ವಿದ್ಯಾರ್ಥಿಗಳು ಸುಸಂಸ್ಕೃತ ಜ್ಞಾನ ಹೆಚ್ಚಿಸಿಕೊಳ್ಳಲಿ: ಚಿತ್ರ ನಿರ್ದೇಶಕ ಟಿ.ಎಸ್.ನಾಗಭರಣ ಕಿವಿಮಾತು

Kannada Rajyotsava at Mims Mandya

ಮಂಡ್ಯ: ಮನುಷ್ಯನ ಬದುಕಿಗೆ ನೆನಪು ಆಧಾರ. ಅಂತೆಯೇ ನೆನಪಿನಲ್ಲಿ ಉಳಿಯುವ ಅನುಭವ ಮರೆಯುವುದಿಲ್ಲ ಎಂದು ಚಿತ್ರ ನಿರ್ದೇಶಕ ಟಿ.ಎಸ್.ನಾಗಭರಣ ಅಭಿಪ್ರಾಯಪಟ್ಟರು.
ನಗರದ ಮಿಮ್ಸ್ ಸಭಾಂಗಣದಲ್ಲಿ ಸಂಸ್ಥೆಯ ಕನ್ನಡ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಯಾವ ಮನಸ್ಸು ಸುಸಂಸ್ಕೃತವಾಗಿರಲು ಸಾಂಸ್ಕೃತಿಕವಾಗಿ ಬೆಳೆಯಬೇಕು. ಇಲ್ಲದಿದ್ದರೆ ಸುಸಂಸ್ಕೃತವಾದ ಸಮಾಜ ನಿರ್ಮಾಣ ಮಾಡಲಾಗದು. ಒಂದು ಸಾಂಸ್ಕೃತಿಕ ನೆಲೆಗಟ್ಟಿಯಾದಾಗ ಮಾತ್ರ ಸುಸಂಸ್ಕೃತವಾದ ಸಮಾಜ ಬರುತ್ತದೆ. ಇಲ್ಲದಿದ್ದರೆ ಸಮಾಜ ಗೊತ್ತಿಲ್ಲದಂತೆ ವಿಕೃತಿಯತ್ತ ಸಾಗುತ್ತದೆ ಎಂದು ನುಡಿದರು.
ಇವತ್ತಿನ ಕಾಲಘಟ್ಟದಲ್ಲಿ ನಾವು ವಿಕೃತಿಯಿಂದ ಸುಕೃತಿಗೆ ಬರಬೇಕು. ಇಂತಹ ವೇದಿಕೆಗಳು ರೂಪಗೊಳ್ಳಬೇಕು. ಇಲ್ಲಿ ಅದಮ್ಯವಾದಂತಹ ವೇದಿಕೆ ನಿರ್ಮಾಣವಾಗಿದೆ. ಇಂದಿನ ದಿನಗಳಲ್ಲಿ ವಿಜ್ಞಾನ ಎಐ(ಕೃತಕ ಬುದ್ದಿಮತ್ತೆ) ಬೆಳೆಯುತ್ತಿದೆ. ಉಪಕಾರ ಮತ್ತು ಅಪಕಾರ ತಂದುಕೊಡುವರ ಕೃತಕ ಬುದ್ದಿಮತ್ತೆ ಯಂತ್ರಗಳು ಬರುತ್ತಿವೆ. ಬಹುಮುಖ್ಯವಾಗಿ ಮನುಷ್ಯತ್ವವನ್ನ ನಿಧಾನವಾಗಿ ತೊಡೆದು ಹಾಕಿದೆ. ಅದೊಂದು ಯಂತ್ರ. ಹೃದಯವಿಲ್ಲ, ಸ್ಪರ್ಶಜ್ಞಾನವಿಲ್ಲ, ಎಲ್ಲವನ್ನು ಬಳಸಿಕೊಳ್ಳುತ್ತೆ. ಇಂತಹ ಎಐ ಯುಗದಲ್ಲಿರುವ ವೈದ್ಯ ವಿದ್ಯಾರ್ಥಿಗಳು ಮನುಷ್ಯನ ಮೂಲ ಸಂಪತ್ತು ಹೃದಯ ಮತ್ತು ಸ್ಪರ್ಶವನ್ನು ಹೇಗೆ ಅರಿಯುತ್ತೀರಿ?. ಆದ್ದರಿಂದ ನಿಮ್ಮ ವೃತ್ತಿಯ ಕೌಶಲ ಸುಸಂಸ್ಕೃತ ಜ್ಞಾನ ಹೆಚ್ಚಬೇಕಿದೆ ಎಂದರು.
ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಪ್ರಾಂಶುಪಾಲ ಡಾ.ಎಂ.ಹನುಮಂತಪ್ರಸಾದ್, ಮುಖ್ಯ ಆಡಳಿತಾಧಿಕಾರಿ ಕೆ.ಜಾನ್ಸನ್, ಸ್ಥಾನೀಯ ವೈದ್ಯಾಧಿಕಾರಿ ಡಾ.ಡಿ.ಬಿ.ದರ್ಶನ್‌ಕುಮಾರ್, ಶುಶ್ರೂಷಕ ಪ್ರಾಂಶುಪಾಲ ಎಲ್.ಎಲ್.ಕ್ಲೆಮೆಂಟ್, ಹಿರಿಯ ಶುಶ್ರೂಷಕ ಅಧಿಕಾರಿ ಸುನೀತಾ, ಡಾ.ಬಿಂದ್ಯಾ, ಕನ್ನಡ ಸಂಘದ ದರ್ಶನ್, ಎನ್.ದರ್ಶನ್, ಚಿತ್ರಾಶ್ರೀ, ದೀಕ್ಷಾ, ಹೇಮಾ, ವರಲಕ್ಷ್ಮೀ, ಚೇತನ್‌ಕುಮಾರ್, ಧೀರಜ್, ಆಶ್ರಯ್ ಇತರರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…