More

    ಕನಕಾಪುರ ಗ್ರಾಮದಲ್ಲಿ ಸಾಂಕ್ರಾಮಿಕ ಸೋಂಕು

    ಕನಕಗಿರಿ: ಸಮೀಪದ ಕನಕಾಪುರ ಗ್ರಾಮಸ್ಥರು ಒಂದು ತಿಂಗಳಿಂದ ಸಾಂಕ್ರಾಮಿಕ ಸೋಂಕು ಹರಡಿ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತ್ತಿದ್ದು, ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.

    ಗ್ರಾಮದ ಪ್ರತಿ ಮನೆಯಲ್ಲಿ ಒಬ್ಬಿಬ್ಬರು ಹಾಸಿಗೆ ಹಿಡಿದಿದ್ದು, ಕನಕಗಿರಿ, ಗಂಗಾವತಿ, ಕೊಪ್ಪಳ, ತಾವರಗೇರಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಂೆ, ಟೈಫಾಯಿಡ್ ಸೇರಿ ಹಲವು ರೋಗಗಳು ಗ್ರಾಮಸ್ಥರನ್ನು ಬಾಧಿಸುತ್ತಿದ್ದು, ಗ್ರಾಮದಲ್ಲಿರು ಅಸ್ವಚ್ಛತೆ ಕಾರಣ ಎನ್ನಲಾಗುತ್ತಿದೆ. ಶುದ್ಧ್ದ ನೀರಿನ ಘಟಕವಿದ್ದು, ಅದು ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಪೈಪಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ. ಅಶುದ್ಧ ನೀರು ಕುಡಿದಿದ್ದು, ಶಾಲಾ ಮಕ್ಕಳು ಕೂಡ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ಗ್ರಾಮಸ್ಥರಾದ ಕನಕಗೌಡ, ನೇತ್ರಾವತಿ, ಮರಿಯಪ್ಪ, ಬೀರಪ್ಪ, ಮಾರುತಿ, ಹನುಮಮ್ಮ ಮುಂಡರಗಿ, ಯಮನಪ್ಪ, ಕನಕಪ್ಪ ಒತ್ತಾಯಿಸಿದ್ದಾರೆ.

    ಕುಡಿವ ನೀರಿನಿಂದ ಸಾಂಕ್ರಾಮಿಕ ಸೋಂಕು ಹರಡಿದೆ. ಕನಕಾಪುರ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆಯನ್ನು ಕಾಪಾಡುವಂತೆ ಈಗಾಗಲೇ ಗ್ರಾಪಂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಗ್ರಾಮದಲ್ಲಿ ನಾಳೆಯಿಂದ ಆರೋಗ್ಯ ಇಲಾಖೆ ಕ್ಯಾಂಪ್ ಹಾಕಿ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಗುವುದು.
    | ಡಾ.ಪವನಕುಮಾರ ವೈದ್ಯಾಧಿಕಾರಿ ಕನಕಗಿರಿ

    ಈಗಾಗಲೇ ಮುಂಜಾಗೃತ ಕ್ರಮವಾಗಿ ಕನಕಾಪುರ ಗ್ರಾಮದಲ್ಲಿ ಫಾಗಿಂಗ್ ಮಾಡಲಾಗಿದೆ. ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಕ್ಯಾಂಪ್ ನಡೆಸಲು ನಿರ್ಧರಿಸಲಾಗಿದೆ. ಕುಡಿವ ನೀರು ಪರೀಕ್ಷೆಗೆ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗಿದೆ.
    | ರವೀಂದ್ರ ಕುಲಕರ್ಣಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹುಲಿಹೈದರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts