿಶನ್‌ರಾಜ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಪ್ರವೀಣ್ ಕುಮಾರ್ ಸ್ವಾಗತಿಸಿದರು. ಶಿವಸುಬ್ರಹ್ಮಣ್ಯ ಭಟ್, ಶ್ವೇತಾ, ಪ್ರಕಾಶ್ ಪೂಜಾರಿ, ಶಾಂತಾ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು. ಸುದೇಶ್ ಪ್ರಭು ವಂದಿಸಿದರು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ರಾಮಚಂದ್ರ ಐತಾಳ್ ಹೆಬ್ರಿ (ವೈದ್ಯಕೀಯ), ದಿನೇಶ್ ರಾವ್ ಮುದ್ರಾಡಿ (ಯಕ್ಷಗಾನ), ಆನಂದ ಪೂಜಾರಿ ವರಂಗ(ಸಂಘಟನೆ), ರಾಮಭಟ್ ಶಿವಪುರ(ಉದ್ಯಮ), ನರಸಿಂಹ ಪರವ ಚಾರ(ದೈವ ನರ್ತನ), ಪವನ್ ಕೃಷ್ಣ ನಾಡ್ಪಾಲು(ಚಲನಚಿತ್ರ), ರಾಮ ನಾಯ್ಕ ಹೆರಿಗದ್ದೆ ಬೆಳ್ವೆ (ಕೃಷಿ), ಚಂದ್ರಶೇಖರ ಶೆಟ್ಟಿ ಮೂಡುಬೈಲು ಶೇಡಿಮನೆ,ಧಾರ್ಮಿಕ), ನರಸಿಂಹ ಕೆಳಬಾದ್ಲು, ಕುಚ್ಚೂರು(ನಾಟಿ ವೈದ್ಯ), ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ, ಗೌರವ ಸಲಹೆಗಾರ ಉದ್ಯಮಿ ಬಿ.ಸತೀಶ್ ಕಿಣಿ ಬೆಳ್ವೆ ಹಾಗೂ ಇನ್ನಿತರರನ್ನು ಸನ್ಮಾನಿಸಲಾಯಿತು.