ಕೆ.ಆರ್.ಸಾಗರ: ಕೆ.ಆರ್.ಸಾಗರ ಗ್ರಾಮದ ಅರಳೀಕಟ್ಟೆ ಬಳಿಯ ಶ್ರೀ ಕಾವೇರಮ್ಮ ಆಟೋ ಮಾಲೀಕ ಹಾಗೂ ಚಾಲಕರ ಸಂಘದಿಂದ ಶುಕ್ರವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಆಟೋ ಚಾಲಕರ ಕನ್ನಡ ಅಭಿಮಾನ ಹೃದಯಸ್ಪರ್ಶಿ ಎಂದು ಹೇಳಿದರು. ನಂತರ ಸಂಜೆ ಕನ್ನಡ ರಸ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡ ಸುಂದರ ಭಾಷೆಯಾಗಿದೆ. ಅನ್ಯಭಾಷೆ ವ್ಯಾಮೋಹಕ್ಕೆ ಒಳಾಗಗದೆ ಎಲ್ಲರ ಜತೆ ಕನ್ನಡ ವಾಣಿಜ್ಯ ಭಾಷೆಯಾಗಿ ಬಳಸಬೇಕು ಎಂದು ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿಎಸ್‌ಐ ರಮೇಶ ಕರ್ಕಿಕಟ್ಟೆ ಹೇಳಿದರು.
ಶ್ರೀ ಕಾವೇರಮ್ಮ ಆಟೋ ಮಾಲೀಕ ಹಾಗೂ ಚಾಲಕರ ಸಂಘದ ಅಧ್ಯಕ್ಷ ಸ್ವಾಮಿ, ಸದಸ್ಯರಾದ ಕೃಷ್ಣ, ಸುನೀಲ್, ದಿನೇಶ್, ನಂದೀಶ್, ಹರೀಶ್, ಗ್ರಾ.ಪಂ.ಸದಸ್ಯ ಮೂರ್ತಿ, ರವಿ ಇದ್ದರು.