More

    ದೀಪಿಕಾ ಪಡುಕೋಣೆ ಟಿಕ್​ಟಾಕ್​ಗೆ ಕಂಗನಾ ಕೋಪ; ಕ್ಷಮೆ ಕೇಳಲು ಆಗ್ರಹ

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಟಿಕ್​ಟಾಕ್​ಗೆ ಎಂಟ್ರಿ ಕೊಟ್ಟಿದ್ದು, ಒಂದೇ ದಿನದಲ್ಲಿ ಲಕ್ಷಾಂತರ ಫಾಲೋವರ್ಸ್​ಗಳನ್ನು ಹೊಂದಿದ್ದು ಗೊತ್ತಿರುವ ವಿಚಾರ. ಆದರೆ ಇದೇ ಟಿಕ್​ಟಾಕ್ ವಿಚಾರಕ್ಕೆ ದೀಪಿಕಾಗೆ ವಿರೋಧ ವ್ಯಕ್ತವಾಗಿದೆ. ಹೌದು, ಅವರ ಟಿಕ್​ಟಾಕ್ ವಿಡಿಯೋಗಳನ್ನು ನೋಡಿ ನಟಿ ಕಂಗನಾ ರಣಾವತ್ ಗರಂ ಆಗಿದ್ದಾರೆ. ಅಲ್ಲದೆ, ದೀಪಿಕಾ ಪಡುಕೋಣೆ ಕ್ಷಮೆ ಕೇಳಬೇಕು ಎಂದು ಕಂಗನಾ ಆಗ್ರಹಿಸಿದ್ದಾರೆ.

    ದೀಪಿಕಾ ಟಿಕ್​ಟಾಕ್ ವಿಡಿಯೋಗೂ ಕಂಗನಾ ರಣಾವತ್​ಗೂ ಎಲ್ಲಿಯ ಸಂಬಂಧ ಎಂಬ ಪ್ರಶ್ನೆ ಮೂಡುವುದು ಸಹಜ. ಲಕ್ಷ್ಮೀ ಅಗರವಾಲ್ ಮೇಲೆ ಆದ ಆಸಿಡ್ ದಾಳಿ ಕುರಿತ ‘ಚಪಾಕ್’ ಚಿತ್ರದ ಪ್ರಚಾರಕ್ಕಾಗಿ ದೀಪಿಕಾ, ಆ್ಯಸಿಡ್​​​ನಿಂದ ಮುಖ ಸುಟ್ಟಿರುವಂತೆ ಮೇಕಪ್ ಮಾಡಿಕೊಂಡು ಟಿಕ್​ಟಾಕ್ ವಿಡಿಯೋ ಮಾಡಿದ್ದಾರೆ. ಅಲ್ಲದೆ, ಹಲವಾರು ಬಾರಿ ಲಕ್ಷ್ಮೀ ಅಗರ್​ವಾಲ್ ಜತೆ ಸೇರಿ ಟಿಕ್​ಟಾಕ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಇದು ಸಿನಿಮಾ ಪ್ರಚಾರದ ಗಿಮಿಕ್. ಈ ರೀತಿಯ ವಿಡಿಯೋ ನೋಡಿ ನನ್ನ ತಂಗಿ ರಂಗೋಲಿ ಮಾನಸಿಕವಾಗಿ ನೊಂದಿದ್ದಾಳೆ. ಆಕೆಯೂ ಆ್ಯಸಿಡ್ ದಾಳಿಗೆ ಒಳಗಾದವಳು. ಪದೇಪದೆ ಇಂತಹ ವಿಡಿಯೋಗಳಿಂದ ಆಕೆ ಖಿನ್ನತೆಗೆ ಒಳಗಾಗುತ್ತಿದ್ದಾಳೆ. ಅಲ್ಲದೆ, ಆ್ಯಸಿಡ್ ದಾಳಿಗೆ ಒಳಗಾದವರಿಗೂ ದೀಪಿಕಾ ಟಿಕ್​ಟಾಕ್ ವಿಡಿಯೋಗಳು ನೋವು ಉಂಟುಮಾಡಿವೆ. ದೀಪಿಕಾ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಉತ್ತರಿಸಬೇಕು. ಈ ಬಗ್ಗೆ ಅವರು ಕ್ಷಮೆ ಕೇಳಬೇಕು’ ಎಂಬುದಾಗಿ ಕಂಗನಾ ರಣಾವತ್ ಆಗ್ರಹಿಸಿದ್ದಾರೆ.

    ಇತ್ತೀಚೆಗೆ ಜೆಎನ್​ಯುು ಗಲಭೆಯಲ್ಲಿ ಕಾಲೇಜಿಗೆ ಭೇಟಿ ನೀಡಿದ್ದಕ್ಕೆ ದೀಪಿಕಾ ವಿರುದ್ಧ ವಿರೋಧ ವ್ಯಕ್ತವಾಗಿದ್ದವು. ‘ಚಪಾಕ್’ ಸಿನಿಮಾ ಬಹಿಷ್ಕರಿಸುವಂತೆ ಮಾತುಗಳು ಕೇಳಿಬಂದಿದ್ದವು. ಈ ಎಲ್ಲ ಹಿನ್ನೆಲೆಯಲ್ಲಿ ಒಂದೊಳ್ಳೆಯ ಕಥೆ ಹೊಂದಿದ್ದರೂ ‘ಚಪಾಕ್’ ಚಿತ್ರ ಬಾಕ್ಸಾಫೀಸ್​ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts