ರಜಿನಿಗೆ ಚೇತನ್​ ಆ್ಯಕ್ಷನ್;​ “ಜೈಲರ್​ 2′ ಟೀಸರ್​ಗೆ ಕನ್ನಡಿಗನ ಸಾಹಸ ನಿರ್ದೇಶನ

blank

| ಹರ್ಷವರ್ಧನ್​ ಬ್ಯಾಡನೂರು

ರಜಿನಿಕಾಂತ್​ ನಟಿಸಿರುವ, ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಹಿಟ್​ ಸಿನಿಮಾ “ಜೈಲರ್​’. ಇತ್ತೀಚೆಗಷ್ಟೆ ಟೀಸರ್​ ಮೂಲಕ “ಜೈಲರ್​ 2′ ಘೋಷಿಸಲಾಗಿದ್ದು, ಅದ್ಭುತ ಆ್ಯಕ್ಷನ್​ ಸನ್ನಿವೇಶಗಳಿರುವ ಟೀಸರ್​ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಶೇಷ ಅಂದರೆ ಈ ಟೀಸರ್​ನ ಸಾಹಸ ದೃಶ್ಯಗಳನ್ನು ಕನ್ನಡದ “ಜೇಮ್ಸ್​’, ಬಘೀರ, ಭೈರತಿ ರಣಗಲ್​, “ಯುಐ’, “ಮ್ಯಾಕ್ಸ್​’ ಜತೆಗೆ ಮಲಯಾಳಂನ “ಧೂಮಂ’, “ಆವೇಷಂ’ ಸಿನಿಮಾಗಳಿಗೆ ಸಾಹಸ ಸಂಯೋಜಿಸಿರುವ ಕನ್ನಡದ ಆ್ಯಕ್ಷನ್​ ಡೈರೆಕ್ಟರ್​ ಚೇತನ್​ ಡಿಸೋಜಾ ಸಂಯೋಜಿಸಿದ್ದಾರೆ. “ಜೈಲರ್​ 2′ ಬಗ್ಗೆ ಅವರು, “”ಆವೇಷಂ’ ಆ್ಯಕ್ಷನ್​ ನೋಡಿ, ನಿರ್ದೇಶಕ ನೆಲ್ಸನ್​ ತಂಡದವರು ಸಂಪರ್ಕಿಸಿದ್ದರು. ಹೈದರಾಬಾದ್​ನಲ್ಲಿ ನೆಲ್ಸನ್​ರನ್ನು ಭೇಟಿಯಾದೆ. ಅವರು ಟೀಸರ್​ ಬಗ್ಗೆ ತಿಳಿಸಿದರು. ನಮ್ಮ ಹುಡುಗರು ನರ್ವಸ್​ ಆಗಬಹುದು ಅಂತ ರಜಿನಿ ಸರ್​ ಸಿನಿಮಾ ಟೀಸರ್​ ಅಂತ ಹೇಳಿರಲಿಲ್ಲ. ಲೊಕೇಷನ್​ನಲ್ಲಿ ರಿಹರ್ಸಲ್​ಗೆ ಹೋದಾಗ ಅವರ ಸಿನಿಮಾ ಅಂತ ಗೊತ್ತಾಗಿ ಎಲ್ಲರೂ ತುಂಬ ಎಕ್ಸೈಟ್​ ಆದರು. ಮುಂಬೈ, ಬೆಂಗಳೂರು, ಚೆನ್ನೈನ 50 ಜನರ ತಂಡ ಅಲ್ಲಿಗೆ ತೆರಳಿದ್ದೆವು. ಒಂದು ದಿನ ರಿಹರ್ಸಲ್ಸ್​ ನಡೆಸಿ, ಮೂರು ದಿನಗಳ ಕಾಲ ಟೀಸರ್​ ಶೂಟಿಂಗ್​ ಮಾಡಿದೆವು’ ಎಂದು ಮಾಹಿತಿ ನೀಡುತ್ತಾರೆ.

ಟೀಸರ್​ಗೆ ಸಿನಿಮಾ ಖರ್ಚು!

ರಜಿನಿಗೆ ಚೇತನ್​ ಆ್ಯಕ್ಷನ್;​ "ಜೈಲರ್​ 2' ಟೀಸರ್​ಗೆ ಕನ್ನಡಿಗನ ಸಾಹಸ ನಿರ್ದೇಶನ
“ಕೇವಲ ಮೂರು ದಿನ ಚಿತ್ರೀಕರಣ ನಡೆಸಿದರೂ, ಅತ್ಯಾಧುನಿಕ ಕ್ಯಾಮರಾ ಮತ್ತು ತಂತ್ರಜ್ಞಾನ, ಸೆಟ್​, ಅನುಭವಿ ತಂಡ ಸೇರಿದ್ದ ಕಾರಣ, ಟೀಸರ್​ ಬಜೆಟ್​ ಕೂಡ ಅದ್ದೂರಿಯಾಗಿತ್ತು’ ಎನ್ನುವ ಚೇತನ್​, “ಬಹುಶಃ ಒಂದು ಸಿನಿಮಾ ಬಜೆಟ್​ನಲ್ಲಿ ಟೀಸರ್​ ಚಿತ್ರೀಕರಿಸಿದ್ದೇವೆ. ಕೊನೆಯ ಶಾಟ್​ಅನ್ನು ಮೂರು ಫ್ಯಾಂಟಮ್​ ಕ್ಯಾಮರಾ ಮತ್ತು ಒಂದು ರೋಬೋಟಿಕ್​ ಕ್ಯಾಮರಾ ಬಳಸಿ ಶೂಟಿಂಗ್​ ನಡೆಸಿದೆವು’ ಎಂದು ಹೇಳಿಕೊಳ್ಳುತ್ತಾರೆ.

ಕನ್ನಡಿಗರ ಮೇಲೆ ರಜಿನಿ ಒಲವು:

ರಜಿನಿಗೆ ಚೇತನ್​ ಆ್ಯಕ್ಷನ್;​ "ಜೈಲರ್​ 2' ಟೀಸರ್​ಗೆ ಕನ್ನಡಿಗನ ಸಾಹಸ ನಿರ್ದೇಶನ
ರಜಿನಿಕಾಂತ್​ ಜತೆ ಕೆಲಸ ಮಾಡಿದ ಅನುಭವ ಹಂಚಿಕೊಳ್ಳುವ ಚೇತನ್​, “ಅವರು ಹೊರಗೆ ಮಾತ್ರ ಸೂಪರ್​ಸ್ಟಾರ್​. ಹತ್ತಿರದಿಂದ ನೋಡಿದರೆ ಅವರೊಬ್ಬ ಸರಳ ವ್ಯಕ್ತಿ ಅಂತ ಗೊತ್ತಾಗುತ್ತದೆ. ಎಲ್ಲರನ್ನೂ ಗೌರವದಿಂದ ಕಾಣುತ್ತಾರೆ. ನಾನು ಕನ್ನಡಿಗ, ಮಂಗಳೂರಿನವನು ಅಂತ ಗೊತ್ತಾಗಿ ಖುಷಿಯಿಂದ ಓಹ್​ ಐಶ್ವರ್ಯಾ ರೈ ಊರಿನವರಾ ಅಂತ ಕನ್ನಡದಲ್ಲೇ ಮಾತನಾಡಿಸಿದರು’ ಎನ್ನುತ್ತಾರೆ. ಹಾಗೇ ಟೀಸರ್​ನಲ್ಲಿ ರಜಿನಿ ಬದಲಿಗೆ ಡ್ಯೂಪ್​ ಬಳಸಿದ್ದಾರೆ ಎಂಬ ಗಾಳಿಸುದ್ದಿಗೆ ಬ್ರೇಕ್​ ಹಾಕುವ ಅವರು, “ನಾವೆಲ್ಲೂ ಡ್ಯೂಪ್​ ಬಳಸಿಲ್ಲ. ಪ್ರತಿಯೊಂದು ಶಾಟ್​ನಲ್ಲೂ ರಜಿನಿ ಸರ್​ ಇದ್ದಾರೆ. ಹಾಗೇ ವಿಎಫ್​ಎಕ್ಸ್​ ಬಳಸದೇ ಎಲ್ಲವನ್ನೂ ನೈಜವಾಗಿ ಚಿತ್ರೀಕರಿಸಿದ್ದೇವೆ’ ಎಂದು ಸ್ಪಷ್ಟನೆ ನೀಡುತ್ತಾರೆ.

ಮುನ್ನೆಚ್ಚರಿಕೆ ಮುಖ್ಯ:

ರಜಿನಿಗೆ ಚೇತನ್​ ಆ್ಯಕ್ಷನ್;​ "ಜೈಲರ್​ 2' ಟೀಸರ್​ಗೆ ಕನ್ನಡಿಗನ ಸಾಹಸ ನಿರ್ದೇಶನ

ಸಾಹಸ ಸನ್ನಿವೇಶಗಳ ಚಿತ್ರೀಕರಣದ ವೇಳೆ ಸ್ವಲ್ಪ ಹೆಚ್ಚು-ಕಡಿಮೆಯಾದರೂ ಸಾಹಸ ಕಲಾವಿದರ ಜೀವಕ್ಕೆ ಕುತ್ತು ಬರುವ ಸಾಧ್ಯತೆಗಳಿರುತ್ತವೆ. ಹೀಗಾಗಿ “ಸಾಹಸ ನಿರ್ದೇಶಕರು ತುಂಬ ಎಚ್ಚರಿಕೆಯಿಂದ  ಫೈಟ್ಸ್​ ಪ್ಲ್ಯಾನ್​ ಮಾಡಬೇಕಾಗುತ್ತದೆ’ ಎನ್ನುವ ಚೇತನ್​, “ಅದೇ ಕಿಕ್​, ಫೈಟ್​​, ಸ್ಟಂಟ್​ಗಳಿರುತ್ತವೆ. ಆದರೆ, ಅದನ್ನು ನಾವು ತೋರಿಸುವ ರೀತಿ ವಿಭಿನ್ನವಾಗಿರುತ್ತದೆ. ಸಾಹಸ ನಿರ್ದೇಶನ ದೊಡ್ಡ ಜವಾಬ್ದಾರಿ. ರೋಪ್​ ಸ್ಟಂಟ್​, ಫೈರ್​​, ವಾಹನಗಳಲ್ಲಿ ಚೇಸ್​, ಬ್ಲಾಸ್ಟ್​ ಅಂತ ಸಾಕಷ್ಟು ಡೇಂಜರಸ್​ ಸ್ಟಂಟ್ಸ್​ ಇರುತ್ತವೆ. ಹೀಗಾಗಿ ತುಂಬ ಮುನ್ನೆಚ್ಚರಿಕೆ ವಹಿಸಬೇಕು. ಅತ್ಯುತ್ತಮ ಗುಣಮಟ್ಟದ ಹಾರ್ನೆಸ್​, ರೋಪ್​ ಬಳಸಬೇಕು. ಒಂದು ಸನ್ನಿವೇಶದಲ್ಲಿ ಒಬ್ಬರ ಜೀವ ಪಣಕ್ಕಿದೆ ಎಂದ ಮೇಲೆ, ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ನಾನು ಸಾಫ್ಟ್​ವೇರ್​​ ಡೆವೆಲಪರ್​ ಆಗಿದ್ದ ಕಾರಣ ನೂತನ ತಂತ್ರಜ್ಞಾನಗಳನ್ನು ಗಮನಿಸುತ್ತಿರುತ್ತೇನೆ. ಅದಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತೇನೆ’ ಎಂದು ಮಾಹಿತಿ ನೀಡುತ್ತಾರೆ.

ಮುಂದಿನ ಸಿನಿಮಾಗಳು:

ರಜಿನಿಗೆ ಚೇತನ್​ ಆ್ಯಕ್ಷನ್;​ "ಜೈಲರ್​ 2' ಟೀಸರ್​ಗೆ ಕನ್ನಡಿಗನ ಸಾಹಸ ನಿರ್ದೇಶನ
ಚೇತನ್​ ಡಿಸೋಜಾ ಸದ್ಯ ಕನ್ನಡದಲ್ಲಿ ಶಿವಣ್ಣ ನಟಿಸುತ್ತಿರುವ 131ನೇ ಚಿತ್ರ, ಶ್ರೀಮುರಳಿ ನಾಯಕನಾಗಿರುವ “ಪರಾಕ್​’, ತೆಲುಗಿನ ವಿಜಯ್​ ದೇವರಕೊಂಡ ನಾಯಕನಾಗಿರುವ 12ನೇ ಸಿನಿಮಾ, ಸಾಯಿ ದುರ್ಗಾ ತೇಜ್​ ನಟಿಸುತ್ತಿರುವ “ಸಂಬರಾಲ ಯೇತಿ ಗಟ್ಟು’ ಸೇರಿ ಹಲವು ಸಿನಿಮಾಗಳ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ.

Share This Article

ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan

Gold Loan: ಸಂಸ್ಥೆ ಕೊಡುತ್ತಿರುವ ಸಂಬಳ ನಮಗೆ ಮಾತ್ರವಲ್ಲ, ನಮ್ಮ ಸಾಲ ತೀರಿಸಲು ಸಹ ಸಾಲುತ್ತಿಲ್ಲ…

ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯೇ ಹೆಚ್ಚು: ಶೇ. 56 ರೋಗಗಳಿಗೆ ಕೆಟ್ಟ ಆಹಾರ ಪದ್ಧತಿ ಕಾರಣವೆಂದ ಏಮ್ಸ್! Indians Food

Indians Food : ಭಾರತದಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆ ಇಂದು ಸಾಮಾನ್ಯ ಹಾಗೂ ಸಂಕೀರ್ಣ ಕಾಯಿಲೆಗಳಲ್ಲಿ…

ನೀವು ಚಿಕನ್ ಅಥವಾ ಮಟನ್​ ಲಿವರ್​ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver

Liver : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು…