22.8 C
Bengaluru
Saturday, January 18, 2020

ಕನ್ನಡ ಕಲಿಕೆಯೂ, ಭಾಷೆಯೂ ನಮ್ಮ ಹೆಮ್ಮೆಯ ತುರಾಯಿಯೇ

Latest News

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.ಜೋಡುಕಟ್ಟೆಯಿಂದ...

ಸ್ಸಿಳಿಯುವಾಗಲೇ ಫೋನ್ ಹೊಡೆದುಕೊಂಡಿತ್ತು. ಗೆಳತಿ ರೂಪಾ ಸತೀಶ್ ಮಾತನಾಡುತ್ತಿದ್ದರು. ಆಕೆ ಸಾಮಾಜಿಕ ಜಾಲತಾಣದಲ್ಲಿ ಬಿತ್ತಿದ 3k ಕನ್ನಡ ಕವಿತೆ ಕಥನ ಎಂಬ ಬೀಜವೊಂದು ಕನ್ನಡ ಪ್ರಿಯ ಮನಸ್ಸುಗಳ ಹೆಮ್ಮರವಾಗಿ ಬೆಳೆದು ಟೊಂಗೆ ಟೊಂಗೆಗೂ ಕನ್ನಡದ ಹೂಗಳನ್ನರಳಿಸಿ, ಸಿಹಿಯಾದ ಫಲವನ್ನೀಯುತ್ತಿದೆ ಎಂಬುದು ತಿಳಿದಿದ್ದ ವಿಷಯ. ಈಗದರ ದಶಮಾನೋತ್ಸವದ ಸಂಭ್ರಮ ಎಂದು ನನ್ನನ್ನೂ ಆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಕರೆ ಮಾಡಿದ್ದರು. ಸಮಾನ ಮನಸ್ಕರುಳ್ಳ ಆ ಗುಂಪು ಹೊರನಾಡಿನವರಿಗೆ ಕನ್ನಡ ಕಲಿಸುವುದರಿಂದ ಹಿಡಿದು ಅಶಕ್ತರಿಗೆ ಕೈಲಾದ ಸಹಾಯ ಮಾಡುತ್ತ ಕನ್ನಡದ ಬಗ್ಗೆ ಹತ್ತು ಹಲವು ಸ್ಪರ್ಧೆಗಳನ್ನು ನಡೆಸಿ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿತ್ತು. ಇಂತಹ ಕನ್ನಡ ಪ್ರೀತಿಗೊಂದು ಜೈ ಹೇಳುತ್ತಲೇ ನಡೆದು ಬರುತ್ತಿದ್ದೆ.

ದಾರಿ ಬದಿಯಲ್ಲಿ ಕಂಡ ಗಿಡದಲ್ಲೊಂದು ಸುಂದರ ಹೂವು. ಕಾಡುಗಿಡದಂತೆ ಕಂಡರೂ ಆ ಗಿಡ ಮನೆಯಂಗಳದಲ್ಲೂ ಇದ್ದರೆ ಚೆನ್ನ ಅನ್ನಿಸಿತು. ಗಟ್ಟಿ ಗಿಡ, ಮಣ್ಣು ಒಣಗಿದ್ದ ಕಾರಣ ಕಿತ್ತರೆ ಬರಲಾರದಷ್ಟು ಆಳಕ್ಕಿಳಿದ ಬೇರುಗಳು… ಜೊತೆಗೆ ಕಿತ್ತು ನೆಟ್ಟರೆ ಬದುಕಬಹುದೇ ಎಂಬ ಅನುಮಾನ ಕೂಡ. ಗಿಡವನ್ನು ಸರಿಯಾಗಿ ನೋಡಿದಾಗ ಗಿಡದಲ್ಲೇ ಉಳಿದಿದ್ದ ಬೀಜಗಳು ಕಂಡಿದ್ದವು. ಅದನ್ನೇ ತೆಗೆದುಕೊಂಡರಾಯಿತು ಎಂದು ಬೀಜಗಳನ್ನು ಕಿತ್ತೆ. ಅವುಗಳನ್ನು ಪರ್ಸಿನೊಳಗೆ ಹಾಗೇ ತುರುಕಿದರೆ ಆ ಸಣ್ಣ ಬೀಜಗಳನ್ನು ಪರ್ಸಿನಿಂದ ಹೆಕ್ಕುವುದು ಸುಲಭವಲ್ಲ. ರಸ್ತೆ ಬದಿ ಎಂದ ಮೇಲೆ ಕಾಗದಕ್ಕೇನು ಬರವೇ? ಕಣ್ಣೆದುರೇ ಬಿದ್ದಿದ್ದ ಯಾರೋ ಮಕ್ಕಳು ಹರಿದೆಸೆದ ಪುಸ್ತಕದ ಅನಾಥ ಹಾಳೆಯೊಂದು ಸಿಕ್ಕಿತು. ಅದರೊಳಗೇ ಬೀಜಗಳನ್ನು ಹಾಕಿ ಮುದುರಿ ಪರ್ಸಿನೊಳಗಿಟ್ಟು ಮನೆಗೆ ನಡೆದೆ. ಕುಂಡವೊಂದಕ್ಕೆ ಮಣ್ಣು ತುಂಬಿ ಪೇಪರಿನ ಉಂಡೆಯನ್ನು ಬಿಡಿಸಿ ಬೀಜಗಳನ್ನುದುರಿಸಿ ನೀರು ಹನಿಸಿಟ್ಟೆ.

ತುಳಸಿ ಕಟ್ಟೆಯಲ್ಲಿ ಮುದುರಿ ಕುಳಿತಿದ್ದ ಪೇಪರನ್ನು ಎಸೆಯಲೆಂದು ಹಿಡಿದವಳು ಅದರಲ್ಲಿ ಬರೆದ ಕನ್ನಡ ಅಕ್ಷರಗಳು ಮತ್ತದರ ಕೆಳಗೆ ಕೆಂಪಿಂಕಿನಲ್ಲಿ ಸೀನ್ ಎಂದು ಬರೆದ ಟೀಚರಿನ ಕೈಗುರುತು ಕಂಡು ಕುತೂಹಲಕ್ಕೆಂದು ಕಣ್ಣಾಡಿಸಿದೆ. ಸಮಾಜಶಾಸ್ತ್ರದ ಟಿಪ್ಪಣಿ ಪುಸ್ತಕದ ಹಾಳೆಯದು. ಭೂಗೋಳದ ಕುರಿತು ಕೇಳಿದ್ದ ಒಂದು ಪ್ರಶ್ನೆಗೆ ಉತ್ತರವಿತ್ತದರಲ್ಲಿ. ಇಡೀ ವಾಕ್ಯದಲ್ಲಿ ಒಂದಾದರೂ ಪದದ ಕಾಗುಣಿತ ಸರಿಯಾಗಿಲ್ಲ. ಆದರೂ ಉತ್ತರ ಸರಿಯಾಗಿದೆ ಎಂದು ಹಾಕಿದ ರೈಟ್ ಗುರುತು…

ನಮ್ಮನೆಗೆ ಬಂದ ಪುಟ್ಟ ಮಕ್ಕಳ ಜೊತೆ ತುಂಬ ಹೊತ್ತು ಕಳೆಯುವ ಸಮಯವಿದ್ದಲ್ಲಿ ಅವರಿಗೆ ಬೇಸರವಾಗದಂತೆ ಅವರ ಜೊತೆ ಆಡುತ್ತ ಕೂರುವುದುಂಟು. ಕೆಲವರಿಗೆ ಸ್ವಲ್ಪ ಹೊತ್ತಿನಲ್ಲೇ ಆಟದಲ್ಲಿ ಬೇಸರ ಬಂದು ತಂಟೆ ಮಾಡಲು ಶುರು ಮಾಡುತ್ತಾರೆ. ಆಗವರ ಮನಸ್ಸನ್ನು ಹೊರಳಿಸಲು ಪೇಪರ್ ಪೆನ್ ಕೊಟ್ಟು, ‘ನಾನು ಹೇಳಿದ್ದನ್ನೆಲ್ಲ ಬರೀರಿ. ಎಲ್ಲ ಸರಿಯಾದರೆ ಚಾಕಲೇಟಿನ ಬಹುಮಾನವೂ ಉಂಟು’ ಅಂತ ಆಟ ಶುರು ಮಾಡ್ತೇನೆ. ಯಾರನ್ನೇ ಕೇಳಲಿ ಶಾಲೆಯಲ್ಲಿ ಎಲ್ಲರೂ ನೂರಕ್ಕೆ ತೊಂಬತ್ತರ ಮೇಲೆ ಅಂಕ ತೆಗೆದ ಮಕ್ಕಳೇ. ಮತ್ತೆ ನನ್ನ ಈ ಸವಾಲಿಗೆ ಹೆದರುವುದುಂಟೇ? ಸಿಗಬಹುದಾದ ಚಾಕಲೇಟನ್ನು ನೆನೆದು ಪೆನ್ನು ಪೇಪರ್ ಹಿಡಿದು ಕುಳಿತೇಬಿಡ್ತಾರೆ. ಹೀಗೆ ಆಗಿದ್ದು ಮೊನ್ನೆಯೂ..

‘ಅವಲಕಿ, ಉಬಿಟು, ಕೊಸಬರಿ, ಬ್​ಶಿ, ಪಲ್ಲ, ಮಇಸುರುಪಕು, ಕೆಸರಿಬೕತು, ಮಗಲುರು, ಮಳೆಗಳ, ಚಿತನು…’ ಆರನೇ ತರಗತಿ ಹುಡುಗಿಯೊಬ್ಬಳು ನಾನು ಹೇಳಿದ ಪದಗಳನ್ನು ಬರೆದಿದ್ದು ಈ ರೀತಿ. ಆಕೆ ಕ್ಲಾಸಿನಲ್ಲಿ ಕನ್ನಡದಲ್ಲಿ ನೂರಕ್ಕೆ ತೊಂಬತ್ತೇಳು ಅಂಕಗಳನ್ನು ಪಡೆದಿದ್ದಾಗಿ ಅವಳಮ್ಮ ಹೇಳುತ್ತಿದ್ದರೆ ನಾನು ಬೆಕ್ಕಸ ಬೆರಗಿನಿಂದ ಕೇಳುತ್ತ ಮೈಮರೆತುಬಿಟ್ಟೆ. ಹ್ಹಾ.. ಸವಿಗನ್ನಡವೇ? ಹೇಗೆ ಬರೆದರೂ ಅಂಕಗಳು ನಿನ್ನವೇ.

ಒಂದನೇ ಕ್ಲಾಸಿಗೆ ಸ್ಲೇಟು, ಬಳಪದ ಕಡ್ಡಿ ಇದ್ದ ಬ್ಯಾಗು ಹಿಡಿದು ಪ್ರವೇಶ ಮಾಡಿದ ನಮಗೆಲ್ಲ ಒಂದೆರಡು ದಿನಗಳಲ್ಲಿ ಕಲಿಯಬೇಕಿದ್ದುದು ‘ಅ ಆ’ ಮಾತ್ರ. ಇಡೀ ಸ್ಲೇಟಿಗೆ ಎರಡೇ ಅಕ್ಷರಗಳು. ಪ್ರತಿ ಅಕ್ಷರದ ಮೇಲೆಯೇ ಬರೆಯುತ್ತ ಅದನ್ನು ದಪ್ಪವಾಗಿಸುತ್ತಿದ್ದೆವು. ಯಾವ ಅಕ್ಷರ ಎಷ್ಟು ದಪ್ಪವಾಗಿದೆಯೋ ಅದರ ಮೇಲೆ ಅವರೆಷ್ಟು ಸಲ ಬರೆದಿದ್ದಾರೆ ಎಂಬುದು ತಿಳಿಯುತ್ತಿತ್ತು. ಇಡೀ ಒಂದು ವರ್ಷ ಕಲಿತಿದ್ದು ಬರೀ ಅ ದಿಂದ ಜ್ಞ ದವರೆಗಿನ ಅಕ್ಷರ ಮಾಲೆ. ಎರಡನೇ ತರಗತಿಗೆ ಹೋಗುವ ಮೊದಲು ಇದೆಲ್ಲವನ್ನೂ ತಪ್ಪಿಲ್ಲದೆ ಬರೆದರೆ ಮಾತ್ರ ಪಾಸ್. ಇಲ್ಲದಿದ್ದರೆ ಮರು ವರ್ಷವೂ ಅದೇ ತರಗತಿಯಲ್ಲಿ ಕುಳಿತು ಕಲಿಯಬೇಕಿತ್ತು.

ಒಂದು ಸಣ್ಣ ತಪ್ಪಿಗೂ ಒಂದು ಅಂಕ ಕಡಿಮೆ. ಅದೇಕೆಂದರೆ ಮತ್ತೊಮ್ಮೆ ಅದೇ ತಪ್ಪು ಮಾಡದಂತೆ ಜಾಗ್ರತವಾಗಿರಲು. ಭಾಷಾಕಲಿಕೆಯಲ್ಲಿ ನೂರಕ್ಕೇ ನೂರು ಎಂಬ ಮಾತೇ ಇಲ್ಲದ ಕಾಲವದು. ನಾನು ಆ ಕಾಲದಲ್ಲಿ ಕನ್ನಡ ಕಲಿತ ಕಾರಣ ಬರವಣಿಗೆಯ ತಪ್ಪುಗಳನ್ನು ನಾನಾಗಿಯೇ ಸರಿಪಡಿಸಿಕೊಳ್ಳುವ ಆತ್ಮವಿಶ್ವಾಸ ಈಗಲೂ. ಕನ್ನಡದಲ್ಲಿ ನೂರಕ್ಕೆ ಅರುವತ್ತು ಅಂಕಗಳು ಬಂದರೆ ಅದೊಂದು ಡಂಗುರ ಸಾರುವಂತಹ ವಿಷಯವಾಗಿದ್ದ ದಿನಗಳವು.

ಆಗಿನ ಕಲಿಕಾ ವಿಧಾನವೇ ಒಂದು ಥರದ್ದು. ಮೊದಲಿಗೆ ಭಾಷೆಯ ಅಧ್ಯಯನಕ್ಕೆ ಅನಿವಾರ್ಯವಾದ ಅಕ್ಷರಗಳ ಕಲಿಯುವಿಕೆಗೇ ರಾಜನ ಪಟ್ಟ ದೊರೆಯುತ್ತಿದ್ದದ್ದು. ಸ್ವರಗಳಿಂದ ಮೊದಲ್ಗೊಂಡು ವ್ಯಂಜನಗಳ ಬಳಿಗೆ ಬಂದು ನಿಂದು ಅರಗಿಸಿಕೊಂಡ ಬಳಿಕ ಒತ್ತಕ್ಷರಗಳು. ಅದೆಲ್ಲ ಮುಗಿದ ನಂತರವೇ ಅಕ್ಷರ ಅಕ್ಷರಗಳನ್ನು ಜೋಡಿಸಿದ ಪದಗಳು, ಅದರಿಂದಾಗುವ ವಾಕ್ಯಗಳು, ಆ ವಾಕ್ಯಗಳನ್ನು ರಚಿಸುವ ಕ್ರಮಗಳು, ಅದರಿಂದ ಮುಂದುವರಿದು ಇಡೀ ಪಾಠಗಳು, ವ್ಯಾಕರಣಗಳು… ಹೀಗೆ ಭಾಷೆಯೊಂದು ನಿಧಾನಕ್ಕೆ ಹಿಡಿತಕ್ಕೆ ಸಿಗುವಂತಾಗುತ್ತಿತ್ತು.

ಮೊನ್ನೆ ಹಳೇ ಗೆಳತಿಯೊಬ್ಬಳು ಮಾತಿಗೆ ಸಿಕ್ಕಿದ್ದಳು. ನಾವಿಬ್ಬರೂ ಒಟ್ಟಿಗೇ ಓದಿದವರು. ಆಕೆ ಈಗ ಶಾಲೆಯೊಂದರಲ್ಲಿ ಶಿಕ್ಷಕಿ. ತನ್ನ ಕೆಲಸದ ಬಗ್ಗೆ ಮಾತನಾಡುತ್ತ ನಾನು ಮಕ್ಕಳಿಗೆ ಕಲಿಸಲು ಶಾಲೆಗೆ ಹೋಗುತ್ತಿದ್ದೇನಾ ಅಥವಾ ಮಕ್ಕಳ ಬಿಸಿಯೂಟದ ಬೇಳೆಕಾಳು, ಅಕ್ಕಿ, ಗೋಧಿ ಸ್ವಚ್ಛ ಮಾಡಲು, ಶಾಲೆಗೆ ಹೋಗುತ್ತಿದ್ದೇನಾ ಎಂಬುದೇ ಸಂಶಯವಾಗಿದೆ. ಇದರ ನಡುವೆ ನಾನು ಮಾಡಿದ ಪಾಠ ಮಕ್ಕಳಿಗೆ ಅರ್ಥವಾಗಿದೆಯೂ ಇಲ್ಲವೋ ಎಂದು ಪರೀಕ್ಷೆ ಮಾಡಿದಾಗ ಅವರು ತಪ್ಪು ಉತ್ತರ ಕೊಟ್ಟರೂ ಅವರನ್ನು ಫೇಲ್ ಎನ್ನುವಂತಿಲ್ಲ. ಮತ್ತೊಮ್ಮೆ ಅದೇ ಪ್ರಶ್ನೆ ಕೇಳಿ ಉತ್ತರ ಹೊರಡಿಸಿ ‘ತೃಪ್ತಿಕರ’ ಎಂಬ ರಿಸಲ್ಟ್ ಕೊಡಬೇಕಾಗುತ್ತದೆ. ನನ್ನ ಹಲವು ಸಹೋದ್ಯೋಗಿಗಳು ಅದಕ್ಕಾಗಿ ಮೊದಲೇ ಯಾವ ಯಾವ ಪ್ರಶ್ನೆ ಕೊಡುತ್ತೇನೆ ಅಂತ ಹೇಳಿಯೇ ಪರೀಕ್ಷೆ ಇಡ್ತಾರಂತೆ. ಮತ್ತೊಮ್ಮೆ ಪರೀಕ್ಷೆ ಮಾಡು, ಪೇಪರ್ ತಿದ್ದು ಎನ್ನುವ ಎಲ್ಲ ರಗಳೆಗಳಿಂದ ಮುಕ್ತಿ. ಆದರೆ ಬೇಸರವಾಗೋದು ಯಾವಾಗ ಅಂದ್ರೆ ಕನ್ನಡವನ್ನೂ ಮಾರ್ಕ್ ಸ್ಕೋರಿಂಗ್ ಸಬ್ಜೆಕ್ಟ್ ಮಾಡುವ ಭರದಲ್ಲಿ ಭಾಷೆಯು ಸತ್ವ ಕಳೆದುಕೊಳ್ಳುತ್ತಿರುವುದು. 

ಆಕೆ ಹೇಳಿದ್ದು ಹೌದೆನ್ನಿಸಿತು.

ಕೆಲವು ತಿಂಗಳಿನ ಮೊದಲು ಮನೆಗೆ ಬಂದಿದ್ದ ಪದವಿ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆಗಷ್ಟೇ ಪೇಟೆಯಲ್ಲಿರುವ ಪ್ರತಿಷ್ಠಿತ ಕಾಲೇಜಿಗೆ ಸೇರಿದ್ದಳು. ತನ್ನ ಹೊಸ ಕಾಲೇಜಿನ ಸುದ್ದಿ ಮಾತನಾಡುತ್ತ ಕುಳಿತಿದ್ದಾಗ ಆಕೆಗೆ ಅವಳ ಗೆಳತಿಯಿಂದ ಫೋನ್ ಬಂತು. ಅವರ ಮಾತುಕತೆ ನಡೆದದ್ದೆಲ್ಲ ಇಂಗ್ಲಿಷಿನಲ್ಲಿಯೇ. ಫೋನ್ ಇಟ್ಟವಳೇ ಹೇಳಿದಳು. ‘ಅವಳು ನಮ್ಮ ಹಿಂದಿನ ಮನೆಯವಳು, ಈಗ ನನ್ನ ಕ್ಲಾಸೇ ಆಕೆ’.

‘ಅವಳಿಗೆ ಕನ್ನಡ ಬರುವುದಿಲ್ವಾ’ ಅಂದೆ.

‘ಬಾರದೇ ಏನು?’ ಎಂದಳು.

‘ಮತ್ಯಾಕೆ ಇಬ್ಬರೂ ಇಂಗ್ಲಿಷಲ್ಲೇ ಮಾತಾಡಿದ್ದು’ ಎಂದು ಕೇಳಿದ್ದಕ್ಕೆ ‘ಕಾಲೇಜಲ್ಲಿ ಯಾರೂ ಕನ್ನಡದಲ್ಲಿ ಮಾತಾನಾಡೋದೇ ಇಲ್ಲ. ಅದರಲ್ಲೂ ಹುಡುಗಿಯರು…’ ಎಂದಳು. ‘ಹುಡುಗರಾದರೆ ತುಳು ಅಥವಾ ಕನ್ನಡದಲ್ಲಿ ಮಾತಾಡ್ತಾರೆ, ಹುಡುಗಿಯರಲ್ಲೂ ಕೆಲವರು ಕೊನೇ ಬೆಂಚಿನವರು ಮಾತ್ರ ಕನ್ನಡ ಮಾತಾಡೋದು’ ಎಂದಳು. ತಲೆ ತಿರುಗಿತು. ಭಾಷೆಯೊಂದು ಭಾಷೆಯಾಗುಳಿಯದೇ ಅಂತಸ್ತು, ಮೇಲು ಕೀಳುಗಳಿಗೆ ಕಾರಣವಾಗುವುದು.

‘ನನಗೂ ಕನ್ನಡ ಎರಡನೇ ಭಾಷೆಯಾಗಿ ಕಲಿತಿದ್ದು ಹಾಗಾಗಿ ಬರೆಯುವುದು ಕಷ್ಟ. ಈಗ ಒಂದಿಷ್ಟು ಅಸೈನ್​ವೆುಂಟುಗಳಿವೆ. ಅದರಲ್ಲಿ ಕೆಲವು ಲೇಖನಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಬೇಕು ಅದೆಷ್ಟು ಕಷ್ಟ ಗೊತ್ತಿದೆಯಾ’ ಎಂದು ವಾದ ಹೂಡಿದಳು. ‘ಹುಂ.. ಇಂಗ್ಲಿಷ್ ಭಾಷೆಯನ್ನು ನೀನು ಪ್ರಯತ್ನ ಪಟ್ಟು ಕಲಿತದ್ದು. ಅದೇ ಸುಲಭ ಎಂದರೆ ನೀನು ಯಾವ ಪ್ರಯತ್ನವೂ ಇಲ್ಲದೆ ಕಲಿತ ಕನ್ನಡ ಯಾಕೆ ಕಷ್ಟವಾಗುವುದು. ನಿನಗೆ ಕನ್ನಡ ಮಾತನಾಡಲು ಗೊತ್ತಿದೆಯಲ್ಲ. ಆಗ ಬಳಸುವ ಶಬ್ದಗಳನ್ನೇ ಸ್ವತಂತ್ರವಾಗಿ ಬಳಕೆ ಮಾಡಿ ನಿನ್ನ ಕನ್ನಡ ಅಭ್ಯಾಸಕ್ಕೂ ಬಳಸು, ಸುಲಭ’ ಎಂದೆ. ತಲೆಯಲುಗಿಸಿದ್ದಳು.

ಸ್ವಲ್ಪ ದಿನ ಕಳೆದ ನಂತರ ಫೋನ್ ಮಾಡಿ ‘ನೀವು ಹೇಳಿದ ಉಪಾಯ ಇಷ್ಟ ಆಯ್ತು. ಈಗ ಇಂಗ್ಲಿಷಿನಲ್ಲಿ ಬರೆದಿದ್ದನ್ನು ನಾನಾಗಿದ್ದರೆ ಕನ್ನಡದಲ್ಲಿ ಹೇಗೆ ಹೇಳುತ್ತಿದ್ದೆ ಎಂದು ಆಲೋಚನೆ ಮಾಡಿ ಅದೇ ರೀತಿ ಬರೆಯುತ್ತಿದ್ದೇನೆ. ನಮ್ಮ ಲೆಕ್ಚರರ್ಸ್ ಈಗ ನಿನ್ನ ಕನ್ನಡ ಉತ್ತಮವಾಗಿದೆ ಎಂದಿದ್ದಾರೆ’ ಎಂದಳು. ಖುಷಿಯಾಗಿತ್ತು.

ಹೊಸ ಬಗೆಯ ಕಲಿಕಾ ಕ್ರಮಗಳೋ ಅಥವಾ ಹೇಗೆ ಬರೆದರೂ ಸಣ್ಣ ತರಗತಿ ಮಕ್ಕಳನ್ನು ಪಾಸ್ ಮಾಡಲೇಬೇಕೆಂಬ ಶಿಕ್ಷಣದ ಉದಾರ ನಿಯಮಗಳೋ, ಯಾವುದು ಹೆಚ್ಚು ಅಪಾಯಕಾರಿ ಎಂದು ತಿಳಿಯದಿದ್ದರೂ ಕನ್ನಡವನ್ನು ಕುಲಗೆಡಿಸುವ ಎಲ್ಲ ಕಾರ್ಯಗಳು ಇದರಿಂದ ನಡೆಯುತ್ತಿರುವುದಂತೂ ಸತ್ಯ. ಹೇಗೆ ಕಟ್ಟಡವೊಂದು ಸರಿಯಾದ ತಳಹದಿಯಿಲ್ಲದಿದ್ದರೆ ನಿಂತುಕೊಳ್ಳಲು ಸಾದ್ಯವಿಲ್ಲವೋ ಹಾಗೆಯೇ ನಮ್ಮ ಶಿಕ್ಷಣದಲ್ಲಿ ಅಕ್ಷರಗಳ ಕಲಿಕೆಯೇ ಸರಿಯಿಲ್ಲದಿದ್ದರೆ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸಿಗುವುದೂ ಸಾಧ್ಯವಿಲ್ಲ. ಸರ್ಕಾರವೂ, ಶಿಕ್ಷಣ ಮಂತ್ರಿಗಳೂ, ಈ ನಿಟ್ಟಿನಲ್ಲಿ ಯೋಚಿಸುವುದೊಳಿತು.

ಕನ್ನಡಕಲಿಕೆಯೂ, ಕನ್ನಡಭಾಷೆಯೂ ನಮ್ಮ ಹೆಮ್ಮೆಯ ತುರಾಯಿಯೇ ಎಂಬ ಮನಸ್ಥಿತಿ ಬರುವವರೆಗೆ ಕನ್ನಡಕ್ಕೆ ಈ ಅವಹೇಳನ ತಪ್ಪಿದ್ದಲ್ಲ. ಕನ್ನಡ ನವೆಂಬರ್ ತಿಂಗಳಿನ ಸಭೆ ಸಮಾರಂಭಗಳ ಭಾಷಣ ಮಾತ್ರವಾಗದೇ ಮನೆಮನಗಳ ಭಾಷೆಯಾದರೆ ಕನ್ನಡ ಉಳಿದೀತು. ಬೆಳೆದೀತು.

(ಲೇಖಕರು ಸಾಹಿತಿ)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...