ವಿರಾಜಪೇಟೆ: ವಿರಾಜಪೇಟೆ ತಾಲೂಕು ಆರ್ಜಿ ಗ್ರಾಮ ಪಂಚಾಯಿತಿ ಪೆರುಂಬಾಡಿ ಗ್ರಾಮದ ಕಂಚಿ ಕಾಮಾಕ್ಷಿ ಅಮ್ಮ ವಾರ್ಷಿಕ ಕರಗ ಮಹೋತ್ಸವ ಮೇ 16 ಮತ್ತು 17 ರಂದು ನಡೆಯಲಿದೆ. 16 ರಂದು ಬೆಳಗ್ಗೆ 6ಗಂಟೆಗೆ ಗಣಪತಿ ಹೋಮ, 10 ಗಂಟೆಗೆ ವಾರ್ಷಿಕ ಪ್ರತಿಷ್ಠಾಪನಾ ಪೂಜೆ ಮತ್ತು ಅಭಿಷೇಕ ಪೂಜೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಕರಗ ಶೃಂಗಾರ ನಡೆದು ವಾದ್ಯ ಮೇಳಗಳೊಂದಿಗೆ ಕರಗ ಆರಾಧನೆ ( ಮನೆ, ಮನೆಗಳಿಗೆ ತೆರಳಿ) ಪೂಜೆಗಳನ್ನು ಪಡೆದು ದೇವಾಲಯಕ್ಕೆ ಆಗಮಿಸಲಿದೆ. ರಾತ್ರಿ 8 ಗಂಟೆಗೆ ದೇವಿಗೆ ಮಹಾಪೂಜೆ ಸಲ್ಲಿಕೆಯಾಗಲಿದ್ದು ನಂತರ ಅನ್ನಸಂತರ್ಪಣೆ ನಡೆಯಲಿದೆ. 17 ರಂದು ಬೆಳಗ್ಗೆ 11 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಲಕ್ಕಿ ಡ್ರಾ, ಅನ್ನಸಂತರ್ಪಣೆ ಸಂಜೆ ಕರಗ ವಿಸರ್ಜನೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ 8762109874 ಮತ್ತು 9535851437 ಸಂಪರ್ಕಿಸುವಂತೆ ಕೋರಿದೆ.
