ಸರ್ಕಾರ ಕನ್ನಡ ಬೆಳೆಸುವ ಧೈರ್ಯ ಪ್ರದರ್ಶಿಸಲಿ

Latest News

ಕೆ.ಆರ್​. ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ನಾಮಪತ್ರ ಸಲ್ಲಿಕೆ ವೇಳೆ ಚಪ್ಪಲಿ ಎಸೆತ: ಜೆಡಿಎಸ್​ ಕಾರ್ಯಕರ್ತರ ವಿರುದ್ಧ ಆರೋಪ

ಬೆಂಗಳೂರು: ಕೆ.ಆರ್​. ಪೇಟೆ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಾರಾಯಣ ಗೌಡ ಅವರು ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ತೆರಳಿದ ಸಂದರ್ಭದಲ್ಲಿ...

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬಳಸಿದ ಪರಿಸರಸ್ನೇಹಿ ಕಾರು ಯಾವುದು?

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ...

ಮಧುರವಾದ ಮಾತಿಗೇಕೆ ದಾರಿದ್ರ್ಯ?

ಸುಮಾರು ಎಂಭತ್ತರ ಆಸುಪಾಸಿನ ಅಜ್ಜಿಯೊಬ್ಬಳು ದಿನ ಸಂಜೆ ತಪ್ಪದೆ ಊರಿನ ಪಕ್ಕದಲ್ಲಿದ್ದ ಆಸ್ಪತ್ರೆಯ ವೈದ್ಯರೊಬ್ಬರ ಭೇಟಿಗೆ ಬರುತ್ತಿದ್ದರು. ಕಣ್ಣು ಮಂಜಾಗಿ ಸರಿಯಾಗಿ ನಡೆಯಲೂ ಆಗದ ಅಸಹಾಯಕ...

ಶರತ್​ ಬಚ್ಚೇಗೌಡ ಅವರನ್ನು ಪಕ್ಷದಿಂದ ಉಚ್ಚಾಟಿಸಲು ನಿರ್ಧರಿಸಲಾಗಿದೆ: ಸಿಎಂ ಬಿ.ಎಸ್​. ಯಡಿಯೂರಪ್ಪ

ಬೆಂಗಳೂರು: ಪಕ್ಷದ ವರಿಷ್ಠರ ಸೂಚನೆ ಮತ್ತು ಮನವೊಲಿಕೆ ಹೊರತಾಗಿಯೂ ಹೊಸಕೋಟೆ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶರತ್​ ಬಚ್ಚೇಗೌಡ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು...

ಡೇರಿಯಿಂದ ಹಾಲು ನಿರಾಕರಣೆ, ರೈತರ ಪ್ರತಿಭಟನೆ

ಹಾರೋಹಳ್ಳಿ: ಇಪ್ಪತ್ತು ವರ್ಷದಿಂದ ಲೆಕ್ಕ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕನಕಪುರ ತಾಲೂಕು ಮರಳವಾಡಿ ಹೋಬಳಿಯ ಆಗ್ರಾ ಗ್ರಾಮದ ಹಾಲು ಉತ್ಪಾದಕರು...

ಮಹೇಶ ಮನ್ನಯ್ಯನವರಮಠ ಮಹಾಲಿಂಗಪುರ (ಬಸವ ಕವಿ ವೇದಿಕೆ)

ಕನ್ನಡ ಅಂಕಿಗಳನ್ನು ಕಾರ್ಯಾಚರಣೆಗೆ ತರದ ಸರ್ಕಾರ ವಿರುದ್ಧ ಆಕ್ರೋಶ, ಕನ್ನಡ ಭಾಷೆ ಬೆಳೆಸುವ ಮಾತು ಬಿಡಿ ಕನ್ನಡ ಉಳಿದರೆ ಸಾಕೆಂಬ ಆಶಯ, ನಮ್ಮಲ್ಲಿ ಇಲ್ಲದಿರುವ ಭಾಷಾ ಬದ್ಧತೆ ಕುರಿತು ಖೇದ, ಸಾಹಿತ್ಯ ಚಳವಳಿ ನಡೆಯಬೇಕೆಂಬ ಸಲಹೆ, ಕನ್ನಡ ಪುಸ್ತಕ ಪ್ರಾಧಿಕಾರ ಇನ್ನಷ್ಟು ಸಶಕ್ತವಾಗಿರಬೇಕಂಬ ಆಗ್ರಹ, ಶೋಷಣೆ ವಿರುದ್ಧ ಧ್ವನಿ ಎತ್ತಬೇಕೆಂಬ ಕರೆ…

ಮಹಾಲಿಂಗಪುರದ ಶ್ರೀ ಬನಶಂಕರಿದೇವಿ ಸಾಂಸ್ಕೃತಿಕ ಭವನದ ಬಸವ ಕವಿ ವೇದಿಕೆ ಯಲ್ಲಿ ಭಾನುವಾರ ಆರಂಭಗೊಂಡ ಬಾಗಲಕೋಟೆ ಜಿಲ್ಲಾ 7ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಂ.ಎಸ್. ಸಿಂಧೂರ ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ ಅಂಶಗಳಿವು.

ವಿಶ್ವಕ್ಕೆ ವರ್ಣಾಶ್ರಮರಹಿತ ಸಾಹಿತ್ಯ ನೀಡಿದ ವರು ಬಸವಣ್ಣನವರು. 12ನೇ ಶತಮಾನದ ಸಾಹಿತ್ಯ ಸರ್ವರಿಗಾಗಿ ಇತ್ತು. ಅನುಭವ ಮಂಟಪ ಗೋಷ್ಠಿಗಳ ಚಿಂತನೆಗಳ ಆಗರವಾಗಿತ್ತು. ಕನ್ನಡ ಭಾಷೆ ಕಲಿಯುವುದರಿಂದ ನನ್ನ ಜೀವನ ಉದ್ಧಾರ ಆಗುತ್ತದೆಂದು ವ್ಯಕ್ತಿಗೆ ಮನವರಿಕೆ ಆದಾಗ ಮಾತ್ರ ವ್ಯಕ್ತಿ ತಾನಾಗಿ ಕನ್ನಡ ಕಲಿಯಲು ಮುಂದೆ ಬರುತ್ತಾನೆ. ಸರ್ಕಾರಕ್ಕೆ ಕನ್ನಡ ಬೆಳೆಸುವ ಧೈರ್ಯ ಹಾಗೂ ಮನಸ್ಸು ಇಲ್ಲ. ಕನ್ನಡ ಬರದವರಿಗೆ ಸರ್ಕಾರಿ ಸವಲತ್ತು ಹಾಗೂ ನೌಕರಿ ಇಲ್ಲ ಎಂದರೆ ಯಾಕೆ ಕನ್ನಡ ಕಲಿಯುವುದಿಲ್ಲ ನೋಡಿ ಎಂದ ಅವರು, ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಕನ್ನಡದ ಬೆಳವಣಿಗೆ ಆಗುತ್ತಿಲ್ಲ ಎಂದು ವಿಷಾದಿಸಿದರು.ರಮೇಶ ನಿಡೋಣಿ, ಪಿ.ಬಿ. ಧುತ್ತರಗಿ ಪ್ರತಿಷ್ಠಾನದ ಸದಸ್ಯ ಚಂದ್ರಶೇಖರ ದೇಸಾಯಿ, ಮಹೇಶ ತಪಶೆಟ್ಟಿ, ಮಂಜುಳಾ ಶಿವಾನಂದ, ಸಿದ್ದಲಿಂಗಪ್ಪ ಬೀಳಗಿ, ಮಡಿವಾಳಪ್ಪ ಕರಡಿ, ಹಣಮಂತ ಬರಗಲ್ಲ, ಶಿವಾನಂದ ಶೆಲ್ಲಿಕೇರಿ, ಸಂಗಮೇಶ ನೀಲಗುಂದ ಇದ್ದರು. ಕಲಾಚಿಂತನ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಗೂ ಬಸವರಾಜ ಹೂಗಾರ ರೈತ ಗೀತೆ ಪ್ರಸ್ತುಪಡಿಸಿದರು. ನವೀನ ಹಳ್ಳಿ, ರಾಘವೇಂದ್ರ ಆರಿ ಕಲೆ ಪ್ರದರ್ಶಿಸಿದರು. ಕಸಾಪ ತಾಲೂಕು ಅಧ್ಯಕ್ಷ ವೀರೇಶ ಆಸಂಗಿ ಸ್ವಾಗತಿಸಿದರು. ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಹಿಣಿ ದಾನಿ ನಿರೂಪಿಸಿದರು. ಈರಣ್ಣ ಲಟ್ಟಿ ವಂದಿಸಿದರು.

ಬದುಕಿನ ಹೆಜ್ಜೆಯಲ್ಲಿ ಕಂಪು ಸೂಸಲಿ:ಕನ್ನಡ ಕಲಿತರೆ ಯೋಗ್ಯರಲ್ಲ, ಇಂಗ್ಲಿಷ್ ಕಲಿತರೆ ಯೋಗ್ಯರು ಎಂಬ ಭಾವನೆ ಬಿಡಬೇಕಿದೆ. ಕನ್ನಡ ಭಾಷೆ ನಮ್ಮ ಬದುಕಿನ ಪ್ರತಿ ಹೆಜ್ಜೆಯಲ್ಲೂ ಕಂಪು ಸೂಸಬೇಕಿದೆ ಎಂದು ಮಾಜಿ ಸಚಿವೆ ಡಾ.ಲೀಲಾದೇವಿ ಆರ್. ಪ್ರಸಾದ್ ಹೇಳಿದರು. ಸಮ್ಮೇಳನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ನಶಿಸಿ ಹೋಗಿದೆ. ಕನ್ನಡಿಗರನ್ನು ದೀಪ ಹಚ್ಚಿ ಹುಡುಕುವ ಸ್ಥಿತಿ ನಿರ್ವಣವಾಗಿದೆ. ಇದ್ದುದ್ದರಲ್ಲಿ ಉತ್ತರ ಕರ್ನಾಟಕವೇ ಪುಣ್ಯ ಮಾಡಿದೆ. ಇಲ್ಲಿ ಕನ್ನಡದ ಸಂಸ್ಕೃತಿ ಇದೆ, ಭಾಷೆಯ ಸೊಗಡು ಇದೆ ಎಂದರು. ಆಧುನಿಕ ಭರಾಟೆಯಲ್ಲಿ ಕನ್ನಡ ಭಾಷೆ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಮಮ್ಮಿ, ಡ್ಯಾಡಿ ಸಂಸ್ಕೃತಿ ವ್ಯಾಪಕವಾಗಿ ಹರಡುತ್ತಿದೆ. ಈ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ. ಕನ್ನಡ ಭಾಷೆ ಉಳಿಸಿ ಬೆಳೆಸಲು ಎಲ್ಲರೂ ಪ್ರಯತ್ನಿಸಬೇಕಾಗಿದೆ. ಅಧಿಕಾರಿಗಳು, ಜನಪ್ರತಿನಿಧಿ ಗಳು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿದರೆ ಖಂಡಿತವಾಗಿಯೂ ಕನ್ನಡ ಭಾಷೆ, ಕನ್ನಡ ಶಾಲೆಗಳು ಉಳಿಯಬಲ್ಲವು ಎಂದು ಸಲಹೆ ಮಾಡಿದರು. ಕನ್ನಡದ ಬಾವುಟದಲ್ಲಿ ಕೆಂಪು ಹಾಗೂ ಹಳದಿ ಬಣ್ಣಗಳಿದ್ದು, ಕೆಂಪು ಹೋರಾಟದ ಸಂಕೇತವಾದರೆ , ಹಳದಿ ಶಾಂತಿಯ ಸಂಕೇತವಾಗಿದೆ. ನಾಡದೇವಿ ಭುವನೇಶ್ವರಿಗೆ ಈ 2 ಬಣ್ಣಗಳು ಅರಿಷಿಣ-ಕುಂಕುಮವಿದ್ದಂತೆ ಎಂದರು.

ಅಭಿಮಾನ ಶೂನ್ಯರು:ಕನ್ನಡ ಭಾಷೆ, ಘನತೆ ಬಗ್ಗೆ ನಾವೆಲ್ಲರೂ ಅಭಿಮಾನ ಶೂನ್ಯರಾಗಿದ್ದೇವೆ. ಹೊರ ರಾಜ್ಯಗಳಲ್ಲಿ ಆಯಾ ಭಾಷೆಗಳ ಬಗ್ಗೆ ಅಲ್ಲಿನ ಜನರು ಅಭಿಮಾನ ಹೊಂದಿದ್ದಾರೆ. ಅಂತಹ ಅಭಿಮಾನ ಕರ್ನಾಟಕದಲ್ಲಿ ಕಾಣುವುದಿಲ್ಲ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಬಹುತೇಕ ನಾಮಫಲಕಗಳು ಆಂಗ್ಲ ಭಾಷೆ ಯಲ್ಲಿವೆ. ಕನ್ನಡ ಭಾಷೆಯನ್ನು 2ನೇ ದರ್ಜೆ ಭಾಷೆಯಾಗಿ ನೋಡಲಾಗುತ್ತಿದೆ. ಭಾಷೆ ಕುರಿತು ನಮ್ಮಲ್ಲಿ ಸ್ವಾಭಿಮಾನ ಬರಬೇಕಿದೆ. ದೇಶದಲ್ಲೇ ಕನ್ನಡ ಅಗ್ರಗಣ್ಯ ಭಾಷೆಯಾಗಬೇಕು. ಸರ್ಕಾರಿ ಕಚೇರಿಗಳಲ್ಲಿ ನಾವೆಲ್ಲರೂ ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡಕ್ಕಾಗಿ ದುಡಿಯುವವರಿಗೆ ಬೆಂಬಲ ನೀಡೋಣ ಎಂದರು.

ವಿದ್ಯಾಕಾಶಿ ಧಾರವಾಡದಲ್ಲಿ ಜನವರಿಯಲ್ಲಿ ನಡೆಯುವ ರಾಜ್ಯ ಸಾಹಿತ್ಯ ಸಮ್ಮೇಳನಕ್ಕೆ 18 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದೇ ರೀತಿ ಎರಡು ಸಮ್ಮೇಳನಕ್ಕೆ ವೆಚ್ಚವಾಗುವ ಅಂದಾಜು 36 ಕೋಟಿ ರೂ. ಯನ್ನು ಠೇವಣಿ ಮಾಡಿದರೆ ಈ ಠೇವಣಿ ಹಣದಿಂದ ಬರುವ ಬಡ್ಡಿಯಿಂದಲೇ ನಿರಂತರವಾಗಿ ಸಮ್ಮೇಳನಗಳನ್ನು ನಡೆಸಬಹುದು.

| ಎಂ.ಎಸ್. ಸಿಂಧೂರ ಸಮ್ಮೇಳನ ಸರ್ವಾಧ್ಯಕ್ಷ

ಸಾಹಿತ್ಯ ಸಮ್ಮೇಳನ ಹಾಗೂ ಧಾರ್ವಿುಕ ಸಮ್ಮೇಳನ ಬೇರೆ. ಎರಡಕ್ಕೂ ಅಂತರವಿದೆ. ಪುಸ್ತಕ ಹಂಚುವುದು ಮುಖ್ಯವಲ್ಲ, ಅದನ್ನು ಓದುವಂತೆ ಮಾಡುವುದು ಮುಖ್ಯ. ಪುಸ್ತಕ ಓದುವುದರಿಂದ ಜನರು ವಿಚಾರವಂತರಾಗುತ್ತಾರೆ. ಒಳ್ಳೆಯದು ಕೆಟ್ಟದ್ದರ ಬಗ್ಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಅವರಲ್ಲಿ ಬರುತ್ತದೆ.

| ಅಬ್ಬಾಸ ಮೇಲಿನಮನಿ

- Advertisement -

Stay connected

278,584FansLike
571FollowersFollow
609,000SubscribersSubscribe

ವಿಡಿಯೋ ನ್ಯೂಸ್

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...