ಕನಕಗಿರಿ: ವಿಜಯದಾಸರು ದಾಸಸಾಹಿತ್ಯ ಬೆಳವಣಿಗೆಗೆ ಅವಿರತ ಶ್ರಮಿಸಿದ್ದಾರೆ ಎಂದು ಹಿರಿಯ ಭಜನಾ ಕಲಾವಿದ ಪರಂಧಾಮರೆಡ್ಡಿ ಬೀರಳ್ಳಿ ಹೇಳಿದರು.
ಪಟ್ಟಣದ ತೊಂಡಿತೇರಪ್ಪ ದೇವಸ್ಥಾನದಲ್ಲಿ ರಾಘವೇಂದ್ರಸ್ವಾಮಿ ಭಜನಾ ಮಂಡಳಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿಜಯದಾಸರ 269ನೇ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು.
ದೈವತ್ವ ಸಂಪ್ರದಾಯ ವಿದ್ವಾಂಸರಾಗಿದ್ದ ವಿಜಯದಾಸರು, ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಕನ್ನಡ ಭಾಷೆಯಲಿ ್ಲವಿಜಯ ವಿಠ್ಠಲ ಅಂಕಿತದಲ್ಲಿ ನೂರಾರು ಕೀರ್ತನೆ, ಸುಳಾದಿಗಳನ್ನು ರಚಿಸುವ ಮೂಲಕ ದಾಸ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಇಂತಹ ದಾರ್ಶನಿಕ ವಿಚಾರಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ ಎಂದರು.
ದಾಸ ಸಾಹಿತ್ಯ ಬೆಳವಣಿಗೆಗೆ ಶ್ರಮಿಸಿದ ಎಲ್ಲ ದಾಸರ ಆರಾಧನೆಯಲ್ಲಿಯೂ ಹಲವು ವರ್ಷಗಳಿಂದ ಪಾಲ್ಗೊಂಡು ದಾಸರ ಕೀರ್ತನೆಗಳನ್ನು ರಚಿಸುವ ಮೂಲಕ ಕನ್ನಡ ದಾಸ ಪರಂಪರ ಶ್ರೀಮಂತಿಗೆ ವಿಜಯದಾಸರ ಕೊಡುಗೆ ಅಪಾರವಾಗಿದೆ ಎಂದರು. ಪ್ರಮುಖರಾದ ಸುರೇಶರೆಡ್ಡಿ ಮಹಲಿನಮನಿ, ಅಂಬಣ್ಣ ಹೂಗಾರ, ಸಂಗಯ್ಯಸ್ವಾಮಿ ಬಸರಿಹಾಳಮಠ, ಭೀಮರಾವ್ ಮರಾಠಿ, ಪಂಪಾಪತಿ ತುಪ್ಪದ, ಖಲೀಲಸಾಬ್, ವಿನಯ ಪತ್ತಾರ ಇತರರಿದ್ದರು.