ಯಲಬುರ್ಗಾ: ಕನ್ನಡ ನಾಡು-ನುಡಿ ಹಾಗೂ ಜಲದ ವಿಚಾರವಾಗಿ ಹೋರಾಟ ಮಾಡುವ ಕರವೇ ಸಂಘಟನೆ ಕಾರ್ಯ ಮೆಚ್ಚುವಂಥದ್ದು ಎಂದು ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್ ಹೇಳಿದರು.
ಇದನ್ನೂ ಓದಿ: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಿ, ಜಯ ಕರ್ನಾಟಕ ಸಂಘಟನೆ ಆಗ್ರಹ
ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ಕರವೇ ಸ್ವಾಭಿಮಾನಿ ಬಣದಿಂದ ಭಾನುವಾರ ಹಮ್ಮಿಕೊಂಡಿದ್ದ ನಾಮಫಲಕ ಅನಾವರಣ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷೆಗೆ ಸುದೀರ್ಘ ಇತಿಹಾಸ ಇದ್ದು, ರಾಷ್ಟ್ರೀಯ ಸ್ಥಾನಮಾನ ಸಿಗಬೇಕು. ಪ್ರತಿಯೊಬ್ಬ ಕನ್ನಡಿಗರು ಸ್ವಾಭಿಮಾನದಿಂದ ಬಾಳಬೇಕು. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ರಕ್ಷಣಾ ವೇದಿಕೆ ಹೋರಾಟ ಮಾಡುವುದು ಅನಿವಾರ್ಯ ಎಂದರು.
ಯುವ ಮುಖಂಡ ಅಯ್ಯನಗೌಡ ಕೆಂಚಮ್ಮನವರ್ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಗೌರವಿಸಬೇಕು. ಕನ್ನಡ ಭಾಷೆ ಉಳಿವಿಗೆ ಕರವೇ ಸಂಘಟನೆಗಳ ಶ್ರಮ ಸಾಕಷ್ಟಿದೆ ಎಂದರು.
ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ, ಘಟಕ ತಾಲೂಕು ಅಧ್ಯಕ್ಷ ರುದ್ರಪ್ಪ ಬೇವೂರು, ಉಪಾಧ್ಯಕ್ಷ ಅರ್ಜುನ ಪೂಜಾರಿ, ಗ್ರಾಮ ಘಟಕ ಅಧ್ಯಕ್ಷ ಮಲ್ಲೇಶ ಪೂಜಾರ್, ಪ್ರಮುಖರಾದ ಅಂಬರೀಶ ಜಾಲಿಹಾಳ, ಶಿವು ಕಟ್ಟಿಮನಿ, ಹರಿಶ್ಚಂದ್ರ ಕಟ್ಟಿಮನಿ, ವೀರೇಶ ನರೆಗಲ್, ಅಮರೇಶ ಪಾಟೀಲ್, ಸುಖಮುನಿಯಪ್ಪ ಇತರರಿದ್ದರು.