ರಿಪ್ಪನ್‌ಪೇಟೆ: ಕನ್ನಡ ಭಾಷೆ ಉಳಿಸಿ ಪೋಷಿಸಬೇಕಾದರೆ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಕನ್ನಡ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ಕನ್ನಡ ರಥಯಾತ್ರೆ ಸ್ವಾಗತಿಸಿ ಮಾತನಾಡಿ, ನಾಡಿನ ಪ್ರತಿಯೊಬ್ಬರೂ ಕನ್ನಡದ ಅಸ್ಮಿತೆ ಉಳಿಸುವಲ್ಲಿ ಶ್ರಮಿಸಬೇಕು. ದೇಶ ವಿವಿಧ ಭಾಷಾವಾರು ಪ್ರಾಂತ್ಯಗಳನ್ನು ಒಳಗೊಂಡಿದ್ದು, ಆಯಾ ಪ್ರಾಂತ್ಯದವರಿಗೆ ಆಯಾ ಭಾಷೆಯೇ ಶ್ರೇಷ್ಠ. ಇದು ಆಡಳಿತಗಾರರಿಗೆ ಅರಿವು ಇರಬೇಕು. ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು. ನಾಡಿನಲ್ಲಿ ಕನ್ನಡವೇ ಸರ್ವಸ್ವ ಎಂದು ತಿಳಿಸಿದರು.
ತಾಪಂ ಇಒ ನರೇಂದ್ರಕುಮಾರ, ತಾಲೂಕು ಕಸಾಪ ಅಧ್ಯಕ್ಷ ತ.ಮ.ನರಸಿಂಹ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯ ಮಲ್ಲಿಕಾರ್ಜುನ, ವಿನೋದ್, ಮುಖಂಡರಾದ ಮಂಜುನಾಥ ಕಾಮತ್, ನಾಗಭೂಷಣ, ರವೀಂದ್ರ, ಯೋಗೇಂದ್ರಪ್ಪ ಗೌಡ, ಸುಧೀರ, ನಿರ್ಮಲಾ, ಎಂ.ಎಂ.ಪರಮೇಶ, ಹಸನಬ್ಬ, ರಮೇಶ ಇತರರಿದ್ದರು.
Read This Article also : ಸಮರ್ಥ ಆಡಳಿತದಿಂದ ಭಾರತ ಶಕ್ತಿಶಾಲಿ