ಕನಕಗಿರಿ: ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ನ.18ರಂದು ಆಚರಿಸಲಾಗುವುದು ಎಂದು ತಹಸೀಲ್ದಾರ್ ವಿಶ್ವನಾಥ ಮುರಡಿ ಹೇಳಿದರು.
ತಹಸಿಲ್ ಕಚೇರಿಯಲ್ಲಿ ಮಂಗಳವಾರ ಕನಕದಾಸ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕನಕದಾಸರು ನಾಡಿನ ಹಿರಿಮೆಯನ್ನು ಕೀರ್ತನೆಗಳಲ್ಲಿ ಮಂಡಿಸಿದ್ದಾರೆ. ಸಮಾಜದಲ್ಲಿ ಅಡಗಿದ್ದ ಮೌಢ್ಯ ಕಿತ್ತೆಸೆಯಲು ಹೋರಾಡಿದ ಪರಿ ನಾವೆಲ್ಲರೂ ಮನಗಂಡಿದ್ದೇವೆ. ಇಂತಹ ದಾರ್ಶಕನಿಕರ ಬದುಕು ನಿಜಕ್ಕೂ ಸಾರ್ಥಕ. ದಾಸರ ಹಾದಿಯಲ್ಲಿ ನಡೆಯುವ ಮೂಲಕ ಜೀವನವನ್ನು ಸಾರ್ಥಕವಾಗಿಸಿಕೊಳ್ಳೋಣ ಎಂದರು.
ಜಿಲ್ಲಾ ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ ಮಾತನಾಡಿ, ಕನಕದಾಸರ ವಿಚಾರಗಳು ಎಲ್ಲ ವರ್ಗಕ್ಕೂ ಆದರ್ಶಪ್ರಾಯವಾಗಿವೆ. ಯುವಕರು ದುಶ್ಚಟಗಳಿಂದ ದೂರವಾಗಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.
ಸಿಡಿಪಿಒ ವಿರೂಪಾಕ್ಷ, ಉಪ ಖಜಾನಾಧಿಕಾರಿ ದುರ್ಗಾಸಿಂಗ್, ಶಿಕ್ಷಣ ಸಂಯೋಜಕ ಆಂಜನೇಯಸ್ವಾಮಿ, ಸಂಚಾರಿ ನಿಯಂತ್ರಕ ಬಸವರಾಜ, ಪಶು ವೈದ್ಯ ಲೋಕೇಶ ಬಿರಾದಾರ, ವನ ಪಾಲಕ ಶಿವಕುಮಾರ ವಾಲಿ, ಪ್ರಮುಖರಾದ ಕನಕರಾಯ ಹೊಸಗುಡ್ಡ, ಗಂಗಾಧರ ಚೌಡ್ಕಿ, ಯಮನೂರಪ್ಪ ನಿರ್ಲೂಟಿ, ಬೀರಪ್ಪ ಕರಡೋಣ, ನಾಗರಾಜ, ನಿರುಪಾದೆಪ್ಪ ಗುರುವಿನ್ ಇತರರಿದ್ದರು.