ಸಮಾಜ ಒಗ್ಗೂಡಿಸುವ ಕೆಲಸ ಆಗಬೇಕು; ಸದಾಶಿವ ಸ್ವಾಮೀಜಿ

blank

ರಾಣೆಬೆನ್ನೂರ: ಸಾಧಕರ ಬದುಕಿನಲ್ಲಿ ಸಾಧನೆಯ ಗೊಂದಲಗಳನ್ನು ತಮ್ಮ ತಪೋಬಲದಿಂದ ಹಾನಗಲ್ಲ ಕುಮಾರಸ್ವಾಮಿಗಳು ಪರಿಹರಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಿಸಿ ಸಮಾಜವನ್ನು ಒಗ್ಗೂಡಿಸಿದರು. ಇಂತಹ ಪಾವನ ಕ್ಷೇತ್ರ ಅಭಿವೃದ್ಧಿಪಡಿಸುವಲ್ಲಿ ಎಲ್ಲರೂ ಗಮನಹರಿಸಬೇಕು ಎಂದು ಹಾವೇರಿಯ ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಎಂದರು.
ತಾಲೂಕಿನ ಜೋಯಿಸರಹರಳಹಳ್ಳಿಯ ಗುರುಶಾಂತೇಶ್ವರ ಬೆಟ್ಟದಲ್ಲಿ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​, ತಾಲೂಕು ಟಕದ ವತಿಯಿಂದ ಬುಧವಾರ ಏರ್ಪಡಿಸಿದ್ದ ಹಾನಗಲ್ಲ ಕುಮಾರಸ್ವಾಮಿ ದತ್ತಿ ಮತ್ತು ಲಿಂ. ಗುರುಶಾಂತ ಶಿವಯೋಗಿಗಳವರ ಜೀವನ ಮತ್ತು ಸಾಧನೆ ಸ್ಮಾರಕ ದತ್ತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗಳಿಸಿದ ವಿದ್ಯೆ ಸಮಾಜಕ್ಕೆ ಬಳಕೆಯಾಗಬೇಕು. ವಿದ್ಯೆ ಜ್ಞಾನ ನೀಡುವಂತಾಗಬೇಕು. ಇಂದಿನ ಪೀಳಿಗೆಗೆ ನಮ್ಮ ಸಂಸತಿ ಸಂಸ್ಕಾರಗಳನ್ನು ರೂಢಿಸಬೇಕು. ವೀರಶೈವ ಆಚಾರ ವಿಚಾರ ಪರಂಪರೆಯಲ್ಲಿ ಆಗಾದವಾದ ಅದಮ್ಯ ಜ್ಞಾನವಿದೆ. ಜನ್ಮಭೂಮಿಯನ್ನು ತಪೋಭೂಮಿಯನ್ನಾಗಿಸಿದ ಮಹಾಮಹಿಮ ತಪೋನಿಧಿ ಹಾನಗಲ್ಲ ಕುಮಾರಸ್ವಾಮಿಗಳು ಎಂದರು.
ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು. ಲಿಂ. ಗುರುಶಾಂತ ಶಿವಯೋಗಿಗಳ ಜೀವಂತ ಸಮಾಧಿ ಜೀಣೋರ್ದ್ಧಾರ ಸಮಿತಿಯ ಅಧ್ಯಕ್ಷ ಜಿ.ಎಚ್​. ಮುದ್ದಪ್ಪಳವರ ಅಧ್ಯಕ್ಷತೆ ವಹಿಸಿದ್ದರು. ಲಿಂ. ಕುಮಾರ ಮಹಾಸ್ವಾಮಿಗಳವರ ಜೀವನ ಸಾಧನೆ ಕುರಿತು ಬೆಳಗಾವಿಯ ಕಾರಂಜಿ ಮಠದ ಡಾ. ಶಿವಯೋಗಿ ದೇವರು ಉಪನ್ಯಾಸ ನೀಡಿದರು. ಲಿಂ. ಗುರುಶಾಂತ ಶಿವಯೋಗಿಗಳವರ ಜೀವನ ಮತ್ತು ಸಾಧನೆ ಕುರಿತು ಕಸಾಪ ಮಾಜಿ ಜಿಲ್ಲಾದ್ಯಕ್ಷ ಜಿ.ಬಿ. ಮಾಸಣಗಿ ಉಪನ್ಯಾಸ ನೀಡಿದರು.
ಕಸಾಪ ಗೌರವ ಕಾರ್ಯದಶಿರ್ ಜಗದೀಶ ಮಳಿಮಠ, ದತ್ತಿ ದಾನಿಗಳಾದ ಶಂಕರಗೌಡ ಚೌಡಪ್ಪಳವರ, ಚನ್ನಬಸಮ್ಮ ಹೊಟ್ಟಿಗೌಡರ, ಗದಿಗೆಪ್ಪಗೌಡ ಹೊಟ್ಟಿಗೌಡರ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ. ಕೆ.ಎಚ್​. ಮುಕ್ಕಣ್ಣವರ, ತಾಲೂಕು ಅಧ್ಯಕ್ಷ ಪ್ರಭಾಕರ ಶಿಗ್ಲಿ, ಗ್ರಾಮೀಣ ಘಟಕದ ಅಧ್ಯಕ್ಷ ಸಿದ್ದು ಹೊರಕೇರಿ ಮತ್ತಿತರರು ಉಪಸ್ಥಿತರಿದ್ದರು.
ಡಾ. ಕಾಂತೇಶ ಗೋಡಿಹಾಳ ಸ್ವಾಗತಿಸಿದರು. ಎಸ್​.ಎಚ್​. ಪಾಟೀಲ ನಿರೂಪಿಸಿ, ವಂದಿಸಿದರು.

Share This Article

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti

ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…

ಬೊಜ್ಜು ಕರಗಿಸಿ ಫಿಟ್​ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…

ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips

ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…