ಕನಕಗಿರಿ: ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಯ ಹಸ್ತ ಹಾಗೂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ ಮತದಾರರಿಗೆ ಕೊಟ್ಟ ಕೆಲ ಭರವಸೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ ಎಂದರು.
ಚಿರ್ಚನಗುಡ್ಡ ತಾಂಡಾದಿಂದ ವಡಕಿ ಕ್ರಾಸ್ ವರೆಗಿನ ರಸ್ತೆ ಡಾಂಬರೀಕರಣಕ್ಕೆ 4 ಕೋಟಿ ರೂ., ಚಿಕ್ಕಡಂಕನಕಲ್‌ನಿಂದ ಸಿದ್ದಾಪುರದ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ., ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ 20 ಲಕ್ಷ ರೂ., ಶಾಲೆ ಅಭಿವೃದ್ಧಿಗೆ 16 ಲಕ್ಷ ರೂ., ಸಂತ ಸೇವಾಲಾಲ್ ದೇವಸ್ಥಾನ ಜಿರ್ಣೋದ್ಧಾರಕ್ಕೆ 5 ಲಕ್ಷ ರೂ., ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ಟಿ.ರಾಜಶೇಖರ, ಸಿಡಿಪಿಒ ವಿರೂಪಾಕ್ಷ, ಎಇಇ ವೀರೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಪ್ರಮುಖರಾದ ವಿರೂಪಾಕ್ಷ ಆಂಧ್ರ, ಅನಿಲ ಬಿಜ್ಜಳ, ಶಿವನಗೌಡ ವಕೀಲ, ವೆಂಕನಗೌಡ, ಕಾಶಿಮಪ್ಪ ಹಿರೇಡಂಕನಕಲ್, ಮಹದೇವಪ್ಪ, ಮಲ್ಲಿಕಾರ್ಜುನ, ಅಮರೇಗೌಡ ಚಿರ್ಚನಗುಡ್ಡ, ಬಾಲರಾಜ ಇತರರಿದ್ದರು.