ಕನಕಗಿರಿ: ನಾನಾ ಕಡೆಗಳಲ್ಲಿ ಕಾರ ಹುಣ್ಣಿಮೆ ದಿನದಂದು ಎತ್ತುಗಳನ್ನು ಕರಿ ಹರಿದರೆ ಪಟ್ಟಣದಲ್ಲಿ ಮೂಲಾ ನಕ್ಷತ್ರದಲ್ಲಿ ಗುರುವಾರ ಕರಿ ಹರಿಯಲಾಯಿತು.
ರೈತರು ಎತ್ತುಗಳಿಗೆ ಬಲೂನ್ ಕಟ್ಟಿ, ಕೊಂಬುಗಳಿಗೆ ವಿವಿಧ ಬಣ್ಣಗಳನ್ನು ಹಚ್ಚಿ ಸಿಂಗಾರ ಗೊಳಿಸಿ ರಾಜಬೀದಿಯಲ್ಲಿ ಮೆರವಣಿಗೆ ಮಾಡಿದರು. ಇಲ್ಲಿನ ಅಗಸಿ ಆಂಜನೇಯ ದೇವಸ್ಥಾನ ಹಾಗೂ ಮೇಲುಗಡೆ ಅಗಸೆಯಲ್ಲಿನ ಹನುಮಪ್ಪ ದೇವಸ್ಥಾನದಲ್ಲಿ ಕರಿ ಹರಿಯುವ ಸ್ಪರ್ಧೆ ನಡೆಸಲಾಯಿತು.
20ಕ್ಕೂ ಹೆಚ್ಚು ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆ ಮುಗಿದ ಮೇಲೆ ರೈತರು ತಮ್ಮ ಎತ್ತುಗಳನ್ನು ಹೊಡೆದುಕೊಂಡು ಶ್ರೀ ಕನಕಾಚಲ ಪತಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು.