ಹಗರಿಬೊಮ್ಮನಹಳ್ಳಿ: ಕನ್ನಡ ಜ್ಯೋತಿ ರಥಯಾತ್ರೆ ಮಂಗಳವಾರ ಸಂಜೆ ಪಟ್ಟಣಕ್ಕೆ ಆಗಮಿಸಿದ್ದು, ತಹಸೀಲ್ದಾರ್ ಆರ್.ಕವಿತಾ, ತಾಪಂ ಇಒ ಡಾ.ಪರಮೇಶ್ವರಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಕನ್ನಡಪರ ಸಂಘಟನೆ ಮುಖಂಡರು ಸ್ವಾಗತಿಸಿದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಗೈರು : ಕ್ರಮ ಕೈಗೊಳ್ಳಲು ತಹಸೀಲ್ದಾರ್‌ಗೆ ಆಗ್ರಹ
ಪುರಸಭೆ ಅಧ್ಯಕ್ಷ ಮರಿರಾಮಪ್ಪ ಮಾತನಾಡಿ, ಕನ್ನಡ ನೆಲ, ಭಾಷೆ, ನೀರು ವಿಷಯದಲ್ಲಿ ಕರುನಾಡಿನ ನಾವೆಲ್ಲ ಒಂದಾಗಬೇಕು. ಕನ್ನಡಾಂಬೆಯ ಏಳಿಗೆ, ಭಾಷೆ ಉಳಿವಿಗಾಗಿ ಎಲ್ಲರೂ ಒಂದಾಗಿ ಹೋರಾಡೋಣ ಎಂದರು.
ಗಡಿಗ್ರಾಮಕೆಂಚಟನಹಳ್ಳಿಯಿಂದ ಪಟ್ಟಣಕ್ಕೆ ಆಗಮಿಸಿದ ರಥಕ್ಕೆ ರಾಮನಗರದ ಡಾ.ಬಿ.ಆಂಬೆಡ್ಕರ್ ವೃತ್ತದಲ್ಲಿ ಪೂಜೆ ಸಲ್ಲಿಸಲಾಯಿತು. ಹಂಪಾಪಟ್ಟಣದ ನವೋದಯ ಯುವಕ ಸಂಘದ ಕೋಲಾಟ, ಗಾದಿಗನೂರು ಯುವಕರ ಡ್ರಮ್‌ಸೆಟ್‌ನೊಂದಿಗೆ ಬಸವೇಶ್ವರ ಬಜಾರದಲ್ಲಿ ಮೆರವಣಿಗೆ ಸಾಗಿ, ನಂತರ ಬಸವೇಶ್ವರ ಪುತ್ಥಳಿ ಬಳಿ ಮಂಗಲವಾಯಿತು. ನಂತರ, ಕೂಡ್ಲಿಗಿ ತಾಲೂಕಿಗೆ ಕಳಿಸಿಕೊಡಲಾಯಿತು.
ಪುರಸಭೆ ಸದಸ್ಯ ಬ್ಯಾಡ್ಗಿ ರಾಜೇಶ್, ನಾಮನಿರ್ದೇಶಕ ಸದಸ್ಯರಾದ ಮಂಜುನಾಥ, ಬಾಳಪ್ಪ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ಗುರುಬಸವರಾಜ್ ಸೊನ್ನದ್, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ತಾಲೂಕು ಕಾರ್ಯದರ್ಶಿ ಬ್ಯಾಟಿ ಮಾರುತಿ, ಹಿರಿಯ ಸಾಹಿತಿಗಳಾದ ಎ.ಆರ್.ಪಂಪಣ್ಣ, ಉಪ್ಪಾರ ಬಸಪ್ಪ, ಗಣೇಶ ಹವಾಲ್ದಾರ್, ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ, ಪ್ರಮುಖರಾದ ಎ.ಕೇಶವಮೂರ್ತಿ, ಮಾರೆಪ್ಪ, ಉದಗಟ್ಟಿ ಕರಿಬಸವರಾಜ್, ನಾಗಭೂಷಣ್ ಗದ್ದಿಕೆರೆ, ಪೇಂಟರ್ ತಳವಾರು ಕೊಟ್ರೇಶ ಇತರರಿದ್ದರು.