25.3 C
Bangalore
Friday, December 13, 2019

ರೈಲ್ವೆ ಜಂಕ್ಷನ್‌ಗೆ ಸ್ಥಳ ಗುರುತು

Latest News

ಸಾಲಿಗ್ರಾಮದಲ್ಲಿ ಕೋಮು ಗಲಾಟೆ ಸಂಬಂಧ ಮಾಜಿ ಸಚಿವ ಸಾ.ರಾ.ಮಹೇಶ್​ ಸಹೋದರನ ವಿರುದ್ಧ ಎಫ್​ಐಆರ್​

ಮೈಸೂರು: ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ನಡೆದ ಕೋಮು ಗಲಾಟೆ ಸಂಬಂಧ ಮಾಜಿ ಸಚಿವ ಸಾ.ರಾ.ಮಹೇಶ್​ ಅವರ ಸಹೋದರ ಸಾ.ರಾ.ರಘು ಅವರ ಮೇಲೆ ಎಫ್​ಐಆರ್​...

ಪೌರತ್ವ ತಿದ್ದುಪಡಿ ಮಸೂದೆ ಸಿಂಧುತ್ವ ಪ್ರಶ್ನಿಸಿ ತ್ವರಿತ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದ ಟಿಎಂಸಿ ಸಂಸದೆಗೆ ಸುಪ್ರೀಂಕೋರ್ಟ್​ನಲ್ಲಿ ಹಿನ್ನೆಡೆ!

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯ ಸಿಂಧುತ್ವವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್​ ಪಕ್ಷದ ಸಂಸದೆ ಮೋಹುವಾ ಮೊಯಿತ್ರಾ...

ಜೀತ ವಿಮುಕ್ತರಿಗೆ ಬಂಧಮುಕ್ತ ಪ್ರಮಾಣಪತ್ರ ವಿತರಿಸಿದ ಎಸಿ ನವೀನ್ ಭಟ್

ಹೊಳೆನರಸೀಪುರ: ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಸಂಜೆ ಜೀತ ಮುಕ್ತ ಗೊಳಿಸಿದ 6 ಜನರಿಗೆ ಬಂಧಮುಕ್ತ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ನವೀನ್ ಭಟ್ ವಿತರಿಸಿದರು. ನಂತರ...

ಹಾಸನದವರಷ್ಟು ಬುದ್ಧಿ ನನಗೆ ಕೊಡಪ್ಪ ಅಂತ ದೇವರಲ್ಲಿ ಕೇಳುತ್ತೇನೆ ಅಂದ್ರು ಸಚಿವ ಜೆ.ಸಿ.ಮಾಧುಸ್ವಾಮಿ

ಚನ್ನರಾಯಪಟ್ಟಣ: ತಾಲೂಕಿನ ಏತನೀರಾವರಿ ಯೋಜನೆಯಲ್ಲಿ ಜಮೀನು ಕಳೆದುಕೊಂಡಿರುವವರ ಪರಿಹಾರಕ್ಕೆ ಸುಮಾರು 200 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದರು. ತಾಲೂಕಿನ...

ಪತ್ನಿಗೆ ಈರುಳ್ಳಿ ಕಿವಿಯೋಲೆ ತಂದುಕೊಟ್ಟ ಪ್ರಖ್ಯಾತ ನಟನ್ಯಾರು: ಕಾಮಿಡಿಯಾದ್ರೂ ಇದರಲ್ಲಿದೆ ಮನಮುಟ್ಟುವ ಸಂದೇಶ!

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪತ್ನಿ ಟ್ವಿಂಕಲ್​ ಖನ್ನಾ ದೇಶದಲ್ಲಿ ಏನೇ ಬೆಳವಣಿಗೆಯಾದರೂ ಜಾಲತಾಣದಲ್ಲಿ ಪ್ರತಿಕ್ರಿಯೆ...

ಶ್ರವಣ್‌ಕುಮಾರ್ ನಾಳ ಪುತ್ತೂರು

ಬಹುನೀರಿಕ್ಷಿತ ಕಾಞಂಗಾಡ್ -ಕಾಣಿಯೂರು ಹೊಸ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಮತ್ತೆ ಜೀವ ಪಡೆದಿದೆ. ಡಿ.ವಿ. ಸದಾನಂದ ಗೌಡ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಈ ಯೋಜನೆಯ ಸರ್ವೇಗೆ ಅನುದಾನ ಮಂಜೂರಾಗಿದ್ದರೂ ನನೆಗುದಿಗೆ ಬಿದ್ದಿತ್ತು. ಕೆಲವು ದಿನಗಳ ಹಿಂದೆ ರೈಲ್ವೆ ಇಲಾಖೆ ಕಾಣಿಯೂರು ರೈಲ್ವೆ ಜಂಕ್ಷನ್‌ಗಾಗಿ ಏಲ್ಯಡ್ಕದಲ್ಲಿ ನಿವೇಶನ ಗುರುತಿಸಿರುವುದು ನೂತನ ರೈಲು ಮಾರ್ಗ ಯೋಜನೆ ಮರುಜೀವ ಪಡೆದಿದೆ.

ಕಾಣಿಯೂರು-ಕಾಞಂಗಾಡ್ ಹೊಸ ರೈಲು ಮಾರ್ಗ ಯೋಜನೆ ದಶಕಗಳಿಂದ ನನೆಗುದಿಗೆ ಬಿದ್ದಿದೆ. ಕೇರಳ ಭಾಗದಿಂದ ಈ ಯೋಜನೆಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದ್ದು, ಕಾಸರಗೋಡು ಜಿಲ್ಲೆಯಿಂದ ಕರ್ನಾಟಕದ ಹಾಸನ, ಬೆಂಗಳೂರು ನಗರಗಳನ್ನು ಸಂಪರ್ಕಿಸಲು ಇದು ಹತ್ತಿರದ ರೈಲು ಮಾರ್ಗ. ಈ ರೈಲು ಮಾರ್ಗ ರಚನೆಯಾದರೆ ಸುಳ್ಯ ಮೂಲಕ ರೈಲು ಮಾರ್ಗ ಹಾದು ಹೋಗಲಿದ್ದು, ಭವಿಷ್ಯದಲ್ಲಿ ಸುಳ್ಯ ಜಿಲ್ಲೆಯ ಪ್ರಮುಖ ಕೇಂದ್ರವಾಗಲಿದೆ.

ಕಾಣಿಯೂರು ಬ್ರೇಕ್‌ಹಾಲ್ಟ್ ರೈಲ್ವೆ ನಿಲ್ದಾಣ
ಮಂಗಳೂರು-ಹಾಸನ ರೈಲು ಮಾರ್ಗ ನಿರ್ಮಾಣ ಸಂದರ್ಭ ಉಡುಪಿಯ ಅಷ್ಟಮಠಗಳಲ್ಲೊಂದಾದ ಕಾಣಿಯೂರು ಮಠದ ಮೂಲ ಮಠವಿರುವ ಕಾಣಿಯೂರಿನಲ್ಲಿ ಬ್ರೇಕ್‌ಹಾಲ್ಟ್ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲಾಯಿತು. ಅಂದಿನ ಕಾಂಗ್ರೆಸ್ ನಾಯಕರೊಬ್ಬರ ಪ್ರಯತ್ನದ ಫಲದಿಂದ ಈ ಕೆಲಸ ವೇಗವಾಗಿ ಪೂರ್ಣಗೊಂಡಿತ್ತು. ಈಗಲೂ ಬ್ರೇಕ್‌ಹಾಲ್ಟ್ ನಿಲ್ದಾಣವಾಗಿಯೇ ಕಾಣಿಯೂರು ರೈಲ್ವೆ ನಿಲ್ದಾಣವಿದೆ. ರೈಲ್ವೆ ಸಂಪರ್ಕ ವ್ಯವಸ್ಥೆಯಲ್ಲಿ ಕಾಣಿಯೂರು ಅಭಿವೃದ್ಧಿ ಹೊಂದಲು ಇರುವ ಏಕೈಕ ಮಾರ್ಗವೆಂದರೆ ಕಾಞಂಗಾಡ್ -ಕಾಣಿಯೂರು ಹೊಸ ರೈಲು ಮಾರ್ಗ ರಚನೆ.

ನಿವೇಶನ ಗುರುತು
ಕಾಞಂಗಾಡ್ -ಕಾಣಿಯೂರು ಹೊಸ ರೈಲು ಮಾರ್ಗ ರಚನೆಯಾದರೆ ಕಾಣಿಯೂರು ಹೊಸ ರೈಲ್ವೆ ಜಂಕ್ಷನ್ ಆಗಿ ರೂಪುಗೊಳ್ಳುತ್ತದೆ. ಮಂಗಳೂರು-ಹಾಸನ ಮತ್ತು ಕಾಞಂಗಾಡ್-ಕಾಣಿಯೂರು ರೈಲು ಮಾರ್ಗ ಕಾಣಿಯೂರಿನಲ್ಲಿ ಸಂಧಿಸುವುದರಿಂದ ಮಂಗಳೂರಿನಂತೆ ಕಾಣಿಯೂರು ರೈಲ್ವೆ ನಿಲ್ದಾಣ ಹೆಚ್ಚು ಜನಸಂಪರ್ಕಕ್ಕೆ ಬರಲಿದೆ. ಉದ್ದೇಶಿತ ರೈಲು ಮಾರ್ಗದ ಯೋಜನೆಗಾಗಿ ಕಾಣಿಯೂರಿನ ಏಲ್ಯಡ್ಕದಲ್ಲಿ ರೈಲ್ವೆ ಇಲಾಖೆ ಈಗಾಗಲೇ ನಿವೇಶನ ಗುರುತಿಸಿದೆ. ಕಾಣಿಯೂರು ನಿಲ್ದಾಣ ಈಗ ಇರುವ ಸ್ಥಳದಿಂದ ಎರಡು ಕಿ.ಮೀ. ಮುಂದಕ್ಕೆ ನಿರ್ಮಾಣವಾಗುವ ಕಾಣಿಯೂರು ಜಂಕ್ಷನ್‌ಗೆ ಸ್ಥಳಾಂತರಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ.

ಕಾಣಿಯೂರು ಬ್ರೇಕ್‌ಹಾಲ್ಟ್ ನಿಲ್ದಾಣ ಕಾಣಿಯೂರು ಪೇಟೆಯ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಈ ಹಿಂದೆ ದೂರ ಪ್ರಯಾಣದ ರೈಲುಗಳು ಕಾಣಿಯೂರಿನಲ್ಲಿ ನಿಲುಗಡೆಗೊಳ್ಳುತ್ತಿದ್ದವು. ಗೇಜ್ ಪರಿವರ್ತನೆ ಬಳಿಕ ಕಾಣಿಯೂರು ಬ್ರೇಕ್‌ಹಾಲ್ಟ್ ನಿಲ್ದಾಣದಲ್ಲಿ ಮಂಗಳೂರು-ಸುಬ್ರಹ್ಮಣ್ಯ ರಸ್ತೆ ಲೋಕಲ್ ರೈಲ್ ಮಾತ್ರ ನಿಲುಗಡೆಗೊಳ್ಳುತ್ತವೆ..

ಟಿಕೆಟ್ ಏಜೆಂಟ್ ನೇಮಕ ವಿಳಂಬ
ಕಾಣಿಯೂರು ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕಮಿಷನ್ ಏಜೆಂಟ್ ನೆಲೆಯಲ್ಲಿ ಐದು ವರ್ಷಗಳ ಅವಧಿಗೆ ಏಜೆಂಟರನ್ನು ನೇಮಕಗೊಳಿಸಲಾಗುತ್ತದೆ. ಪ್ರತಿ ಬಾರಿಯೂ ಐದು ವರ್ಷ ಅವಧಿ ಬಳಿಕ ಏಜೆಂಟ್ ನೇಮಕ ವಿಳಂಬವಾಗುತ್ತಿದ್ದು ಈ ಕಾರಣದಿಂದ ಕಾಣಿಯೂರಿನಲ್ಲಿ ಲೋಕಲ್ ರೈಲು ನಿಂತರೂ ಪ್ರಯಾಣಿಕರು ಟಿಕೆಟ್ ಖರೀದಿಸಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹೊಸ ಏಜೆಂಟರ ಅಥವಾ ಹಳೇ ಏಜೆಂಟರನ್ನೇ ಮುಂದುವರಿಸುವ ಪ್ರಕ್ರಿಯೆ ಮುಗಿಯುವವರೆಗೆ ಕಾಣಿಯೂರಿನವರು ಮಂಗಳೂರಿಗೆ ತೆರಳುವುದಾದರೆ ನರಿಮೊಗರು ರೈಲ್ವೆ ನಿಲ್ದಾಣದಲ್ಲಿ ಇಳಿದು ಟಿಕೆಟ್ ಮಾಡಿ ಮತ್ತೆ ಪ್ರಯಾಣ ಮುಂದುವರಿಸಬೇಕಾಗುತ್ತದೆ. ಅದೇ ರೀತಿ ಸುಬ್ರಹ್ಮಣ್ಯ ರಸ್ತೆ ಕಡೆಗೆ ತೆರಳುವುದಾದರೆ ಎಡಮಂಗಲ ನಿಲ್ದಾಣದಲ್ಲಿ ಇಳಿದು ಟಿಕೆಟ್ ಖರೀದಿಸಬೇಕಾಗುತ್ತದೆ.

ಕಾಞಂಗಾಡ್ -ಕಾಣಿಯೂರು ಹೊಸ ರೈಲು ಮಾರ್ಗ ನನ್ನ ಕನಸಿನ ಯೋಜನೆಯಾಗಿದೆ. ಈ ಮೂಲಕ ಕಾಣಿಯೂರು ಹಾಗೂ ಸುಳ್ಯವನ್ನು ಭವಿಷ್ಯದಲ್ಲಿ ಜಿಲ್ಲೆಯ ಪ್ರಮುಖ ಕೇಂದ್ರಗಳಾಗಿ ರೂಪುಗೊಳಿಸುವುದೇ ಇದರ ಉದ್ದೇಶ. ಮುಂದಿನ 2-3 ವರ್ಷದೊಳಗೆ ಈ ನೂತನ ಯೋಜನೆ ಪೂರ್ಣಗೊಳ್ಳಬಹುದು.
ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

Stay connected

278,747FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...