ಬಾಲಿವುಡ್​ನಲ್ಲಿ ಕನ್ನಡತಿಯ ಬಯೋಪಿಕ್?

ಬೆಂಗಳೂರು: ಬಾಲಿವುಡ್​ನಲ್ಲಿ ಈಗಾಗಲೇ ಹತ್ತಾರು ಬಯೋಪಿಕ್​ಗಳು ನಿರ್ವಣವಾಗಿವೆ, ಈಗಲೂ ಆಗುತ್ತಿವೆ. ಆ ಸಾಲಿಗೆ ಇದೀಗ ಹೊಸ ಸೇರ್ಪಡೆ ಶಕುಂತಲಾ ದೇವಿ ಕಥೆ. ಹೌದು, ‘ಹ್ಯೂಮನ್ ಕಂಪ್ಯೂಟರ್’ ಎಂದೇ ಖ್ಯಾತಿ ಗಿಟ್ಟಿಸಿಕೊಂಡಿದ್ದ ಕರ್ನಾಟಕದ ಶಕುಂತಲಾ ದೇವಿ ಕುರಿತ ಸಿನಿಮಾ ಬಾಲಿವುಡ್​ನಲ್ಲಿ ನಿರ್ವಣವಾಗುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಸಿಲ್ಕ್ ಸ್ಮಿತಾ ಕುರಿತ ‘ಡರ್ಟಿ ಪಿಕ್ಚರ್’ ಸಿನಿಮಾ ಮಾಡಿದ್ದ ನಟಿ ವಿದ್ಯಾ ಬಾಲನ್, ಶಕುಂತಲಾ ದೇವಿ ಪಾತ್ರ ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರದ ಎಳೆಯನ್ನು ವಿದ್ಯಾಗೆ ನಿರ್ದೇಶಕಿ ಅನು ಮೆನನ್ ಹೇಳಿದ್ದು, ಅವರಿಂದ ಪಾಸಿಟಿವ್ ಪ್ರತಿಕ್ರಿಯೆ ಸಹ ಸಿಕ್ಕಿದೆ. ‘ಕಹಾನಿ’, ‘ತುಮ್ಹಾರಿ ಸುಲು’ ರೀತಿಯ ಮಹಿಳಾ ಪ್ರಧಾನ ಸಿನಿಮಾಗಳಿಂದಲೇ ಖ್ಯಾತಿ ಗಿಟ್ಟಿಸಿಕೊಂಡಿರುವ ವಿದ್ಯಾ, ಇದೀಗ ‘ಹ್ಯೂಮನ್ ಕಂಪ್ಯೂಟರ್’ ಆಗುವ ಕಾಲ ಸನ್ನಿಹಿತವಾಗಿದೆ. ಕರ್ನಾಟಕ ಮೂಲದ ಶಕುಂತಲಾ ದೇವಿ, ಓರ್ವ ಗಣಿತ ಶಾಸ್ತ್ರಜ್ಞೆ, ಅಗಾಧ ಜ್ಞಾಪಕ ಶಕ್ತಿಯಿಂದಲೇ ‘ಹ್ಯೂಮನ್ ಕಂಪ್ಯೂಟರ್’ ಎಂಬ ಬಿರುದು ಗಿಟ್ಟಿಸಿಕೊಂಡಿದ್ದರು.