‘ಕನ್ನಡ ಪ್ರಭು’ಗೆ- 60’; ಅಭಿನಂದನಾ ಕಾರ್ಯಕ್ರಮ

blank

‘ಭಾಷಾವಾರು ರಾಜ್ಯಗಳ ರಚನೆಯ ಆಶಯ ಈಡೇರಿದೆಯೇ?’ ವಿಷಯವಾಗಿ ಚಿಂತನ ಗೋಷ್ಠಿ ಮತ್ತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರಿಗೆ 60 ವರ್ಷಗಳು ತುಂಬಿದ ಸವಿನೆನಪಿಗೆ ಅಭಿನಂದನೆ ಸಲ್ಲಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಏಪ್ರಿಲ್ 25ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯ ಮಾಜಿ ಸದಸ್ಯ ಡಾ. ಎಲ್. ಹನುಮಂತಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನುಬಳಿಗಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ ತಜ್ಞ ಸ.ರ. ಸುದರ್ಶನ, ಕನ್ನಡ ಹೋರಾಟಗಾರ ವ.ಚ. ಚನ್ನೇಗೌಡ ಹಾಗೂ ತಾವು ವಿಷಯ ಮಂಡಿಸುವುದಾಗಿ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಆರ್. ಪ್ರಭುಶಂಕರ್ ದಂಪತಿಗೆೆ ವಿಶೇಷ ಸನ್ಮಾನ ನಡೆಯಲಿದೆ. ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಅಂದಹಾಗೆ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಕನ್ನಡಿಗರಲ್ಲಿ ನವಜಾಗೃತಿ ಮೂಡಿಸಿದ ಗೋಕಾಕ್ ಚಳವಳಿಯಲ್ಲಿ ಕಾಲೇಜು ವಿದ್ಯಾರ್ಥಿ ಆಗಿದ್ದಾಗಲೇ ಡಾ. ಎಂ. ಚಿದಾನಂದಮೂರ್ತಿ ನೇತೃತ್ವದ ಸಾಹಿತಿಗಳ ಕಲಾವಿದರ ಬಳಗದ ಮೂಲಕ ಕನ್ನಡ ಹೋರಾಟಕ್ಕೆ ಅಡಿಯಿಟ್ಟರು. ಕಲಾವಿದರ ಬಳಗ, ಕನ್ನಡ ಶಕ್ತಿ ಕೇಂದ್ರ, ಕನ್ನಡ ಗೆಳೆಯರ ಬಳಗದ ಭಾಗವಾಗಿ ಕನ್ನಡ ಹೋರಾಟ ಮತ್ತು ಎಲ್ಲ ಚಟುವಟಿಕೆಗಳಲ್ಲಿ. ಸಕ್ರಿಯವಾಗಿ ತೊಡಗಿಕೊಂಡಿದ್ದರು. ಇಂದಿಗೂ ಕನ್ನಡ ಜಾಗೃತಿಯ ವಾಹಿನಿಯಿಂದ ದೂರ ಸರಿಯದೆ ಬೆಂಗಳೂರಿನಲ್ಲಿ ನಡೆಯುವ ಕನ್ನಡ ಜಾಗೃತಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರನ್ನು ಕನ್ನಡಾಭಿಮಾನಿಗಳು ‘ಕನ್ನಡದ ಪ್ರಭು’ ಎಂದು ಗುರುತಿಸುತ್ತಾರೆ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಪ್ರಭುಶಂಕರ್ ಉತ್ತಮ ಗದ್ಯ ಬರಹಗಾರರು. ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತುಗಳ ಮೂಲಕ ಕನ್ನಡ ಸಾಹಿತ್ಯ ಪರಿಚಾರಿಕೆಯನ್ನು ಮಾಡಿದ್ದಾರೆ. ಇವರು ಕನ್ನಡ ಕಾಯಕ ಸಾಮಾಜಿಕ ಕಾಳಜಿಯನ್ನು ಗುರುತಿಸಿ 60 ವಸಂತಗಳನ್ನು ಪೂರೈಸಿದ ಈ ಸುಸಂದರ್ಭದಲ್ಲಿ ಕನ್ನಡ ಗೆಳೆಯರ ಬಳಗವು ಸಾರ್ವಜನಿಕವಾಗಿ ಅಭಿನಂದಿಸುತ್ತಿದೆ ಎಂದು ರಾ.ನಂ.ಚಂದ್ರಶೇಖರ ವಿವರಿಸಿದ್ದಾರೆ.

Share This Article

ಚಿಕ್ಕ ಮಕ್ಕಳು ಹಗಲಲ್ಲಿ ಅಧಿಕ ನಿದ್ರಿಸಲು ಇದೇ ಕಾರಣವಂತೆ! ವೈದ್ಯರು ಹೇಳೊದೇನು? | Children Sleep

Children Sleep: ಸಾಮಾನ್ಯವಾಗಿ ಹುಟ್ಟಿನಿಂದ 6 ತಿಂಗಳವರೆಗೆ, ಮಕ್ಕಳು ಯಾವಾಗ ಮಲಗುತ್ತಾರೆ ಮತ್ತು ಯಾವಾಗ ಎಚ್ಚರಗೊಳ್ಳುತ್ತಾರೆ…

ಇವುಗಳ ಜೊತೆ ಮುಲ್ತಾನಿ ಮೆಟ್ಟಿ ಫೇಸ್‌ ಪ್ಯಾಕ್‌ ಮಾಡಿ ಮುಖಕ್ಕೆ ಹಚ್ಚಿ, ರಿಸಲ್ಟ್‌ ನೀವೇ ನೋಡಿ! Skin Care

Skin Care : ತ್ವಚೆಯ ಆರೈಕೆಯಲ್ಲಿ ನಾವು ನೈಸರ್ಗಿಕವಾಗಿ ಬಳಸುವ ಮುಲ್ತಾನಿ ಮಿಟ್ಟಿ ಕೂಡ ಒಂದು.…