ಹೇಗಿದೆ ಕಂಗುವಾ ಸಿನಿಮಾ? ಚಿತ್ರ ನೋಡಿದವರು ಹೇಳಿದ್ದೇನು? ಇಲ್ಲಿದೆ ನೋಡಿ ಟ್ವಿಟರ್​​ ವಿಮರ್ಶೆ | Kanguva Review

Kanguva Review

Kanguva Review : ಕಾಲಿವುಡ್​ ಸೂಪರ್​ಸ್ಟಾರ್ ಸೂರ್ಯ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ ‘ಕಂಗುವಾ’ ದೇಶಾದ್ಯಂತ ತೆರೆಗೆ ಅಪ್ಪಳಿಸಿದೆ. ಶಿವ ನಿರ್ದೇಶನದ ಈ ಬೃಹತ್ ಆಕ್ಷನ್ ಚಿತ್ರದಲ್ಲಿ ದಿಶಾ ಪಟಾನಿ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಕೆಇ ಜ್ಞಾನವೇಲ್ ರಾಜಾ, ವಂಶಿ ಮತ್ತು ಪ್ರಮೋದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ನಟ ಸೂರ್ಯ ಅವರ ವೃತ್ತಿ ಜೀವನದಲ್ಲಿಯೇ ಅತಿ ಹೆಚ್ಚು ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಇಂದು (ನವೆಂಬರ್ 14) ಪ್ರೇಕ್ಷಕರ ಮುಂದೆ ಬಂದಿದೆ. ತಮಿಳುನಾಡು ಸೇರಿದಂತೆ ಹಲವೆಡೆ ಮೊದಲ ದಿನದ ಫಸ್ಟ್ ಶೋ ಈಗಾಗಲೇ ಮುಗಿದಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ ಕಂಗುವಾ ಸಿನಿಮಾ ಕಥೆ ಏನು? ಸೂರ್ಯ ಖಾತೆಗೆ ಮತ್ತೊಂದು ಭಾರಿ ಹಿಟ್ ಸಿಕ್ಕಿದೆಯೋ? ಇಲ್ಲವೋ? ಎಕ್ಸ್​ (ಈ ಹಿಂದೆ ಟ್ವಿಟರ್​) ವೇದಿಕೆಯಲ್ಲಿ ಸಿನಿಮಾ ಕುರಿತಾದ ಪಾಸಿಟಿವ್​ ಮತ್ತು ನೆಗೆಟಿವ್​ ವಿಷಯಗಳನ್ನು ಚರ್ಚಿಸಲಾಗುತ್ತಿದೆ. ಇದು ಕೇವಲ ನೆಟ್ಟಿಗರ ಅಭಿಪ್ರಾಯವಷ್ಟೇ. ಇಲ್ಲಿ ಉಲ್ಲೇಖಿಸಲಾದ ವಿಷಯಗಳಿಗೆ ವಿಜಯವಾಣಿ ಡಾಟ್​ ನೆಟ್​ ಜವಾಬ್ದಾರರಾಗಿರುವುದಿಲ್ಲ.

ಎಕ್ಸ್​ನಲ್ಲಿ ಕಂಗುವಾ ಚಿತ್ರಕ್ಕೆ ನೆಗೆಟಿವ್​ಗಿಂತ ಪಾಸಿಟಿವ್ ಟಾಕ್ ಹೆಚ್ಚಾಗಿ ಕೇಳಿ ಬರುತ್ತಿವೆ. ಸಿನಿಮಾ ಬ್ಲಾಕ್ ಬಸ್ಟರ್ ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸೂರ್ಯ ನಟನೆ ಚೆನ್ನಾಗಿದೆ ಎನ್ನುತ್ತಿದ್ದಾರೆ ಸಿನಿ ಪ್ರೇಮಿಗಳು. ಸಿನಿಮಾದ ದೃಶ್ಯಗಳು, ಆ್ಯಕ್ಸನ್, ವಿಎಫ್​ಎಕ್ಸ್​​ ಮತ್ತು ಕತೆ ಚೆನ್ನಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಶಿವನ ತೆಕ್ಕೆಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಕೆಲವರು ಇದು ಸರಾಸರಿ ಸಿನಿಮಾ ಎನ್ನುತ್ತಿದ್ದಾರೆ. ವಿಲನ್ ಪಾತ್ರದಲ್ಲಿ ಬಾಬಿ ಡಿಯೋಲ್ ಉತ್ತಮವಾಗಿ ನಟಿಸಿದ್ದಾರೆ ಎಂಬ ಕಾಮೆಂಟ್​ಗಳು ಬರುತ್ತಿವೆ.

ಚಿತ್ರಕಥೆ ಆಕರ್ಷಕವಾಗಿದೆ. ಸೂರ್ಯ ಅವರು ತನ್ನ ಅಭಿನಯದಿಂದಲೇ ಎಲ್ಲರನ್ನು ಸೆಳೆಯುತ್ತಾರೆ. ವಿಲನ್​ ಮತ್ತು ಹೀರೋ ಮುಖಾಮುಖಿ ದೃಶ್ಯಗಳು ಚೆನ್ನಾಗಿವೆ. ಕಂಗುವಾ 2 ಗಾಗಿ ಕಾಯಲು ಸಾಧ್ಯವಿಲ್ಲ. ಬಾಬಿ ಡಿಯೋಲ್ ಎಂದಿನಂತೆ ತಮ್ಮದೇ ಆದ ಅಭಿನಯದಿಂದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದೇವಿಶ್ರೀ ಪ್ರಸಾದ್ ಅವರ ಸಂಗೀತ ಚೆನ್ನಾಗಿದೆ ಎಂದು ನೆಟ್ಟಿಗರೊಬ್ಬರು ಒಬ್ಬರು ಕಂಗುವಾ ಸಿನಿಮಾ 4.25/5 ರೇಟಿಂಗ್ ನೀಡಿದ್ದಾರೆ.

ಕಂಗುವಾ ಒಂದು ಸರಾಸರಿ ಫ್ಯಾಂಟಸಿ ಆ್ಯಕ್ಷನ್ ಚಿತ್ರವಾಗಿದೆ. ಕಥೆ ಚೆನ್ನಾಗಿದ್ದರೂ ತೆರೆಯ ಮೇಲೆ ಪ್ರಭಾವಶಾಲಿಯಾಗಿ ತೋರಿಸಲಾಗಿಲ್ಲ. ಸೂರ್ಯ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಚಿತ್ರದ ಕೆಲವು ದೃಶ್ಯಗಳು ಚೆನ್ನಾಗಿವೆ. ಉಳಿದ ಕಥೆ ಸಾಧಾರಣವಾಗಿದೆ. ಇಲ್ಲಿ ಭಾವನಾತ್ಮಕತೆ ಕಾಣೆಯಾಗಿದೆ. ನಿರ್ದೇಶಕ ಶಿವ ಮೊದಲಾರ್ಧದ ಚಿತ್ರಕಥೆಯನ್ನು ಚೆನ್ನಾಗಿ ಬರೆದಿದ್ದಾರೆ. ಆದರೆ, ದ್ವಿತೀಯಾರ್ಧದಲ್ಲಿ ಎಡವಿದ್ದಾರೆ. ಕೆಲವೆಡೆ ಬಿಜಿಎಂ ಚೆನ್ನಾಗಿದ್ದರೆ ಇನ್ನು ಕೆಲವೆಡೆ ವಿಪರೀತ ಎನಿಸಿತು ಎಂದು ನೆಟ್ಟಿಗರೊಬ್ಬರು ಸಿನಿಮಾಗೆ 2.25 ರೇಟಿಂಗ್ ನೀಡಿದ್ದಾರೆ. (ಏಜೆನ್ಸೀಸ್​)

ಒಬ್ಬ ವ್ಯಕ್ತಿ ಸತ್ತ ನಂತರ ಏನಾಗುತ್ತದೆ? ನರ್ಸ್​ ಹೇಳಿದ ಭಯಾನಕ ಸಂಗತಿ ವೈರಲ್​ | Death

ಖಬರಸ್ತಾನಗಳಿಗೆ ಸರ್ಕಾರಿ ಭೂಮಿ!; 328 ಸ್ಥಳಕ್ಕೆ ಮಂಜೂರಾತಿ, ಕಂದಾಯ ಇಲಾಖೆಗೆ ಸಿಎಸ್ ಸೂಚನೆ

Share This Article

ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information

ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…

ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್​ ಟ್ರಿಕ್​​ | Health Tips

ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…

ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips

ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…