ಅಮೆರಿಕದ ಮೊರೀಸ್ವಿಲ್ ಮೇಯರ್​ರಿಂದ ಕನ್ನಡ ಕಲಾಶ್ರೀ, ನೃತ್ಯಗುರು, ಸಮಾಜ ಸೇವಕಿ ಸುಪ್ರಿಯಾ ದೇಸಾಯಿಗೆ ಸನ್ಮಾನ

Supriya Desai
ಅಮೆರಿಕದ ಮೊರೀಸ್ವಿಲ್ ಮೇಯರ್​ರಿಂದ ಕನ್ನಡ ಕಲಾಶ್ರೀ, ನೃತ್ಯಗುರು, ಸಮಾಜ ಸೇವಕಿ ಸುಪ್ರಿಯಾ ದೇಸಾಯಿಗೆ ಸನ್ಮಾನ
ಬೆಂಕಿ ಬಸಣ್ಣ, ನ್ಯೂಯಾರ್ಕ್​

ಉತ್ತರ ಕ್ಯಾರೋಲಿನಾ ರಾಜ್ಯದ ಮೊರೀಸ್ವಿಲ್ ನಗರದ ಮೇಯರ್ ಟಿ.ಜೆ. ಕಾಲಿಯ ಅವರು ಇದೇ ಸೆಪ್ಟೆಂಬರ್ 7 ರಂದು ಕನ್ನಡ ಕಲಾಶ್ರೀ, ನೃತ್ಯಗುರು, ಕ್ರಿಕೆಟ್ ಪೋಷಕಿ ಹಾಗೂ ಸಮಾಜ ಸೇವಕಿ ಸುಪ್ರಿಯಾ ದೇಸಾಯಿ ಅವರಿಗೆ ಸತತ ಮೂರು ದಶಕಗಳ ನಿರಂತರ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಮಾನ್ಯತಾ ಪತ್ರ (Proclamation) ಕೊಟ್ಟು ಸನ್ಮಾನಿಸಿದರು .

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸುಪ್ರಿಯಾ ದೇಸಾಯಿ 33 ವರ್ಷಗಳ ಹಿಂದೆ ಉತ್ತರ ಕ್ಯಾರೋಲಿನಾದ ರಿಸರ್ಚ್ ಟ್ರೈ ಆಂಗಲ್ ಪ್ರದೇಶಕ್ಕೆ ವಲಸೆ ಹೋಗಿ, ಅಪಾರ ಸಾಧನೆಗಳನ್ನು ಮತ್ತು ಸಮಾಜ ಸೇವೆಯನ್ನು ಮಾಡಿದ್ದಾರೆ. ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಗುರು ಸುಪ್ರಿಯಾ ದೇಸಾಯಿಯವರು 1993ರಲ್ಲಿ ತಮ್ಮ ನೃತ್ಯಶಾಲೆ ಪಾಯಲ್ ಡಾನ್ಸ್ ಅಕಾಡೆಮಿಯನ್ನು ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ನೃತ್ಯ ಕಲಿಸಿದ್ದಾರೆ. ಇವರು ಅತ್ಯುತ್ತಮ ನಾಯಕಿ ಮತ್ತು ಬೇರೆಯವರ ಸಹಾಯಕ್ಕೆ ಸದಾ ಸಿದ್ದ. ಉತ್ತರ ಕ್ಯಾರೋಲಿನಾ ರಾಜ್ಯದ ‘ಸಂಪಿಗೆ’ ಕನ್ನಡ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿ ಮತ್ತು ಪ್ರಥಮ ಅಧ್ಯಕ್ಷೆಯಾಗಿ ಕನ್ನಡ ಸೇವೆಯನ್ನು ಮಾಡಿದ್ದಾರೆ.

ಕನ್ನಡ ಸೇವೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಗಿಟ್ಟಿರುವ ಇವರು ಪ್ರತಿಷ್ಠಿತ ‘ಅಕ್ಕ’ (ಅಮೇರಿಕನ್ ಕನ್ನಡ ಕೂಟಗಳ ಒಕ್ಕೂಟ) ಸಂಸ್ಥೆಯ ಸಂಸ್ಥಾಪಕ ಸದಸ್ಯರು ಹಾಗೂ ಮೊದಲ ಖಜಾಂಚಿ. ಹಲವಾರು ಅಕ್ಕ ವಿಶ್ವ ಕನ್ನಡ ಸಮ್ಮೇಳನಗಳನ್ನು ಆಯೋಜಿಸುವಲ್ಲಿ ವಿವಿಧ ಕಮಿಟಿಗಳ ನಾಯಕತ್ವ ವಹಿಸಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕ್ರಿಕೆಟ್ ಪ್ರಚಾರ ಮಾಡುವಲ್ಲಿ, ಬರಹಗಾರರಾಗಿ ಮತ್ತು ಕ್ರೀಡಾ ವಕ್ತಾರರಾಗಿ ಇವರು ವಹಿಸಿರುವ ಪಾತ್ರವು ಅಪಾರವಾಗಿದೆ. ಮೊರೀಸ್ವಿಲ್ ನಗರವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೇಂದ್ರವನ್ನಾಗಿ ರೂಪಿಸಲು ಹಗಲಿರುಳು ದುಡಿದಿದ್ದಾರೆ.

Supriya Desai

ಮೇಲಿನ ಎಲ್ಲ ಸಾಧನೆಗಳನ್ನು ಮೆಚ್ಚಿಕೊಂಡು, ಮೊರಿಸ್ವಿಲ್​ ನಗರವು ಆಗಸ್ಟ್ 13ರಂದು ಇವರಿಗೆ ಸನ್ಮಾನ ಪದಕ ಘೋಷಣೆ ಮಾಡಿತ್ತು ಮತ್ತು ಸೆಪ್ಟೆಂಬರ್ 7ರಂದು ನಡೆದ ಸುಂದರ ಸಮಾರಂಭದಲ್ಲಿ ಮೇಯರ್ ಟಿ.ಜೆ. ಕಾಲಿಯ ಅವರು ಸುಪ್ರಿಯಾ ದೇಸಾಯಿರ ಸಾಧನೆಗಳನ್ನು ಹಾಡಿ ಹೊಗಳಿ, ಪ್ರಶಸ್ತಿ ಪ್ರದಾನ ಮಾಡಿದರು.

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಶಿಕ್ಷಣ, ಮಾಡೆಲಿಂಗ್​ ಮತ್ತು… ಈ ಬ್ಯೂಟಿಫುಲ್​ IPS​ ಅಧಿಕಾರಿಯ ಹಿಂದಿದೆ ಒಂದು ಮನಮಿಡಿಯುವ ಕತೆ!

Share This Article

ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಸ್ಕ್ರೋಲಿಂಗ್ ಮಾಡ್ತೀರಾ?  ಇದ್ರಿಂದಲೇ ಗೊತ್ತಾಗುತ್ತದೆ ನಿಮ್ಮ Personality traits…

ಬೆಂಗಳೂರು:  ಈಗ  ಕೆಲವು ಅಧ್ಯಯನಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು (Personality traits ) ಹುಟ್ಟಿದ ದಿನಾಂಕ, ಕಣ್ಣಿನ…

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ