ಕನಕಗಿರಿ: ತಾಲೂಕಿನ ನವಲಿ ಗ್ರಾಮದ ಭೋಗಾಪುರೇಶ ದೇವಸ್ಥಾನದಲ್ಲಿ ಮಂಗಳವಾರ ಶ್ರೀಪಾದ ರಾಯರ ಆರಾಧನೆ ಸಡಗರದಿಂದ ಆಚರಿಸಲಾಯಿತು.
ಹೈದರಾಬಾದ್‌ನ ಪಂ.ಪಾಂಡುರಂಗ ರಾಜ ಪುರೋಹಿತ ಮಾತನಾಡಿ, ಶ್ರೀಪಾದರಾಜರು 64 ಬಗೆಯ ಖಾದ್ಯಗಳನ್ನು ಭಗವಂತನಿಗೆ ನೈವೇದ್ಯ ಅರ್ಪಿಸುತ್ತಿದ್ದರು ಎಂದು ನಂಬಲಾಗಿದೆ. ದಾಸಕೂಟದ ಮೂಲ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಯಾವುದೇ ಸಾಂಪ್ರದಾಯಿಕ ಹರಿಕಥಾ ಪ್ರವಚನದ ಆರಂಭದಲ್ಲಿ ಹಾಡುವ ಈ ಕೆಳಗಿನ ಸ್ತೋತ್ರದಲ್ಲಿ ಅವರ ಹೆಸರು ಮೊದಲ ಸ್ಥಾನದಲ್ಲಿದೆ. ಶ್ರೀ ಪಾದರಾಜರು ರಂಗ ವಿಠಲ ಎಂದು ಅಂಕಿತವಾಗಿಟ್ಟುಕೊಂಡು ಹಾಡುಗಳನ್ನು ರಚಿಸಿದ್ದಾರೆ.
ಚಂದ್ರಗಿರಿಯ ರಾಜ ಚಲುವ ನರಸಿಂಹನು ತನ್ನ ತಪ್ಪು ಕರ್ಮದಿಂದ ದೋಷವನ್ನು ಹೋಗಲಾಡಿಸಲು ಶ್ರೀ ಪಾದರಾಜರ ಬಳಿ ಆಶ್ರಯ ಪಡೆದನು. ಶ್ರೀ ಪಾದರಾಜರು ತಮ್ಮ ತಪಸ್ಸಿನ ಮೂಲಕ ಅವರನ್ನು ರಕ್ಷಿಸಿದರು.
ಶ್ರೀ ಪಾದರಾಯರ ಭಾವಚಿತ್ರವನ್ನು ಭಜನೆಯೊಂದಿಗೆ ಮೆರವಣಿಗೆ ಮಾಡಲಾಯಿತು. ರಾಘವೇಂದ್ರಸ್ವಾಮಿ ಭಜನಾ ಮಂಡಳಿಯವರು ಭಜನಾ ಪದಗಳನ್ನು ಹಾಡಿದರು. ಭೋಗಾಪುರೇಶ ಮುಖ್ಯ ಪ್ರಾಣ ದೇವರಿಗೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ, ಗಂಧ ಲೇಪನ, ಪುಷ್ಪಾರ್ಚನೆ ನೈವೈದ್ಯ ನಡೆಯಿತು.
ಪ್ರಮುಖರಾದ ವೆಂಕಟೇಶ ರಾಜ ಪುರೋಹಿತ, ನರಸಿಂಗ ರಾಜ ಪುರೋಹಿತ, ರಾಮು ಕುರುಬರ, ಸುರೇಶರೆಡ್ಡಿ, ಭೀಮರೆಡ್ಡಿ, ಶ್ರೀನಿವಾಸರೆಡ್ಡಿ, ಪರಂಧಾಮರೆಡ್ಡಿ ಬೀರಳ್ಳಿ, ರಾಮಣ್ಣ ಗುಂಜಳ್ಳಿ, ಮಂಜುನಾಥ ಕಮ್ಮಾರ, ಹನುಮಂತರೆಡ್ಡಿ ಮಹಲಿನಮನಿ, ಭೀಮರಾವ್ ದುಮ್ಮಾಳ ಇತರರಿದ್ದರು.