ಕಾನ್ ಚಿತ್ರೋತ್ಸವಕ್ಕೆ ಕನ್ನಡದ ಡೇವಿಡ್

ಬೆಂಗಳೂರು: ಪ್ರತಿ ವರ್ಷ ಫ್ರಾನ್ಸ್​ನಲ್ಲಿ ನಡೆಯುವ ಕಾನ್ ಚಿತ್ರೋತ್ಸವಕ್ಕೆ ಪ್ರಪಂಚದ ಹಲವು ದೇಶಗಳ ಸಿನಿಮಾಸಕ್ತರು ಹಾಜರಿ ಹಾಕುತ್ತಾರೆ. ಈ ಬಾರಿ ಮೇ 14ರಿಂದ 25ರವರೆಗೆ ಈ ಚಿತ್ರೋತ್ಸವ ಜರುಗಲಿದೆ. ಕಾನ್ ಫಿಲಂ ಫೆಸ್ಟಿವಲ್​ನಲ್ಲಿ ತಮ್ಮ ಸಿನಿಮಾ ಪ್ರದರ್ಶನವಾಗಬೇಕು ಎಂಬ ಕನಸು ಹೊತ್ತಿರುತ್ತಾರೆ ಅನೇಕ ನಿರ್ದೇಶಕರು. ಅಂಥ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ ಕನ್ನಡದ ‘ಡೇವಿಡ್’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿರುವ ಭಾರ್ಗವ್ ಯೋಗಂಭರ್.

ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ‘ಡೇವಿಡ್’ ಸಿನಿಮಾದ ಮೊದಲ ಪ್ರದರ್ಶನ ಪ್ರತಿಷ್ಠಿತ ಕಾನ್ ಫಿಲಂ ಫೆಸ್ಟಿವಲ್​ನಲ್ಲಿ ಆಗುತ್ತಿರುವುದು ಇಡೀ ತಂಡಕ್ಕೆ ಸಂತಸ ತಂದಿದೆ. ಮಹಾನಂದಿ ಪ್ರೊಡಕ್ಷನ್ಸ್, ಲಯನ್ಸ್ ಗ್ರಿಪ್ಸ್ ಹಾಗೂ ಡಾರ್ಲಿಂಗ್ ಫಿಲಂಸ್ (ಆಸ್ಟ್ರೇಲಿಯಾ) ಲಾಂಛನದಲ್ಲಿ ಪ್ರಸಾದ್ ರುದ್ರಮುನಿ, ಪ್ರದೀಪ್, ಉಮೇಶ್, ಸ್ಟೀವ್ ರೈಸ್, ಶೈಲಜಾ, ಬಾಲಸುಬ್ರಮಣ್ಯ ಹಾಗೂ ದೇವ ಜತೆಯಾಗಿ ಈ ಚಿತ್ರವನ್ನು ನಿರ್ವಿುಸಿದ್ದಾರೆ. ಶ್ರೇಯಸ್ ಚಿಂಗ, ಅವಿನಾಶ್ ಯಳಂದೂರು, ಹರೀಶ್, ಬುಲೆಟ್ ಪ್ರಕಾಶ್, ರಾಕೇಶ್ ಅಡಿಗ, ಕಾವ್ಯಾ ಶಾ, ನವ್ಯಾ ರಮೇಶ್, ಪ್ರತಾಪ್ ನಾರಾಯಣ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಲಿವುಡ್​ನ ಸ್ಟೀವ್ ರೈಸ್ ಹಾಗೂ ದೇವ ಛಾಯಾಗ್ರಹಣ, ಸಿದ್ಧಾರ್ಥ್ ಹಾಗೂ ಮುಖೇಶ್ ಅವರ ಸಂಕಲನ ಈ ಚಿತ್ರಕ್ಕಿದೆ.

ಬಾಲಿವುಡ್ ಸೆಲೆಬ್ರಿಟಿಗಳ ರೆಡ್ ಕಾರ್ಪೆಟ್ ನಡಿಗೆ

ಹನ್ನೊಂದು ದಿನ ನಡೆಯುವ ಕಾನ್ ಚಿತ್ರೋತ್ಸವದಲ್ಲಿ ಸೆಲೆಬ್ರಿಟಿಗಳ ರೆಡ್ ಕಾರ್ಪೆಟ್ ನಡಿಗೆ ಕೂಡ ಕೇಂದ್ರ ಬಿಂದು ಆಗಿರುತ್ತದೆ. ಹಲವು ದೇಶಗಳಿಂದ ಬಂದ ನಟ-ನಟಿಯರು ಪ್ರತಿ ದಿನ ಕೆಂಪುಹಾಸಿನ ಮೇಲೆ ಹೆಜ್ಜೆ ಹಾಕಿ, ಮಾಧ್ಯಮದ ಕ್ಯಾಮರಾಗಳಿಗೆ ಪೋಸ್ ನೀಡುವುದು ವಾಡಿಕೆ. ಯಾರು, ಯಾವ ರೀತಿಯ ಕಾಸ್ಟ್ಯೂಮ್ಲ್ಲಿ ಕಂಗೊಳಿಸುತ್ತಾರೆ ಎಂಬ ಕೌತುಕ ಪ್ರತಿ ಬಾರಿಯೂ ಮನೆ ಮಾಡಿರುತ್ತದೆ. ವಿವಿಧ ಜಾಗತಿಕ ಬ್ರಾ್ಯಂಡ್​ಗಳಿಗೆ ರಾಯಭಾರಿಗಳಾಗಿರುವ ಬಾಲಿವುಡ್ ನಟಿಯರಾದ ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಸೋನಮ್ ಕಪೂರ್ ಮುಂತಾದವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲಿದ್ದಾರೆ.

Leave a Reply

Your email address will not be published. Required fields are marked *